ಸಿಗಂದೂರಿಗೆ ಇವತ್ತು ಜನವೋ ಜನ, ಕೋವಿಡ್ ನಿಯಮ ಕೇಳೋರಿಲ್ಲ, ದ್ವೀಪದ ಜನರಲ್ಲಿ ಢವಢವ

090721 No Covid Rules During in Sigandur Launch 1

ಶಿವಮೊಗ್ಗ ಲೈವ್.ಕಾಂ | TUMARI NEWS | 9 ಜುಲೈ 2021 ಅಮವಾಸ್ಯೆ ಹಿನ್ನೆಲೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬಹುತೇಕರು ಕೋವಿಡ್ ನಿಯಮಕ್ಕೆ ಕ್ಯಾರೆ ಅನ್ನದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಮವಾಸ್ಯೆ ಮತ್ತು ಶುಕ್ರವಾರ ಆದ್ದರಿಂದ ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ದೂರದ ಊರುಗಳಿಂದ ವಾಹನಗಳಲ್ಲಿ ಬರುತ್ತಿರುವ ಭಕ್ತರು ಲಾಂಚ್‍ನಲ್ಲಿ ಹೊಳೆ ದಾಟುತ್ತಿದ್ದಾರೆ. ಕೋವಿಡ್ ನಿಯಮ ಮಾಯ ಲಾಕ್ ಡೌನ್ ಇದ್ದ … Read more

ತೀರ್ಥಹಳ್ಳಿಯ ಕಮ್ಮರಡಿ ಸುತ್ತಮುತ್ತ ದೇಗುಲಗಳಲ್ಲಿ ಸರಣಿ ಕಳ್ಳತನ

Thirrthahalli Taluk Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 9 ಜುಲೈ 2021 ತೀರ್ಥಹಳ್ಳಿಯ ಕಮ್ಮರಡಿ ಸಮೀಪ ಕಳೆದ ಎರಡು ದಿನದಿಂದ ಎರಡು ದೇವಸ್ಥಾನದಲ್ಲಿ ಕಳ್ಳರು ಹುಂಡಿ ಒಡೆದು, ಕಾಣಿಕೆ ಹಣ ಕಳವು ಮಾಡಿದ್ದಾರೆ. ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಗಾರು ಭೂ ಕೈಲಾಸ ದೇವಸ್ಥಾನದಲ್ಲಿ ಕಳವು ಮಾಡಲಾಗಿದೆ. ಇನ್ನು ನಡಬೂರು ಹುಂಬಾಗಿ ದೇವಸ್ಥಾನದಲ್ಲೂ ಕಳ್ಳರು ಹುಂಡಿ ಒಡೆದು ಕಾಣಿಕೆ ಹಣ ದೋಚಿದ್ದಾರೆ. ಸ್ಥಳೀಯರು, ದೇವಸ್ಥಾನದ ಆಡಳಿತ ಮಂಡಳಿ ದೇಗುಲಕ್ಕೆ ಬಂದಾಗ ಘಟನೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ … Read more

ಜೋಗ ಜಲಪಾತ ವೀಕ್ಷಣೆಗೆ ಬರ್ತಿಲ್ಲ ಜನ, ವೀಕೆಂಡ್ ಲಾಕ್ಡೌನ್ ತೆರವು ಕಾರಣಾನಾ?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಜುಲೈ 2021 ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ವೀಕೆಂಡ್‍ನಲ್ಲಿ ಹೆಚ್ಚಿನ ಪ್ರವಾಸಿಗರು ಜೋಗಕ್ಕೆ ಬರುವ ನಿರೀಕ್ಷೆ ಇದೆ. ಜಲಪಾತದ ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿದೆ. ಹಾಗಾಗಿ ಜೋಗ ಜಲಪಾತದ ರಾಜಾ, ರಾಣಿ, ರೋರರ್, ರಾಕೆಟ್ ಜಲಪಾತಗಳು ಧುಮ್ಮಿಕ್ಕುತ್ತಿವೆ. ಇದು ನಯನ ಮನೋಹರ ದೃಶ್ಯವಾಗಿದೆ. ಲಾಕ್‍ಡೌನ್ ಬಳಿಕ ಆರಂಭಿಕ ಉತ್ಸಾಹ ಲಾಕ್‍ ಡೌನ್ ಹಿನ್ನೆಲೆ ಜೋಗ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. … Read more

ಸ್ಕ್ರೂಡ್ರೈವರ್, ಸ್ಪಾನರ್ ಬಳಸಿ ಭದ್ರಾವತಿಯಲ್ಲಿ ಎಟಿಎಂ ಮೆಷಿನ್ ಒಡೆಯಲು ಯತ್ನ

Bhadravathi Name Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 9 ಜುಲೈ 2021 ಭದ್ರಾವತಿಯಲ್ಲಿ ಎಟಿಎಂ ಮೆಷಿನ್ ಮತ್ತು ಡೆಪಾಸಿಟ್ ಮೆಷಿನ್‍ ಒಡೆದು ಹಣ ದೋಚಲು ವಿಫಲ ಯತ್ನವಾಗಿದೆ. ಈ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಬಿ.ಹೆಚ್‍.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಜುಲೈ 5ರ ರಾತ್ರಿ ಕಳ್ಳತನದ ಯತ್ನವಾಗಿದೆ. ಸ್ಕ್ರೂ ಡ್ರೈವರ್, ಸ್ಪಾನರ್ ಬಳಸಿ ಡೆಪಾಸಿಟಿವ್ ಮೆಷಿನ್ ಮತ್ತು ಎಟಿಎಂ ಮೆಷಿನ್ ಬಿಚ್ಚಲು ಯತ್ನಿಸಿದ್ದಾರೆ. ಹಣ ಕಳ್ಳತನ ಮಾಡಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿಗಳು ಬಂದಾಗ … Read more

ಅಬಕಾರಿ ಇಲಾಖೆ ಅಧಿಕಾರಿಗಳಿಂದ ಮೂರು ಕಡೆ ದಾಳಿ

080721 Abakari Raid at Sagara Soraba 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2021 ಅಬಕಾರಿ ಇಲಾಖೆ ಅಧಿಕಾರಿಗಳು ಇವತ್ತು ಮೂರು ಕಡೆ ದಾಳಿ ನಡೆಸಿದ್ದಾರೆ. ಕಳ್ಳಬಟ್ಟಿ ಮತ್ತು ಅದನ್ನು ತಯಾರಿಸಲು ಇರಿಸಿದ್ದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲೆಲ್ಲಿ ದಾಳಿ ಮಾಡಲಾಗಿದೆ? ದಾಳಿ 1 – ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಗ್ರಾಮದ ಬಲವೀಂದ್ರಪ್ಪ  ಎಂಬುವವರ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯ ಹಿಂಬದಿಯಲ್ಲಿ ಕಳ್ಳಬಟ್ಟಿ ತಯಾರಿಗೆ ಸಂಗ್ರಹಿಸಿ ಇಟ್ಟಿದ್ದ 110 ಲೀಟರ್ ಬೆಲ್ಲದ … Read more

ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸಂಬಂಧ ಶಿವಮೊಗ್ಗ ಡಿಸಿ ಹೊಸ ಆದೇಶ

Agumbe Ghat 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2021 ಮಳೆ ಕಡಿಮೆ ಇರುವ ದಿನಗಳಲ್ಲಿ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆಯಾಗುತ್ತಿದ್ದ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಕ್ಟೋಬರ್ 10ರವರೆಗೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಶಿವಮೊಗ್ಗ – ತೀರ್ಥಹಳ್ಳಿ – ಉಡುಪಿ ಮಾರ್ಗದಲ್ಲಿ ಆಗುಂಬೆ ಘಾಟಿ … Read more

ಮೆಕ್ಕೆಜೋಳ, ಶುಂಠಿ ಬೆಳೆಯಲು ಸಾಲ ಮಾಡಿದ್ದ ರೈತ ಕಳೆನಾಶಕ ಸೇವಿಸಿ ಆತ್ಮಹತ್ಯೆ

farmer suicide poison

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 8 ಜುಲೈ 2021 ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಸುರಗೀಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಚಂದ್ರಪ್ಪ, ಆತ್ಮಹತ್ಯೆ ಮಾಡಿಕೊಂಡ ರೈತ. ಜುಲೈ 5ರಂದು ಮನೆಯಲ್ಲಿ ಕಳೆನಾಶಕ ಸೇವಿಸಿದ್ದರು. ಅವರನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಂದ್ರಪ್ಪ ಮೃತರಾಗಿದ್ದಾರೆ. ಜಮೀನಿನಲ್ಲಿ ಮೆಕ್ಕೆಜೋಳ, ಶುಂಠಿ ಬೆಳೆದಿದ್ದರು. ಇದಕ್ಕಾಗಿ ಬ್ಯಾಂಕ್ ಮತ್ತು ಕೈಗಡ ಸಾಲ ಪಡೆದಿದ್ದರು. … Read more

ಚಪ್ಪಲಿ ಖರೀದಿಗೆ ಬಂದವರು ತಂದಿದ್ದ ಅಭರಣಗಳಿದ್ದ ಬ್ಯಾಗ್ ನಾಪತ್ತೆ, ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅಸಲಿ ಕಥೆ

080721 Bag theft at Thirthahalli Shoe Showroom 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 8 ಜುಲೈ 2021 ಚಪ್ಪಲಿ ಖರೀದಿ ವೇಳೆ ಮಹಿಳೆಯೊಬ್ಬರು ಆಭರಣಗಳಿದ್ದ ಬ್ಯಾಗ್ ಕದ್ದೊಯ್ದಿದ್ದಾರೆ. ತೀರ್ಥಹಳ್ಳಿಯ ಗಾಂಧಿ ಚೌಕದ ಬಳಿಕ ಪಾದರಕ್ಷೆ ಷೋ ರೂಂ ಒಂದರಲ್ಲಿ ಘಟನೆ ಸಂಭವಿಸಿದೆ. ಹೇಗಾಯ್ತು ಘಟನೆ? ಕೆಳಗಿನಕೊಪ್ಪದ ವಿನಯ್‍ ಅವರು ಇಲ್ಲಿನ ಷೋ ರೂಂ ಒಂದರಲ್ಲಿ ಚಪ್ಪಲಿ ಖರೀದಿಗೆ ಬಂದಿದ್ದರು. ಅಂಗಡಿಯಲ್ಲಿದ್ದ ಚೇರ್‍ ಮೇಲೆ ಕೂರುವಾಗ ತಾವು ತಂದಿದ್ದ ಬ್ಯಾಗನ್ನು ಪಕ್ಕದಲ್ಲಿ ಇರಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಮಹಿಳೆಯೊಬ್ಬರು ಆ ಬ್ಯಾಗನ್ನು ಕೊಂಡೊಯ್ದಿದ್ದಾರೆ. … Read more

ಹೊಳಲೂರು ಸುತ್ತಮುತ್ತ ಅಧಿಕಾರಿಗಳಿಂದ ದಿಢೀರ್ ದಾಳಿ, 25 ಕೇಸ್ ದಾಖಲು

HOLALURU NEWS 1

ಶಿವಮೊಗ್ಗ ಲೈವ್.ಕಾಂ | HOLALUR NEWS | 8 ಜುಲೈ 2021 ಹೊಳಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಲವು ಕಡೆ ದಿಢೀರ್ ದಾಳಿ ನಡೆಸಿ, 25 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 2500 ರೂ. ದಂಡವನ್ನು ಸಂಗ್ರಹಿಸಲಾಗಿದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್  ಅರಸ್, ರವಿರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದರು. (ಶಿವಮೊಗ್ಗ ಲೈವ್.ಕಾಂ … Read more

ಆಯನೂರು ಬಳಿ ಅಪಘಾತ, ಬೈಕ್ ಸವಾರನ ತಲೆಗೆ ಗಂಭೀರ ಗಾಯ, ಸಾವು

Ayanur Graphics

ಶಿವಮೊಗ್ಗ ಲೈವ್.ಕಾಂ | AYANUR NEWS | 7 ಜುಲೈ 2021 ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಆಯನೂರಿನ ಡಾಂಬರ್ ಫ್ಯಾಕ್ಟರಿ ಬಳಿ ಘಟನೆ ಸಂಭವಿಸಿದೆ. ಸುರೇಶ್ (23) ಮೃತ ಬೈಕ್ ಸವಾರ. ತನ್ನ ಅಣ್ಣನ ಬೈಕ್‍ನಲ್ಲಿ ಚೋರಡಿಯಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬಂದು ಬೈಕ್‍ ಡಿಕ್ಕಿ ಹೊಡೆದಿದೆ. ಅತಿ ವೇಗದಲ್ಲಿದ್ದು ಅಪಘಾತಕ್ಕೀಡಾದ ಹಿನ್ನೆಲೆ ಸುರೇಶ್ ತಲೆಗೆ ಗಂಭೀರ ಗಾಯಗೊಂಡು … Read more