‘ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನೆ ಮೇಲೆ ದಾಳಿಯಾದ್ರೆ ಮತ್ತಷ್ಟು ಭ್ರಷ್ಟಾಚಾರ ಹೊರಕ್ಕೆ’

111021 Beluru Gopalakrishna Press Meet At Sagara

ಶಿವಮೊಗ್ಗ ಲೈವ್.ಕಾಂ | SAGARA NEWS | 11 ಅಕ್ಟೋಬರ್ 2021 ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿಯಾದಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಮನೆ ಮೇಲೂ ಐಟಿ ದಾಳಿಯಾದರೆ ಇನ್ನಷ್ಟು ಭ್ರಷ್ಟಾಚಾರದ ಹಣ ಹೊರಬರಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿಯಾಗಿದೆ. ನೀರಾವರಿ ಇಲಾಖೆಯಲ್ಲಿನ ಎರಡು … Read more

ಆಪ್ತನ ಮನೆ ಮೇಲೆ ಐಟಿ ದಾಳಿಗೆ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ, ಶಿಕಾರಿಪುರದಲ್ಲಿ ಮಾಜಿ ಸಿಎಂ ಹೇಳಿದ್ದೇನು?

120621 CM BS Yedyurappa Visit Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 07 ಅಕ್ಟೋಬರ್ 2021 ತಮ್ಮ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿಯಾಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಶಿಕಾರಿಪುರಕ್ಕೆ ಆಗಮಿಸಿರುವ ಯಡಿಯೂರಪ್ಪ ಅವರು ಐಟಿ ದಾಳಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಅವರು ಹೇಳಿದ್ದೇನು? ಉಮೇಶ್ ನನ್ನ ಆಪ್ತ. ಆತ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ. ದಾಳಿಯ ಕುರಿತು ಸತ್ಯಾಸತ್ಯತೆ ನಾಳೆ ಗೊತ್ತಾಗಲಿದೆ. ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಯಾರೆ ತಪ್ಪು ಮಾಡಿದರೂ … Read more

ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ

Thirrthahalli Taluk Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 07 ಅಕ್ಟೋಬರ್ 2021 ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಹಳ್ಳ ದಾಟುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ವಲ್ಪ ದೂರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿ ಬಳಿ ಹಳ್ಳ ದಾಟುವಾಗ ರೈತ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಅಗಸರಕೊಪ್ಪದ ಜೆರಾಲ್ಡ್ ಮಚಾದೋ ಅವರ ಪತ್ನಿ ಜಸ್ಟಿನ್ ಮಚಾದೋ (36) ಮೃತ ದು ರ್ದೈವಿ. ಗದ್ದೆಗೆ ಹೋಗಲು ಹಳ್ಳ ದಾಟುವಾಗ … Read more

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆ ಸಂಪನ್ನ, ಈ ಭಾರಿ ಹೇಗಿತ್ತು ಜಾತ್ರೋತ್ಸವ?

071021 Jenukallamma Ammanagatta Jathre in Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 07 ಅಕ್ಟೋಬರ್ 2021 ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೋತ್ಸವ ವೈಭವದಿಂದ ನಡೆಯಿತು. ಹುಣ್ಣಿಮೆಯಂದು ಕಂಕಣ ಧರಿಸುವ ಮೂಲಕ ಆರಂಭಗೊಂಡ ಜಾತ್ರೆ ಮಹಾಲಯ ಅಮಾವಸ್ಯೆಯಂದು ಸಂಪನ್ನಗೊಂಡಿತು. ಇದನ್ನು ಓದಿ | ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತಿನಿಂದ ನಾಡಹಬ್ಬ ಆಚರಣೆ, ಎಲ್ಲೆಲ್ಲಿ ಹೇಗಿರುತ್ತೆ ವೈಭವ? ಕರೋನ ಕಾರಣದಿಂದ ಹೆಚ್ಚು ಪ್ರಚಾರವಿಲ್ಲದೆ, ಅದ್ಧೂರಿಯಿಲ್ಲದೆ ಸಂಪ್ರದಾಯ ಬದ್ಧವಾಗಿ ಜಾತ್ರೋತ್ಸವ ನೆರವೇರಿಸಲಾಯಿತು. ಮೂರು ಮಂಗಳವಾರ, ಎರಡು ಶುಕ್ರವಾರ ಹುಣ್ಣಿಮೆಯಿಂದ ಮೂರು ಮಂಗಳವಾರ, ಎರಡು ಶುಕ್ರವಾರದರೆಗೆ ವಿಶೇಷ … Read more

ಹೊಳೆಹೊನ್ನೂರು ಬಳಿ ಯುವಕನನ್ನು ಬಲಿ ಪಡೆದ ಡೆಂಘೆ ಜ್ವರ

holehonnur name graphics

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 05 ಅಕ್ಟೋಬರ್ 2021 ಡೆಂಘೆ ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಜಿ.ಜೆ.ಪರಮೇಶ್ (28) ಡೆಂಘೆಗೆ ಬಲಿಯಾಗಿದ್ದಾರೆ. ಕಳೆದೊಂದು ವಾರದಿಂದ ಪರಮೇಶ್ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಪರಮೇಶ್ ಮೃತರಾಗಿದ್ದಾರೆ. ಕಾಂಗ್ರೆಸ್ ಮುಖಂಡ ಜೋತ್ರದಾರ್ ಜಯಪ್ಪ ಜಯಪ್ಪ ಅವರ ಮಗ ಪರಮೇಶ್ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ಒಂದು ವರ್ಷದ … Read more

ರಸ್ತೆ ಡಿವೈಡರ್’ಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

041021 Bike Accident At Anavatti City

ಶಿವಮೊಗ್ಗ ಲೈವ್.ಕಾಂ | ANAVATTI NEWS | 04 ಅಕ್ಟೋಬರ್ 2021 ರಸ್ತೆ ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆ ಸಂಭವಿಸಿದೆ. ಸಮನವಳ್ಳಿ ಗ್ರಾಮದ ಕಾರ್ತಿಕ್ ಗುರಪ್ಪ (21) ಮೃತ ಬೈಕ್ ಸವಾರ. ಕೋಟಿಪುರದ ಕಡೆಯಿಂದ ಆನವಟ್ಟಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರ್ತಿಕ್ ಗುರಪ್ಪ ತಲೆಗೆ ತೀವ್ರ ಗಾಯವಾಗಿದೆ. ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಅಸುನೀಗಿದ್ದಾನೆ. ಕಾರ್ತಿಕ್, ಕರ್ನಾಟಕ ರಕ್ಷಣಾ ವೇದಿಕೆ … Read more

ಕೂಡ್ಲಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ, ಶೋಧ ಕಾರ್ಯಾಚರಣೆ ವೇಳೆ ಮುಳುಗುತ್ತಿದ್ದ ಮತ್ತೊಬ್ಬನ ರಕ್ಷಣೆ

041021 Kudli Youth Rescued by Fire Department

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 ಅಕ್ಟೋಬರ್ 2021 ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ನಾಪತ್ತೆಯಾಗದ್ದಾನೆ. ಆತನ ಶೋಧ ಕಾರ್ಯಾಚರಣೆ ನಡೆಯತ್ತಿದ್ದ ಸಂದರ್ಭದಲ್ಲೇ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಯುವಕನೊಬ್ಬನನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಯುವಕ ಸುರಕ್ಷಿತವಾಗಿ ದಡ ಸೇರಿದ್ದಾನೆ. ಬೀರೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಹರೀಶ್ ಶಿವಮೊಗ್ಗದ ಕೂಡ್ಲಿಯಲ್ಲಿ ನಾಪತ್ತೆಯಾಗಿದ್ದಾನೆ. ಪಿತೃಪಕ್ಷದ ಪೂಜೆಗಾಗಿ ಆಗಮಿಸಿದ್ದ ಹರೀಶ್, ಕೂಡ್ಲಿಯ ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ಸ್ನಾನಕ್ಕೆ ಇಳಿದಿದ್ದ. ಈ ವೇಳೆ … Read more

ಶರಾವತಿ ಹಿನ್ನೀರು ಭಾಗದ ನೆಟ್ ವರ್ಕ್ ಹೋರಾಟ ಮತ್ತಷ್ಟು ತೀವ್ರ

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 01 ಅಕ್ಟೋಬರ್ 2021 ಮೊಬೈಲ್ ನೆಟ್ ವರ್ಕ್’ಗಾಗಿ ನಡೆಯುತ್ತಿರುವ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಗಾಂಧಿ ಜಯಂತಿಯಂದು ಪಾದಯಾತ್ರೆ ಮತ್ತು ರಸ್ತೆ ತಡೆ ಮಾಡಲು ಜನರು ನಿರ್ಧರಿಸಿದ್ದಾರೆ ಸಾಗರ ತಾಲೂಕು ಶರಾವತಿ ಹಿನ್ನೀರು ಪ್ರದೇಶದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಮರೀಚಿಕೆಯಾಗಿದೆ. ಇದನ್ನು ಓದಿ | ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ … Read more

ಕಾಡಿನ ಮಧ್ಯೆ ಸುಟ್ಟ ಕಾರು, ಅಸ್ಥಿ ಪಂಜರ ಪತ್ತೆ ಕೇಸ್’ಗೆ ರೋಚಕ ಟ್ವಿಸ್ಟ್, ಮನೆಯಲ್ಲೇ ಇದ್ದರು ಹಂತಕರು, ಐವರು ಅರೆಸ್ಟ್

280921 Burnt Car Found in Thirthahalli Forest

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 01 ಅಕ್ಟೋಬರ್ 2021 ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿ ಪಂಜರ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೃತ ವ್ಯಕ್ತಿ ಯಾರು? ಮೃತನನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ವಿನೋದ್ ಅವರನ್ನು ಕೊಲೆಗೈದು ಕಾಡಿನಲ್ಲಿ ಕಾರು ನಿಲ್ಲಿಸಿ … Read more

ಹೊಳೆಬೆನವಳ್ಳಿ ದೇವಸ್ಥಾನದಲ್ಲಿ ಕಳವು ಮಾಡಿ, ಸ್ಥಳೀಯರಿಗೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದ ಒಬ್ಬ ಕಳ್ಳ ಅರೆಸ್ಟ್

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021 ದೇವಸ್ಥಾನದಲ್ಲಿ ಕಳವು ಮಾಡಿ, ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿಪ್ಪುನಗರದ ಯುವಕನನ್ನು ಬಂಧಿಸಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ದೇವಸ್ಥಾನದಲ್ಲಿ ನಡುರಾತ್ರಿ ಕಳ್ಳತನ ಮಾಡುವಾಗ ಗಂಟೆ ಶಬ್ದವಾಗಿ ಸ್ಥಳೀಯರಾದ ಸತ್ಯವೇಲು ಎಂಬುವವರು ಎದ್ದು ಬಂದಿದ್ದರು. ಈ ವೇಳೆ ಸತ್ಯವೇಲು ಅವರಿಗೆ ಚಾಕು ತೋರಿಸಿ ಕಳ್ಳರು ಪರಾರಿಯಾಗಿದ್ದರು. ದೇವರ … Read more