ರಿಪ್ಪನ್ ಪೇಟೆ ಸಮೀಪದ ಹಳ್ಳಿ ಹುಡುಗಿ ಈಗ MSIL ರಾಯಭಾರಿ, ಯಾರು ಈಕೆ?

SHIVAMOGGA LIVE NEWS | HOSANGARA | 12 ಜುಲೈ 2022

ರಾಜ್ಯ ಹಾಕಿ (HOCKEY) ತಂಡದ ಆಟಗಾರ್ತಿ, ರಿಪ್ಪನ್ ಪೇಟೆ (RIPPONPETE) ಸಮೀಪದ ಬರುವೆ ಗ್ರಾಮದ ಬಿ.ಎನ್.ಪೂಜಿತಾ ಅವರನ್ನು ಮೈಸೂರು ಸೇಲ್ಸ್‌ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ರಾಯಭಾರಿಯನ್ನಾಗಿ (BRAND AMBASSADOR) ನೇಮಕ ಮಾಡಲಾಗಿದೆ.

Shimoga Nanjappa Hospital

ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಹಾರತಾಳು ಹಾಲಪ್ಪ (HARATALU HALAPPA) ಅವರು ಪೂಜಿತಾಗೆ ರಾಯಭಾರಿ ನೇಮಕಾತಿ ಆದೇಶ ಪ್ರತಿ ಹಾಗೂ 5 ಲಕ್ಷ ರೂ.ನ ಗೌರವಧನದ ಚೆಕ್‌ ವಿತರಿಸಿದರು.

ಯಾರಿದು ಪೂಜಿತಾ?

ಈ ವೇಳೆ ಮಾತನಾಡಿದ ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಅವರು, ಪೂಜಿತಾ ಅವರ ಪಾಲಕರು ಮುಳುಗಡೆ ಸಂತ್ರಸ್ಥರಾಗಿ ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ರಿಪ್ಪನ್‌ಪೇಟೆಗೆ ಬಂದು ನೆಲೆಸಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟಕರವಾಗಿದ್ದ ಸಂದರ್ಭ ತಮ್ಮಂತೆ ಮಗಳು ಕಷ್ಟ ಪಡಬಾರದೆಂದು ಆಕೆಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ತಂದೆ-ತಾಯಿಗೆ ತಕ್ಕ ಮಗಳಾದ ಪೂಜಿತಾ ವಿದ್ಯಾಭ್ಯಾಸದ ಜತೆಗೆ ಹಾಕಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ತನ್ನೂರಿನ ಜೊತೆಗೆ ತಾಲೂಕು, ಜಿಲ್ಲೆ, ರಾಜ್ಯದ ಘನತೆಯನ್ನು ಹೆಚ್ಚಿಸಿದ್ದಾಳೆ.

Kalleshwara-Enterprises.webp

ಕಲಿಕಾ ಆಸಕ್ತಿಯಿರುವ ವಿದ್ಯಾರ್ಥಿನಿಗೆ ನಮ್ಮ ಕಂಪನಿಯ ರಾಯಭಾರಿಯಾಗಿ ನೇಮಿಸಿಕೊಳ್ಳುವುದರಿಂದ ಮತ್ತಷ್ಟು ಪೋತ್ಸಾಹದ ಜತೆಗೆ ಆರ್ಥಿಕ ಸಹಾಯ ನೀಡಿದಂತಾಗುತ್ತದೆ. ಇದನ್ನು ಸದುಪಯೋಗ ಪಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಗಳಿಸಲಿ ಎಂಬ ಹಾರೈಕೆ ನಮ್ಮದು ಎಂದು ಹೇಳಿದರು.

ಇದನ್ನೂ ಓದಿ – ಇವತ್ತೂ ಜೋರು ಮಳೆ ಮುನ್ಸೂಚನೆ, ಯಾವ್ಯಾವ ಊರಲ್ಲಿ ನೂರು ಮಿ.ಮೀ.ಗಿಂತಲೂ ಜಾಸ್ತಿ ಮಳೆಯಾಗಿದೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment