ಕುಂಸಿ ಬಳಿ ವ್ಯಕ್ತಿಯ ಮೃತದೇಹ ಪತ್ತೆ

KUMSI-NEWS

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021 ಶಿವಮೊಗ್ಗ-ಕುಂಪಿ ರೈಲ್ವೆ ನಿಲ್ದಾಣಗಳ ನಡುವೆ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. 50 ರಿಂದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದು 5.1 ಅಡಿ ಎತ್ತರ, ಸಾದಗಪ್ಪು ಮೈಬಣ್ಣ ಹೊಂದಿದ್ದಾರೆ. ನೇರಳೆ ಬಣ್ಣದ ಚೆಕ್ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ … Read more

ಆವಿನಹಳ್ಳಿ ಬಳಿ ಯುವಕ ವಶಕ್ಕೆ, ವಿಚಾರಣೆ ವೇಳೆ ಬಾಯಿಬಿಟ್ಟ ಲಕ್ಷ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಹಣದ ಕಥೆ

300921 sagara rural thief arrest

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021 ಹಳ್ಳಿಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆವಿನಹಳ್ಳಿ ಬಳಿ ಅನುಮಾನಾಸ್ಪದವಾಗಿ ಕಂಡ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಬಂಧಿತ ಯುವಕನಿಂದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ನಗದು ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ವಸ್ತುಗಳ … Read more

ಕಾಡಿನಲ್ಲಿ ಸುಟ್ಟು ಕರಕಲಾಗಿದ್ದ ಕಾರಿನ ಮಾಲೀಕರ ಗುರುತು ಪತ್ತೆ

280921 Burnt Car Found in Thirthahalli Forest

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 30 ಸೆಪ್ಟೆಂಬರ್ 2021 ಕಾಡಿನಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದ ಕಾರಿನ ಮಾಲೀಕರ ಗುರುತು ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಮಿಟ್ಲಗೋಡು- ಹುಣಸೇಕೊಪ್ಪ ಕಾಡಿನಲ್ಲಿ ಮಂಗಳವಾರ ದಹನಗೊಂಡಿದ್ದ ಕಾರು ಸಿಕ್ಕಿತ್ತು. ಈ ಕಾರು ಆನಂದಪುರದ ವಿನೋದ್ ಕುಮಾರ್ ಎಂಬುವರಿಗೆ ಸೇರಿದೆ ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ ಕಾರಿನಲ್ಲಿ ಸಜೀವವಾಗಿ ದಹನಗೊಂಡ ವ್ಯಕ್ತಿ ಯಾರೆಂಬುದು ಇನ್ನೂ ಖಚಿತಗೊಂಡಿಲ್ಲ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಮಾಡಿದ್ದು, … Read more

ಪ್ರೌಢಶಾಲೆ ಜಾಗ ಪರಭಾರೆ, ಬೀದಿಗಿಳಿದರು ಹನ್ನೊಂದು ಹಳ್ಳಿಯ ಜನ

300921 Udri Soraba People Protest

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021 ತಾಲೂಕಿನ ಉದ್ರಿ ಗ್ರಾಮದ ಪ್ರೌಢಶಾಲಾ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆಂದು ದಾನ ನೀಡಿದ ಜಾಗ ಪರಭಾರೆ ಆಗಿದೆ ಎಂದು ಆರೋಪಿಸಿ ಉದ್ರಿ ಗ್ರಾಪಂ ವ್ಯಾಪ್ತಿಯ ಜನರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ, ನಂತರ ಶಾಲಾವರಣದಲ್ಲಿ ಸಭೆ ನಡೆಸಿದರು. ಭೂದಾನಿ, ಸಣ್ಣ ಬಸವಲಿಂಗಪ್ಪ ಮಾತನಾಡಿ, 45 ವರ್ಷಗಳ ಹಿಂದೆ ಉದ್ರಿ ಗ್ರಾಮದ ಪ್ರೌಢಶಾಲಾ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆಂದು ಹನುಮಂತ ರಾವ್ … Read more

ಭದ್ರಾವತಿ ಹುಣಸೆಕಟ್ಟೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ

290921 Nata Seized in Hunasakatte by Forest Officials

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಸೆಪ್ಟೆಂಬರ್ 2021 ತೋಟವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಸಾಗುವಾನಿ ನಾಟಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗ ದಾಳಿ ನಡೆಸಿದ ಅರಣ್ಯಾ ಇಲಾಖೆ ಅಧಿಕಾರಿಗಳು ನಾಟಾ ವಶಪಡಿಸಿಕೊಂಡಿದ್ದಾರೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಗ್ರಾಮದಲ್ಲಿ ದಾಳಿ ನಡೆದಿದೆ. ಜಾನಪ್ಪ ಬೈರು ಎಂಬುವವರ ತೋಟದಲ್ಲಿ ಸಾಗುವಾನಿ ನಾಟಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇವತ್ತು ಪರಿಶೀಲನೆ ನಡೆಸಿದಾಗ ನಾಟಾ ಪತ್ತೆಯಾಗಿದೆ. ಎಷ್ಟಿತ್ತು ನಾಟಾ? ಮೌಲ್ಯವೆಷ್ಟು? ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು … Read more

ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬಂದು ಗುದ್ದಿದ ಬೈಕ್, ಹೆಚ್ಚಿನ ಚಿಕಿತ್ಸೆಗೆ ತೆರಳುತ್ತಿದ್ದಾಗ ಸಾವು

ಶಿವಮೊಗ್ಗ ಲೈವ್.ಕಾಂ | RIPPONPETE NEWS | 29 ಸೆಪ್ಟೆಂಬರ್ 2021 ಹಿಂಬದಿಯಿಂದ ಬಂದು ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ರಿಪ್ಪನ್’ಪೇಟೆಯಲ್ಲಿ ಘಟನೆ ಸಂಭವಿಸಿದೆ. ಅಬ್ದುಲ್ ರೆಹಮಾನ್ (59) ಮೃತ ದುರ್ದೈವಿ. ರಿಪ್ಪನ್’ಪೇಟೆಯ ಹೊಸನಗರ ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಯಾಗಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ರೆಹಮಾನ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಮಾರ್ಗ ಮಧ್ಯೆ … Read more

ಕಾಡಿನ ಮಧ್ಯೆ ಸುಟ್ಟು ಕರಕಲಾದ ಕಾರು ಪತ್ತೆ, ಡ್ರೈವರ್ ಸೀಟಿನಲ್ಲಿತ್ತು ವ್ಯಕ್ತಿಯ ಅಸ್ಥಿ ಪಂಜರ

280921 Burnt Car Found in Thirthahalli Forest

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 29 ಸೆಪ್ಟೆಂಬರ್ 2021 ಕಾಡಿನ ಮಧ್ಯೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಸ್ವಿಫ್ಟ್ ಕಾರು ಪತ್ತೆಯಾಗಿದೆ. ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಭಸ್ಮವಾಗಿದ್ದು, ಅಸ್ಥಿ ಪಂಜರ ಇದೆ. ತೀರ್ಥಹಳ್ಳಿ ತಾಲೂಕು ಆರಗ ಗ್ರಾಮ ಪಂಚಾಯಿತಿಯ ಮಿಟ್ಲಗೋಡು – ಹುಣಸೇಕೊಪ್ಪ ಕಾಡಿನಲ್ಲಿ ಸುಟ್ಟ ಕಾರು, ಅಸ್ಥಿ ಪಂಜರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ. ಕಾರು ಪತ್ತೆಯಾಗಿದ್ದು ಹೇಗೆ? ಸ್ಥಳೀಯರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಾರೆ. ಆಗ ಸುಟ್ಟ ಸ್ಥಿತಿಯಲ್ಲಿ ಕಾರು … Read more

ಹೊಳೆಬೆನವಳ್ಳಿಯಲ್ಲಿ ನಡುರಾತ್ರಿ ದೇವಸ್ಥಾನದ ಬೀಗ ಒಡೆದು ಕಳ್ಳರು, ಚಾಕು ತೋರಿಸಿ ಜನರಿಗೆ ಬೆದರಿಕೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟೆಂಬರ್ 2021 ನಡುರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಕಳ್ಳರನ್ನು ಹಿಡಿಯಲು ಮುಂದಾದ ಸಾರ್ವಜನಿಕರಿಗೆ ಚಾಕು ತೋರಿಸಿ ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಳೆಬೆನವಳ್ಳಿ ಗ್ರಾಮದಲ್ಲಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಒಡೆದು ಮದ್ಯರಾತ್ರಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಜೋರು ಶಬ್ದ, ಗಂಟು ಕಟ್ಟಿ ಓಡಿದ ಕಳ್ಳರು ನಡುರಾತ್ರಿ ಜೋರು ಶಬ್ದವಾಗಿದ್ದರಿಂದ ದೇವಸ್ಥಾನದ ಸಮೀಪದ ಮನೆಯಲ್ಲಿದ್ದವರು … Read more

ಹಣಗೆರೆ ಬಳಿ ಬಾಗಿಲು ಮೀಟಿದ ಕಳ್ಳರು, ಮಹಾಲಯ ಅಮಾವಾಸ್ಯೆ ಪೂಜೆಗೆ ಹೋಗಿದ್ದವರ ಮನೆಯಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಕಳವು

theft case general image

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 28 ಸೆಪ್ಟೆಂಬರ್ 2021 ಮಹಾಲಯ ಅಮಾವಾಸ್ಯೆ ಪೂಜೆಗೆ ತೆರಳಿದ್ದ ಸಂದರ್ಭ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪ ಘಟನೆ ಸಂಭವಿಸಿದೆ. ಬೇಸೂರು ಶ್ರೀನಿವಾಸ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಇಂಟರ್ ಲಾಕ್ ಮುರಿದ ಖದೀಮರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು, ಬಾಗಿಲಿನ ಇಂಟರ್ ಲಾಕ್ ಮೀಟಿ ಒಳಗೆ ನುಗ್ಗಿದ್ದಾರೆ. ರೂಮಿನ ಬೀರುವಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿಸಿದ್ದಾರೆ. ಮಹಾಲಯ … Read more

ಸಿಗಂದೂರು, ಜೋಗ ಪ್ರವಾಸಕ್ಕೆ ಬಂದಿದ್ದ ಯುವಕರಿಬ್ಬರು ಸಾಗರದ ಲಾಡ್ಜ್’ನಲ್ಲಿ ನೇಣಿಗೆ ಶರಣು

Suicide-Hanging-General

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021 ಜೋಗ, ಸಿಗಂದೂರು, ನೀನಾಸಂ ಪ್ರವಾಸಕ್ಕೆಂದು ಬಂದಿದ್ದ ಯುವಕರಿಬ್ಬರು ಸಾಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಜೋಗ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಯುವಕರಿಬ್ಬರು ಕೊಠಡಿ ಪಡೆದುಕೊಂಡಿದ್ದರು. ಸೆಪ್ಟೆಂಬರ್ 24ರಂದು ಯುವಕರು ರೂಂ ಬುಕ್ ಮಾಡಿಕೊಂಡಿದ್ದರು. ಬಾಗಲಕೋಟೆಯಿಂದ ಬಂದಿದ್ದರು ಯುವಕರಿಬ್ಬರು ಬಾಗಲಕೋಟೆಯ ಬನಹಟ್ಟಿ ನಗರದವರು. ಇವರನ್ನು ಸಂತೋಷ್ ಅಡವಿನ್ನವರ (23), ಹನುಮಂತ ಅಲಗೂರು (28) ನೇಣಿಗೆ ಶರಣಾದವರು. ಸೆಪ್ಟೆಂಬರ್ 24ರಂದು ಸಾಗರಕ್ಕೆ ಬಂದಿದ್ದ … Read more