ರಿಪ್ಪನ್ ಪೇಟೆ ಸಮೀಪದ ಹಳ್ಳಿ ಹುಡುಗಿ ಈಗ MSIL ರಾಯಭಾರಿ, ಯಾರು ಈಕೆ?

Ripponpete-Poojitha-Brand-Promotor-for-MSIL

SHIVAMOGGA LIVE NEWS | HOSANGARA | 12 ಜುಲೈ 2022 ರಾಜ್ಯ ಹಾಕಿ (HOCKEY) ತಂಡದ ಆಟಗಾರ್ತಿ, ರಿಪ್ಪನ್ ಪೇಟೆ (RIPPONPETE) ಸಮೀಪದ ಬರುವೆ ಗ್ರಾಮದ ಬಿ.ಎನ್.ಪೂಜಿತಾ ಅವರನ್ನು ಮೈಸೂರು ಸೇಲ್ಸ್‌ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ರಾಯಭಾರಿಯನ್ನಾಗಿ (BRAND AMBASSADOR) ನೇಮಕ ಮಾಡಲಾಗಿದೆ. ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಹಾರತಾಳು ಹಾಲಪ್ಪ (HARATALU HALAPPA) ಅವರು ಪೂಜಿತಾಗೆ ರಾಯಭಾರಿ ನೇಮಕಾತಿ ಆದೇಶ ಪ್ರತಿ ಹಾಗೂ 5 ಲಕ್ಷ ರೂ.ನ ಗೌರವಧನದ ಚೆಕ್‌ ವಿತರಿಸಿದರು. ಯಾರಿದು ಪೂಜಿತಾ? ಈ ವೇಳೆ … Read more

ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ, ಓರ್ವ ಸಾವು

Car-Accident-at-Hosanagara-near-Ripponpete.

SHIVAMOGGA LIVE NEWS | HOSANGARA | 11 ಜುಲೈ 2022 ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ (CAR ACCIDENT) ಹೊಡೆದು ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಇವತ್ತು ಬೆಳಗಿನ ಜಾವ ಘಟನೆ ಸಂಭವಿಸಿದೆ. ಹೊಸನಗರ (HOSANAGARA) ಸಮೀಪದ ಗುಡ್ಡೆಕೊಪ್ಪ ಗ್ರಾಮದ ಪ್ರದೀಪ್ (32) ಮೃತ ದುರ್ದೈವಿ. ಸಿದ್ದಪ್ಪನಗುಡಿ ಬಳಿ ಇವತ್ತು ಬೆಳಗಿನ ಜಾವ ಕಾರು, ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ … Read more

ರಸ್ತೆ ಪಕ್ಕದ ಮನೆ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್

100722 Bus Accident Near Mastikatte

SHIVAMOGGA LIVE | HOSANAGARA | 10 JULY 2022 ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ (BUS) ಒಂದು ರಸ್ತೆ ಬದಿಯ ಮನೆ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರಿಗೆ ಯಾವುದೆ ಸಮಸ್ಯೆ ಆಗಿಲ್ಲ. ಹೊಸನಗರ ತಾಲೂಕು ಮಾಸ್ತಿಕಟ್ಟೆ (MASTHIKATTE) ಬಳಿ ಘಟನೆ ಸಂಭವಿಸಿದೆ. ನಡುರಾತ್ರಿ ಖಾಸಗಿ ಬಸ್ ಮನೆ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಖಾಸಗಿ ಬಸ್ ಕುಂದಾಪುರದಿಂದ (KUNDAPURA) ಹೊಸನಗರ ಮಾರ್ಗವಾಗಿ ಬೆಂಗಳೂರಿಗೆ (BANGALORE) ತೆರಳುತ್ತಿತ್ತು. ಮಾಸ್ತಿಕಟ್ಟೆ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ … Read more

BREAKING NEWS | ಭಾರಿ ಮಳೆ, ಮೂರು ತಾಲೂಕಿನ ಶಾಲೆಗಳಿಗೆ ಜು.6ರಂದು ರಜೆ

breaking news graphics

SHIVAMOGGA LIVE | SHIMOGA | 5 ಜುಲೈ 2022 ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ (SCHOOL) ರಜೆ ನೀಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 6ರಂದು ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ALSO READ – ಮುಕ್ಕಾಲು ಮುಳುಗಿದ ರಾಮ ಮಂಟಪ, ಶಿವಮೊಗ್ಗದಲ್ಲೂ ಮಂಟಪದ ಮೇಲ್ಭಾಗದವರೆಗೆ ಬಂತು ನೀರು

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಚುರುಕು, ಯಡೂರು, ಆಗುಂಬೆಯಲ್ಲಿ ಹೆಚ್ಚು, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

Rain-At-Shimoga-City

SHIVAMOGGA LIVE NEWS | SHIMOGA | 4 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನದಿಂದ ಉತ್ತಮ ಮಳೆಯಾಗುತ್ತಿದೆ (RAIN). ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಂಡು ಬಂದಿದೆ. ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ ಮಳೆ ಜೋರು ದಕ್ಷಿಣ ಭಾರತದ ಚಿರಾಪೂಂಜಿ ಎಂಬ ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ (AGUMBE) ಜೋರು ಮಳೆಯಾಗುತ್ತಿದೆ (RAIN). ಜುಲೈ 2ರಂದು ಆಗುಂಬೆಯಲ್ಲಿ 124.50 ಮಿ.ಮೀ … Read more

KSRTC ಬಸ್, ಕ್ಯಾಂಟರ್ ಮುಖಾಮುಖಿ ಡಿಕ್ಕಿ

anter-and-KSRTC-bus-accident-at-Yedur.

SHIVAMOGGA LIVE NEWS | HOSANAGARA | 2 ಜುಲೈ 2022 KSRTC BUS ಮತ್ತು ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಮತ್ತು ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಾಸ್ತಿಕಟ್ಟೆ ಸಮೀಪದ ಯಡೂರು ಗ್ರಾಮದ ಮೇಕೇರಿ ಬಳಿ ಘಟನೆ ಸಂಭವಿಸಿದೆ. ಕುಂದಾಪುರದಿಂದ ಇಟ್ಟಿಗೆ ತುಂಬಿಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ಕ್ಯಾಂಟರ್ ಲಾರಿ ಮತ್ತು ಬೆಂಗಳೂರಿನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಬಸ್ (KSRTC BUS) ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಮತ್ತು ಬಸ್ಸಿನಲ್ಲಿದ್ದ … Read more

ಪಿಂಚಣಿಗಾಗಿ ಕಾದು ಸುಸ್ತಾಗಿ ಬಿದ್ದ ವೃದ್ಧೆ ಮನೆಗೆ ತಹಶೀಲ್ದಾರ್ ಭೇಟಿ, ವಿಎಗೆ ನೊಟೀಸ್ ಜಾರಿ

Pension-letter-to-Sadhamma-in-Nittur.

SHIVAMOGGA LIVE NEWS | HOSANAGARA | 21 ಜೂನ್ 2022 ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಹೊಸನಗರ ತಾಲೂಕು ಹೆಬ್ಬಿಗೆ ಗ್ರಾಮದ ಸಾಧಮ್ಮ ಅವರ ಮನೆಗೆ ತೆರಳಿ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಪಿಂಚಣಿಯ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರ ಸೂಚನೆಯಂತೆ ಫಲಾನುಭವಿಯ ಮನೆಗೆ ತೆರಳಿದ ತಹಶೀಲ್ದಾರ್ ಅವರು, ಪತ್ರವನ್ನು ಹಸ್ತಾಂತರಿಸಿ ಆರೋಗ್ಯ ವಿಚಾರಿಸಿದರು. ವಿಳಂಬ ಮಾಡಿದರೆ ಕ್ರಮ ಸಾಮಾಜಿಕ ಭದ್ರತಾ ಪಿಂಚಣಿ … Read more

ಪಿಂಚಣಿಗಾಗಿ ಕಾದು ಕಾದು ಕಚೇರಿ ಮುಂದೆಯೇ ಕುಸಿದು ಬಿದ್ದ ವೃದ್ಧೆ

Old-Lady-collapse-near-VA-office-at-Nittur

SHIVAMOGGA LIVE NEWS | HOSANAGARA| 20 ಜೂನ್ 2022 ಗ್ರಾಮ ಲೆಕ್ಕಿಗರ ಕಚೇರಿ ಮುಂದೆ ಗಂಟೆಗಟ್ಟಲೆ ಕಾದು ಸುಸ್ತಾದ ವೃದ್ದೆಯೊಬ್ಬರು ಕಚೇರಿ ಮುಂಭಾಗ ಕುಸಿದು ಬಿದ್ದಿದ್ದಾರೆ. ಕೂಡಲೆ ವೃದ್ಧೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಹೊಸನಗರ ತಾಲೂಕು ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಘಟನೆ ಸಂಭವಿಸಿದೆ. ವೃದ್ಧೆ ಸಾಧಮ್ಮ ಅವರು ಹೆಬ್ಬಿಗೆ ಗ್ರಾಮದಿಂದ 7 ಕಿ.ಮೀ ನಡೆದುಕೊಂಡು ನಿಟ್ಟೂರಿಗೆ ಬಂದಿದ್ದರು. ಕುಸಿದು ಬಿದ್ದ ವೃದ್ಧೆ ಶುಕ್ರವಾರ ಬೆಳಗ್ಗೆ 9.30ಕ್ಕೆ ವೃದ್ಧೆ ಸಾಧಮ್ಮ … Read more

ಹೊಸನಗರ ಕಾರಣಗಿರಿ ಗಣಪತಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ, ಯಾರೆಲ್ಲ ಇದ್ದಾರೆ?

Karanagiri-Ganapathi-Temple-Hosanagara

SHIVAMOGGA LIVE NEWS | HOSANAGARA | 14 ಜೂನ್ 2022 ಹೊಸನಗರ ಸಮೀಪದ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎನ್.ಡಿ.ನಾಗೇಂದ್ರ ರಾವ್ ಆಯ್ಕೆಯಾಗಿದ್ದಾರೆ. ಜಿಲ್ಲಾಧಿಕಾರಿ ಅವರ ಆದೇಶದಂತೆ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೆ.ಎನ್.ಶಂಕರನಾರಾಯಣ ಕಣಿವೆಬಾಗಿಲು, ಎಸ್.ಎನ್.ಗುರುರಾಜ್ ಸಂಪೆಮನೆ, ಕೆ.ಪಿ.ಕುಮಾರ ಕೆರೆಹೊಂಡ, ಸಾಂಬಶಿವ ಹೆದ್ಲಿ, ಬಿ.ರಾಘವೇಂದ್ರ ಹೆದ್ಲಿ, ಮಮತಾ ವೀರಪ್ಪ ಕಾರಗಡಿ, ಶೈಲಜಾ ಗಂಗಾಧರ ಕುಕ್ಕೋಡು ಅಗಸರಮನೆ, ಹೆಚ್.ಜಿ.ರವಿ ಹನಿಯ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ – ಮೈದೂಳಲು ಗ್ರಾಮದಲ್ಲಿ ಹಲವರಿಗೆ ವಾಂತಿ, ಭೇದಿ, … Read more

ಹೊಸನಗರ ಶ್ರೀ ಚಂದ್ರಮೌಳೇಶ್ವರ ದೇಗುಲದ ಧ್ವಜಸ್ತಂಭ ಪ್ರತಿಷ್ಠಾಪನೆ, ಧರ್ಮ ಸಭೆ

Ramachandrapura-Mutt-Swamiji-in-Hosanagara-temple

SHIVAMOGGA LIVE NEWS | SWAMIJI | 4 ಜೂನ್ 2022 ದೈವ ಸಾನ್ನಿಧ್ಯಕ್ಕೆ ತೊಂದರೆ ಆಗಿದ್ದ ಹಲವು ಕಡೆ ಪುನರ್ ಪ್ರತಿಷ್ಠಾಪನಾ ಕಾರ್ಯಕಗಳು ನಡೆಯುತ್ತಿವೆ. ಸರ್ಕಾರಗಳು ಕೂಡ ಇದಕ್ಕೆ ಬೆಂಬಲವಾಗಿ ನಿಂತಿರುವುದು ಸಂತೋಷದ ವಿಚಾರ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಹೇಳಿದರು. ಹೊಸನಗರದ ಶ್ರೀ ಚಂದ್ರಮೌಳೇಶ್ವರ  ದೇವಾಲಯದಲ್ಲಿ ದೇವರ ಧ್ವಜಸ್ತಂಭ ಪ್ರತಿಷ್ಠಾ ಅಂಗವಾಗಿ ಧರ್ಮ ಸಭೆ ನಡೆಸಲಾಯಿತು. ಇದರ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ರಾಘವೇಶ್ವರ ಭಾರತೀ … Read more