ಅಪ್ಪ, ಅಮ್ಮ, ಅಣ್ಣನ ಎದುರಲ್ಲೇ ನೀರಿನಲ್ಲಿ ಮುಳುಗಿ ಬಾಲಕ ಸಾವು

Drowned-Reference-Image-

ಶಿವಮೊಗ್ಗ ಲೈವ್.ಕಾಂ | RIPPONPETE NEWS | 2 ಜುಲೈ 2021 ಪೋಷಕರ ಎದುರಲ್ಲೆ ಮಗ ಹೊಳೆ ಪಾಲಾದ ಕರುಣಾಜನಕ ಘಟನೆ ರಿಪ್ಪನ್‍ಪೇಟೆ ಸಮೀಪ ವರದಿಯಾಗಿದೆ. ಹೊಸನಗರ ತಾಲೂಕು ಮುತ್ತಲ ಹೊಳೆಯಲ್ಲಿ ಘಟನೆ ಸಂಭವಿಸಿದೆ. ಸಿದ್ದೇಶ್ ಅಲಿಯಾಸ್ ಸಚಿನ್ (14) ನೀರಿನಲ್ಲಿ ಮುಳುಗಿದ ಬಾಲಕ. ತಂದೆ, ತಾಯಿ, ಸಹೋದರನ ಕಣ್ಣೆದುರಲ್ಲೇ ಈತ ನೀರಿನಲ್ಲಿ ಮುಳುಗಿದ್ದಾನೆ. ಬಟ್ಟೆ ಒಗೆಯಲು ಹೋಗಿದ್ದರು ಜಾಗದ್ದೆಯ ಶೇಷಗಿರಿ, ಮಧುಮತಿ ಅವರು ಇಬ್ಬರು ಮಕ್ಕಳನ್ನು ಕರೆದುಕೊಂಡು ಮುತ್ತಲ ಹೊಳೆಯಲ್ಲಿ ಬಟ್ಟೆ ಒಗೆಯಲು ತೆರಳಿದ್ದರು. ಈ … Read more

ಎರಡು ಪ್ರತ್ಯೇಕ ಅಪಘಾತ, ಶಿವಮೊಗ್ಗ ತಾಲೂಕಿನಲ್ಲಿ ಇಬ್ಬರು ಸಾವು, ಹೇಗಾಯ್ತು ಘಟನೆಗಳು?

HIVAMOGGA-NEWS- map

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021 ಪ್ರತ್ಯೇಕ ಎರಡು ಘಟನೆಗಳಲ್ಲಿ ಟ್ರಾಕ್ಟರ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಎರಡು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಘಟನೆ 1 : ಟ್ರಾಕ್ಟರ್ ಪಲ್ಟಿಯಾಗಿ ಸಾವು ಜಮೀನು ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿದೆ. ಚಾಲಕ ಕೆಂಚಪ್ಪ (48) ಮೈ,ಕೈಗೆ ಗಂಭೀರ ಗಾಯವಾಗಿದ್ದು, ಮೃತಪಟ್ಟಿದ್ದಾರೆ. ಸಿದ್ಲಿಪುರದ ಕೆಂಚಪ್ಪ ಅವರು ಇಲ್ಲಿನ ಮಂಜಪ್ಪ ಎಂಬುವವರ ಜಮೀನಿನಲ್ಲಿ ಉಳುಮೆ ಮಾಡುವಾಗ ಘಟನೆ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ … Read more

ಬಾರ್ ಎದುರಲ್ಲೆ ಪೆಂಡಾಲ್ ಕಟ್ಟಿಕೊಂಡು ಪ್ರತಿಭಟನೆ, ಶಾಸಕರ ಸಮ್ಮುಖದಲ್ಲಿ ಪ್ರಕರಣ ಸುಖಾಂತ್ಯ, ಏನಾಯ್ತು?

300621 Ripponpete Protes By Locals Against Bar 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 30 JUNE 2021 ಬಸ್ ನಿಲ್ದಾಣದ ಪಕ್ಕದ ಮಳಿಗೆಗೆ ಮದ್ಯದಂಗಡಿ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು, ಸರ್ವ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಹರತಾಳು ಸಮ್ಮುಖದಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ರಿಪ್ಪನ್‍ಪೇಟೆಯ ಬರುವೆ ಗ್ರಾಮದ ಬಾರ್ ಅಂಡ್ ರೆಸ್ಟೋರೆಂಟ್‍ ಒಂದನ್ನು ವಿನಾಯಕ ವೃತ್ತದ ಬಸ್ ನಿಲ್ದಾಣ ಪಕ್ಕದ ಮಳಿಗೆಗೆ ಶಿಫ್ಟ್ ಮಾಡಲಾಗಿದೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು. ಹಾಗಾಗಿ ಬಾರ್ ಮುಂದೆಯೇ ಪೆಂಡಾಲು … Read more

ಬ್ಯಾಕೋಡು ಜೋಡಿ ಕೊಲೆ ಘಟನಾ ಸ್ಥಳಕ್ಕೆ ಕಾಗೋಡು ತಿಮ್ಮಪ್ಪ ಭೇಟಿ

111020 Kagodu Thimmappa General Image 1

ಶಿವಮೊಗ್ಗ ಲೈವ್.ಕಾಂ | SAGARA NEWS | 30 JUNE 2021 ಸಾಗರ ತಾಲೂಕು ಬ್ಯಾಕೋಡಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ ಆರೋಪಿಗಳ ಬಂಧನವಾಗದೆ ಇರುವುದಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರೂರು ಹೋಬಳಿಯ ದ್ವೀಪದಲ್ಲಿ ಘಟನೆ ನಡೆದ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಜೋಡಿ ಕೊಲೆ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ | ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ, … Read more

ತಾಳಗುಪ್ಪ – ಬೆಂಗಳೂರು ರೈಲಿಗೆ ಸಿಲುಕಿದ್ದ ಯುವಕ ಮಂಗಳೂರಿಗೆ ಶಿಫ್ಟ್, ಹೇಗಿದೆ ಆರೋಗ್ಯ?

Talaguppa Graphics

ಶಿವಮೊಗ್ಗ ಲೈವ್.ಕಾಂ | SAGARA NEWS | 30 JUNE 2021 ತಾಳಗುಪ್ಪದಲ್ಲಿ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಕಸ್ಮಿಕವಾಗಿ ರೈಲಿನಡಿ ಸಿಲುಕಿ ಕೈ, ಕಾಲು ತುಂಡಾಗಿದ್ದ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿತ್ತು. ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ನವೀನ್ (18) ಪ್ಲಾಟ್‍ಫಾರಂನಿಂದ ಜಾರಿಬಿದ್ದಿದ್ದ. ಸಾಗರದಿಂದ ಮಂಗಳೂರಿಗೆ ಶಿಫ್ಟ್ ಘಟನೆ ಬಳಿಕ ನವೀನ್‍ನನ್ನು ಸಾಗರದ ಉಪ ವಿಭಾಗೀಯ … Read more

ಖಾಲಿ ಕಾರಲ್ಲಿ ಕೈ ಹಾಕಿದಲೆಲ್ಲ ಸಿಕ್ತು ಗಾಂಜಾ, ಭದ್ರಾವತಿ ಗಡಿಯಲ್ಲಿ ಲಾಕ್ ಆದ ಖತರ್ನಾಕ್ ದಂಧೆಕೋರ

290621 Ganja in Omni Car near Bhadravathi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021 ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಣೆ ಮಾಡತ್ತಿದ್ದವನನ್ನು ಬಂಧಿಸಿದ್ದಾರೆ. ಆತನ ಕಾರಿನ ಮೂಲೆ ಮೂಲೆಯಲ್ಲೂ ಗಾಂಜಾ ಅಡಗಿಸಿಟ್ಟಿರುವುದು ಬಯಲಿಗೆ ಬಂದಿದೆ. ತರೀಕೆರೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕಾರನ್ನು ಕಾರೇಹಳ್ಳಿ ಚೆಕ್‍ ಪೋಸ್ಟ್‍ನಲ್ಲಿ ತಡೆದು ತಪಾಸಣೆ ನಡೆಸಿದಾಗ ಗಾಂಜಾ ಇರುವುದು ಬೆಳೆಕಿಗೆ ಬಂದಿದೆ. ಕಾರು ಚಾಲಕ ಮುರುಗ (32) ಎಂಬಾತನನ್ನು ಬಂಧಿಸಲಾಗಿದೆ. ಈತ ಭದ್ರಾವತಿಯ ಸಂಕ್ಲಿಪುರದವನು ಎಂದು ಪೊಲೀಸರು ಪ್ರಕಟಣೆಯಲ್ಲಿ … Read more

ಭದ್ರಾವತಿ ನಗರಸಭೆಗೆ ಮೂರು ಕೋಟಿ ರೂ. ಕೊಡುವಂತೆ ಶಿವಮೊಗ್ಗದಲ್ಲಿ ಏಕಾಂಗಿ ಪ್ರತಿಭಟನೆ

290621 Shashi Kumar Gowda Protest For Bhadaravathi Covid Relief 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021 ಕರೋನ ಸಂಕಷ್ಟದ ಹಿನ್ನೆಲೆಯಲ್ಲಿ ಭದ್ರಾವತಿ ನಗರಸಭೆಗೆ ವಿಶೇಷ ಅನುದಾನದಡಿ 3 ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್‍.ಗೌಡ ಏಕಾಂಗಿ ಹೋರಾಟ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿ ಹೋರಾಟ ನಡೆಸಿದ ಶಶಿಕುಮಾರ್ ಗೌಡ, ಲಾಕ್‍ ಡೌನ್‍ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಭದ್ರಾವತಿಯಲ್ಲಿ 30ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿವೆ. 25 ಸಾವಿರಕ್ಕೂ ಹೆಚ್ಚು ಜನ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. … Read more

ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ, ಜೋಗ, ಕುಪ್ಪಳಿಗೆ ಮೊದಲ ದಿನ ಭೇಟಿ ಕೊಟ್ಟವರೆಷ್ಟು?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021 ಲಾಕ್‍ ಡೌನ್, ವಾರಾಂತ್ಯದ ಕರ್ಫ್ಯೂ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಪ್ರವಾಸಿ ತಾಣಗಳತ್ತ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತವಾಗಿದೆ. ಮೊದಲ ದಿನ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಜೋಗಕ್ಕೆ ಬಂದಿದ್ದರು. ರಾಜ, ರಾಣಿ, ರೊರರ್, ರಾಕೆಟ್‍ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. ಜೋಗಕ್ಕೆ ದೂರದೂರುಗಳಿಂದ ಪ್ರವಾಸಿಗರು ಮೊದಲ ದಿನ 991 ಪ್ರವಾಸಿಗರು ಜೋಗಕ್ಕೆ ಬಂದಿದ್ದರು. 150 … Read more

BREAKING NEWS | ತಾಳಗುಪ್ಪ – ಬೆಂಗಳೂರು ರೈಲಿನಡಿ ಸಿಲುಕಿ ಯುವಕನ ಕಾಲು ಕಟ್

breaking news graphics

ಶಿವಮೊಗ್ಗ ಲೈವ್.ಕಾಂ | TALAGUPPA NEWS | 28 JUNE 2021 ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ‌. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಳಗುಪ್ಪ – ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಯುವಕ ಸಿಲುಕಿದ್ದಾನೆ. ಹೇಗಾಯ್ತು ಘಟನೆ? ಸಿದ್ದಾಪುರ ತಾಲೂಕಿನ ನವೀನ್ (18) ರೈಲಿಗೆ ಸಿಲುಕಿದ ಯುವಕ. ಪ್ಲಾಟ್‌ಫಾರಂ ಜಾರುತ್ತಿದ್ದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪ್ಲಾಟ್‌ಫಾರಂನಿಂದ ಜಾರಿದ ನವೀನ್ ರೈಲಿನ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರೈಲು … Read more

ರಸ್ತೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಪ್ರೌಢಶಾಲೆ ಶಿಕ್ಷಕ

280621 King Cobra Caught at Horgulige hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 28 JUNE 2021 ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವನ್ನು ಪ್ರೌಢಶಾಲೆ ಶಿಕ್ಷಕರೊಬ್ಬರು ರಕ್ಷಣೆ ಮಾಡಿದ್ದಾರೆ. ಹೊಸನಗರ ತಾಲೂಕು ಹಾರೋಗೊಳಿಗೆ ಗ್ರಾಮದಲ್ಲಿ ರಸ್ತೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ವಿಚಾರ ತಿಳಿದ ಸ್ನೇಕ್ ಮಾರುತಿ ಅವರು ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಪ್ರೌಢಶಾಲೆ ಶಿಕ್ಷಕರಾಗಿರುವ ಮಾರುತಿ ಅವರು ಸುತ್ತಮುತ್ತಲು ಹಾವುಗಳ ರಕ್ಷಣೆ ಮಾಡುತ್ತಿದ್ದಾರೆ. ಇದೆ ಕಾರಣಕ್ಕೆ ಜನರು ಇವರನ್ನು ಸ್ನೇಕ್ ಮಾರುತಿ ಎಂದು ಕರೆಯುತ್ತಾರೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ … Read more