ಜೋಗದಲ್ಲಿ ಕಳ್ಳರ ಹಾವಳಿ, ಶೀಘ್ರ ಬಂಧನಕ್ಕೆ ಒತ್ತಾಯ

JOG SAGARA NEWS 1

ಜೋಗ್‌ಫಾಲ್ಸ್: ಕೆಪಿಸಿ ಕಾಲೊನಿ, ಬಜಾರ್, ಜಲಪಾತ (Jog Falls) ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು ಈಗಾಗಲೇ ಮೂರು ಮನೆ ಹಾಗೂ ಗೂಡಂಗಡಿಗಳಿಗೆ ನುಗ್ಗಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಬೀಗ ಹಾಕಿದ ಮನೆಗಳನ್ನೇ ಗುರುತಿಸಿ ಕಳವು ಮಾಡಲಾಗಿದೆ. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರು ಅರೆಸ್ಟ್‌, ಲಕ್ಷ ಲಕ್ಷದ ಚಿನ್ನಾಭರಣ ಸೀಜ್‌, ಎಲ್ಲೆಲ್ಲಿ ಕದ್ದಿದ್ದರು?

Nagara-Police-nab-two-inter-district-thieves

ಹೊಸನಗರ: ಕಳ್ಳತನವಾದ 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು (Thieves) ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಮಗಾರ ಓಣಿಯ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತರು. ಲಕ್ಷ ಲಕ್ಷದ ಚಿನ್ನಾಭರಣ, ನಗದು ಕದ್ದಿದ್ದರು ಹೊಸನಗರದ ನಿಲ್ಸ್‌ಕಲ್‌ ಸಮೀಪದ ಕಬಳೆ ಗ್ರಾಮದ ರಿಚರ್ಡ್‌ ಡಿಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ … Read more

ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್‌, ಮೊಬೈಲ್‌ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?

Cow-theives-escaped-in-a-car-in-gajanuru

ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌ (Gang) ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ನಡುರಾತ್ರಿ ಶಬ್ದ, ಹೊರಗೆ ನಿಂತಿತ್ತು ಕಾರು ಬಸವೇ‍ಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ … Read more

ಬೈಕಿನಲ್ಲಿ 18 ಕೆ.ಜಿ. ಶ್ರೀಗಂಧ ಸಾಗಿಸುತ್ತಿದ್ದವರು ಅರಣ್ಯಾಧಿಕಾರಿಗಳ ಬಲೆಗೆ, ಇಬ್ಬರು ಅರೆಸ್ಟ್‌, ಒಬ್ಬ ಎಸ್ಕೇಪ್‌

Sandalwood-thieves-nabbed-at-hosanagara

ಹೊಸನಗರ : ಶ್ರೀಗಂಧ ಮರವನ್ನು (sandalwood) ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಕತ್ತರಿಸಿ ಬೈಕ್‌ನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಕಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ‍ಶ್ರೀಗಂಧ ಕಡಿತಲೆ ಮಾಡಲಾಗಿತ್ತು. ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ನಿವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆಯ ರಾಘವೇಂದ್ರ (32) ಬಂಧಿತರು. ಹೊಸಕೆಸರೆ ಗ್ರಾಮದ ನೀರೇರಿ ನಿವಾಸಿ ಎಂ.ಭದ್ರಪ್ಪ ಅಲಿಯಾಸ್‌ ಕರಿಮಂಜ (32) ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. … Read more

ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಐವರು ಅರೆಸ್ಟ್‌, ಏನೇನೆಲ್ಲ ಸಿಕ್ತು?

Areca-theft-case-five-arrested

SHIVAMOGGA LIVE NEWS | 27 MAY 2024 SHIMOGA : ಜಿಲ್ಲೆಯ ವಿವಿಧೆಡೆ ಅಡಿಕೆ ಬೆಳೆಗಾರರಲ್ಲಿ (Growers) ಆತಂಕ ಸೃಷ್ಟಿಸಿದ್ದ ಖದೀಮರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾತ್ರೋರಾತ್ರಿ ಕ್ವಿಂಟಾಲ್‌ಗಟ್ಟೆಲೆ ಅಡಿಕೆ ಕಳ್ಳತನ ಮಾಡಿ, ಬೆಳೆಗಾರರ ನಿದ್ರೆ ಕಸಿದಿದ್ದ ಐವರನ್ನು ಬಂಧಿಸಲಾಗಿದೆ. ಇವರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌, ಸೊರಬ ಠಾಣೆಗಳ ಒಟ್ಟು 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. … Read more

3 ಕ್ವಿಂಟಾಲ್‌ ಅಡಿಕೆ ಪತ್ತೆಗಿಳಿದ ಪೊಲೀಸರಿಗೆ ಸಿಕ್ತು 5 ಕ್ವಿಂಟಾಲ್‌, ಭಟ್ಕಳದ ಮೂವರು ಅರೆಸ್ಟ್‌, ಏನಿದು ಕೇಸ್‌?

Areca-Thieves-from-bhatkal-arrest-by-Shiralakoppa-police.

SHIVAMOGGA LIVE NEWS | 8 DECEMBER 2023 SHIKARIPURA : ಮನೆ ಮುಂದೆ ಇರಿಸಿದ್ದ 3.50 ಕ್ವಿಂಟಾಲ್‌ ಅಡಿಕೆ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ 5.14 ಕ್ವಿಂಟಾಲ್‌ ಒಣ ಅಡಿಕೆ, ಒಂದು ಬೊಲೇರೋ ಕಾರು ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಅಬ್ರಾರ್‌ ಶೇಖ್‌ (21), ಇಮ್ರಾನ್‌ (20), ಅಬ್ದುಲ್‌ ವಾಹೀದ್‌ ತಾರ್‌ (22) ಬಂಧಿತರು. 3 ಕ್ವಿಂಟಾಲ್‌ಗಾಗಿ ತನಿಖೆ ವೇಳೆ 5 ಕ್ವಿಂಟಾಲ್‌ ಪತ್ತೆ ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ ಗ್ರಾಮದ ರಮೇಶ್‌ ಎಂಬುವವರು … Read more

ಸ್ನೇಹಿತನಿಗೆ ಕೊಟ್ಟಿದ್ದ RX 100 ಬೈಕ್‌ ನಾಪತ್ತೆ, ನಾಲ್ಕು ತಿಂಗಳ ಬಳಿಕ ದೂರು, ಏನಿದು ಕೇಸ್?

bike theft reference image

SHIVAMOGGA LIVE NEWS | 21 MAY 2023 SHIMOGA : ಯಮಹಾ ಆರ್‌.ಎಕ್ಸ್‌ 100 ಬೈಕ್‌ ಕಳ್ಳತನವಾಗಿದ್ದು (Bike Missing), ನಾಲ್ಕು ತಿಂಗಳು ತಡವಾಗಿ ಮಾಲೀಕ ದೂರು ನೀಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿನೋಬನಗರ ಮೇಧಾರ ಕೇರಿಯ ಶ್ರೀಕಾಂತ ಎಂಬಾತ ಆರ್‌.ಎಕ್ಸ್‌ 100 ಬೈಕ್‌ ಖರೀದಿಸಿದ್ದ. ಆತನ ಸ್ನೇಹಿತ ಪ್ರದೀಪ್‌ ಕೆಲಸದ ನಿಮಿತ್ತ ಎರಡು ದಿನ ಬೈಕ್‌ ಬೇಕು ಎಂದು ಪಡೆದುಕೊಂಡಿದ್ದ. ಜ.9ರಂದು ಪ್ರದೀಪ, ವೆಂಕಟೇಶನಗರದ ತನ್ನ ಮನೆ ಬಳಿ ರಾತ್ರಿ ಬೈಕ್‌ ನಿಲ್ಲಿಸಿದ್ದ. ಬೆಳಗಾಗುವುದರಲ್ಲಿ … Read more

ಕುವೆಂಪು ರಸ್ತೆಯಲ್ಲಿ ಬೈಕ್ ಕಳ್ಳರ ಖರ್ತನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆ

bike theft reference image

SHIVAMOGGA LIVE NEWS | SHIMOGA | 13 ಜೂನ್ 2022 ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕ್ ನಾಪತ್ತೆಯಾಗಿದೆ. ಪಕ್ಕದ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬೈಕ್ ಕಳ್ಳತನ (THEFT) ಆಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಮಕ್ಕಳ ಖಾಸಗಿ ಆಸ್ಪತ್ರೆ ಮುಂದೆ ಘಟನೆ ಸಂಭವಿಸಿದೆ. ಆಸ್ಪತ್ರೆಯ ಸಿಬ್ಬಂದಿ ಲಿಂಗರಾಜು ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಲಿಂಗರಾಜು ಅವರು ಬೈಕ್ ತಂದು ಆಸ್ಪತ್ರೆ ಮುಂದೆ ನಿಲ್ಲಿಸಿ, ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಹೊರ … Read more

ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದ ಬಸ್ ಚಾಲಕನಿಗೆ ಕಾದಿತ್ತು ಶಾಕ್

Shimoga Map Graphics

SHIVAMOGGA LIVE NEWS | SHIMOGA | 13 ಜೂನ್ 2022 ಶಿವಮೊಗ್ಗ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿದೆ. ಖಾಸಗಿ ಬಸ್ ಚಾಲಕ ವಾಸುಕಿ ಪ್ರಸಾದ್ ಎಂಬುವವರಿಗೆ ಸೇರಿದ ಬಜಾಜ್ ಪ್ಲಾಟೀನ ಬೈಕ್ ಕಳ್ಳತನ ಮಾಡಲಾಗಿದೆ. ವಾಸುಕಿ ಪ್ರಸಾದ್ ಅವರು ಕೆಲಸ ಮುಗಿಸಿ ರಾತ್ರಿ ಹಿಂತಿರುಗಿದಾಗ ಬೈಕನ್ನು ತಮ್ಮ ಮನೆ ಮುಂದೆ ತಂದು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದಾಗ ಬೈಕ್ ನಾಪತ್ತೆಯಾಗಿತ್ತು. … Read more

ರಾತ್ರೋರಾತ್ರಿ ದೇವಸ್ಥಾನದ ಬಾಗಿಲ ಬೀಗ ಮುರಿದು ಹುಂಡಿ ಕಳ್ಳತನ

Puradal-Temple-Theft-in-Shimoga

SHIVAMOGGA LIVE NEWS | TEMPLE | 29 ಮೇ 2022 ಶಿವಮೊಗ್ಗ ತಾಲೂಕು ಪುರದಾಳು (PURADALU) ಗ್ರಾಮದಲ್ಲಿ ದೇವಸ್ಥಾನ (TEMPLE) ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಲಾಗಿದೆ. ಕಳೆದ ರಾತ್ರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇಗುಲದ ಬಾಗಿಲ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳ ಪ್ರವೇಶ ಮಾಡಿದ್ದಾರೆ. ದೇವರ ಮುಂದಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಇದ್ದ ಸಿಸಿಟಿವಿ ಕ್ಯಾಮರಾವನ್ನು ಹಾನಿಗೊಳಿಸಿದ್ದಾರೆ. ಇವತ್ತು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. … Read more