ಸ್ವಚ್ಛತೆ ವಿಚಾರವಾಗಿ ತೀರ್ಥಹಳ್ಳಿಯ ಹಣಗೆರೆಯಲ್ಲಿ ಗ್ರಾಮಸ್ಥರ ಗದ್ದಲ, ಲಘು ಲಾಠಿ ಪ್ರಹಾರ

Hanagere temple board

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 9 ಸೆಪ್ಟಂಬರ್ 2020 ಗ್ರಾಮದ ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೋಮು ಸೌಹಾರ್ದತೆಗೆ ಹೆಸರಾಗಿರುವ ಹಣಗೆರೆ ಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ. ಗಲಾಟೆಗೆ ಕಾರಣವೇನು? ಹಣಗೆರೆ ಕಟ್ಟೆಗೆ ವನ್ಯಜೀವಿ ವಿಭಾಗದ ಡಿಸಿಎಫ್‍ ಐ.ಎಂ.ನಾಗರಾಜ್ ಅವರು ಭೇಟಿ ನೀಡಿದ್ದರು. ಪರಿಸರ ಹಾನಿ ಮತ್ತು ಅತಿಕ್ರಮ ವಿಚಾರವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಗುಂಪುಗಳ … Read more

ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯ ಜನರಿಗೆ ಮುನ್ನೆಚ್ಚರಿಕೆ

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು ಏರುತ್ತಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿ ಶೀಘ್ರದಲ್ಲೆ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಂಭವವಿದ್ದು, ಆಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆಯ … Read more

ಗಜಾನನ ಸಾರಿಗೆ ಸಂಸ್ಥೆಯಲ್ಲಿ ಗುಂಪುಗಳ ನಡುವೆ ಹೊಡೆದಾಟ, ಇಬ್ಬರಿಗೆ ಗಾಯ, ಗಲಾಟೆಗೇನು ಕಾರಣ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಗಜಾನನ ಸಾರಿಗೆ ಸಂಸ್ಥೆಯ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಗಲಾಟೆಗೆ ಕಾರಣವೇನು? ಲಾಕ್‍ಡೌನ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರದಿಂದ ಹಲವು ಮಾರ್ಗದಲ್ಲಿ ಬಸ್ ಸಂಚಾರ ಪುನಾರಂಭವಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಕಾರ್ಮಿಕರು ಕಂಪನಿಗೆ ಆಗಮಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಮುಸುಕಿನ ಗುದ್ದಾಟ ಬಹಿರಂಗ … Read more

ಆನಂದಪುರದ ಕೆರೆಕೊಪ್ಪದಲ್ಲಿ ಪ್ರಭಾವಿಗಳಿಂದ ಸೊಪ್ಪಿಪನಬೆಟ್ಟ ಅತಿಕ್ರಮ, ತೆರವಿಗೆ ಆಗ್ರಹ

080920 Soppina Betta Encroachment 1

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಸೊಪ್ಪಿನಬೆಟ್ಟ ಅತಿಕ್ರಮ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭೀಮನಕೋಣೆ ಗ್ರಾಮ ಸೇವಾ ಸಂಘದ ವತಿಯಿಂದ ಸಾಗರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಆನಂದಪುರ ಹೋಬಳಿ ಕೆರೆಕೊಪ್ಪ ಗ್ರಾಮದಲ್ಲಿ ಕೆಲವು ಪ್ರಭಾವಿಗಳು ಸೊಪ್ಪನಬೆಟ್ಟವನ್ನು ಅತಿಕ್ರಮ ಮಾಡಿಕೊಂಡಿದ್ದಾರೆ. ಗಿಡಮರಗಳನ್ನು ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಸೊಪ್ಪನಬೆಟ್ಟಕ್ಕೆ ಆತಂಕ ಎದುರಾಗಿದೆ. ಸೊಪ್ಪಿನಬೆಟ್ಟ ಅತಿಕ್ರಮ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೀಮನಕೋಣೆ ಗ್ರಾಮ ಸೇವಾ … Read more

ಭರ್ತಿಯಾದ ಭದ್ರಾ ಜಲಾಶಯಕ್ಕೆ ರೈತ ಸಂಘದಿಂದ ಬಾಗಿನ, ನೀರು ಸದ್ಬಳಕೆಗೆ ಮನವಿ

080920 Raitha Sanga Bagina To Bhadra Dam 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 8 ಸೆಪ್ಟಂಬರ್ 2020 ಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಭದ್ರಾ ಅಣೆಕಟ್ಟಿಗೆ ರೈತ ಸಂಘದ ವತಿಯಿಂದ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ, ಭದ್ರಾ ಅಣೆಕಟ್ಟೆ ಸತತವಾಗಿ 3 ವರ್ಷ ತುಂಬಿದ್ದು ರೈತರಿಗೆ ಹರ್ಷ ತಂದಿದೆ. ನೀರು ಸದ್ಬಳಕೆ ಮಾಡಿ ಕೊಂಡರೆ ಮುಂದಿನ ಬೇಸಿಗೆ ಬೆಳೆಯನ್ನು ಸಹ ಬೆಳೆಯಬಹುದು ಎಂದರು. ತುಂಗಾ ನದಿಯಿಂದ ಕಣಬೂರು ಮತ್ತು … Read more

ಭದ್ರಾವತಿಯಲ್ಲಿ ಕರೋನ ತಪಾಸಣೆಗೆ ಎಎಪಿ ಕೇರ್ಸ್, ಆಕ್ಸಿಮಿತ್ರಗೆ ಚಾಲನೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 8 ಸೆಪ್ಟಂಬರ್ 2020 ಆಮ್ ಆದ್ಮಿ ಪಕ್ಷದ ವತಿಯಿಂದ ಭದ್ರಾವತಿಯಲ್ಲಿ ಎಎಪಿ ಕೇರ್ಸ್ ಮತ್ತು ಆಕ್ಸಿಮಿತ್ರ ಯೋಜನೆಗೆ ಚಾಲನೆ ನೀಡಲಾಗಿದೆ. ಕರೋನ ಕುರಿತು ಜಾಗೃತಿ ಮೂಡಿಸಲು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾರಿಗೆ ತಂದಿರುವ ಈ ಯೋಜನೆಯನ್ನು ಸ್ಥಳೀಯವಾಗಿಯೂ ಜಾರಿಗೊಳಿಸಲಾಗುತ್ತಿದೆ. ಭದ್ರಾವತಿ ರಂಗಪ್ಪ ಸರ್ಕಲ್‍ನಲ್ಲಿ ಎಎಪಿ ಕೇರ್ಸ್ ಮತ್ತು ಆಕ್ಸಿಮಿತ್ರಗೆ ಚಾಲನೆ ನೀಡಲಾಯಿತು. ಕರೋನ ಸೋಂಕು ವ್ಯಾಪಕಾಗಿ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ತಿಳಿವಳಿಕೆ … Read more

ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತೆ ಆಸ್ಪತ್ರೆಗೆ ದಾಖಲು

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಕೆಲವು ದಿನದ ಹಿಂದೆಯಷ್ಟೆ ಕರೋನದಿಂದ ಗುಣವಾಗಿ ಸಾಗರಕ್ಕೆ ಮರಳಿದ್ದ ಶಾಸಕ ಹರತಾಳು ಹಾಲಪ್ಪ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿದೆ. ಹಾಗಾಗಿ ಅವರು ಬೆಂಗಳೂರಿಗೆ ತೆರಳಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‍ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹರತಾಳು ಹಾಲಪ್ಪ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಹಾಲಪ್ಪ ಅವರು ಕ್ಷೇತ್ರದ ವಿವಿಧೆಡೆ ಸಂಚರಿಸಿ, ಪರಿಶೀಲನೆ ನಡೆಸಿದ್ದರು. ಊಟದಲ್ಲಿ ವ್ಯತ್ಯಾಸವಾದ … Read more

ಅಪ್ಪಾಜಿಗೌಡರಿಗೆ ಬೆಡ್, ವೆಂಟಿಲೇಟರ್ ಸಿಗಲಿಲ್ಲ, ಸರ್ಕಾರ, ಜಿಲ್ಲಾಡಳಿತದ ವೈಫಲ್ಯ, ತೀರ್ಥಹಳ್ಳಿ ಕಾಂಗ್ರೆಸ್ ಆಕ್ರೋಶ

070920 Kimmane Rathnakar Protest about Covid 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಸೆಪ್ಟಂಬರ್ 2020 ಕರೋನ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ಶಿವಮೊಗ್ಗದ ಅಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಸಿಗದೆ ಮೃತಪಟ್ಟಿದ್ದಾರೆ. ಆದರೂ ಈ ವಿಚಾರವಾಗಿ ಜಿಲ್ಲಾಡಳಿತ ಗಂಭೀರವಾಗಿಲ್ಲ ಎಂದು ತೀರ್ಥಹಳ್ಳಿ ಕಾಂಗ್ರೆಸ್ ಆರೋಪಿಸಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು, ಭದ್ರಾವತಿ ಆಸ್ಪತ್ರೆಗಳು, ಶಿವಮೊಗ್ಗದ … Read more

ಭದ್ರಾವತಿಯಲ್ಲಿ ಕೆಜಿಗಟ್ಟಲೆ ಗಾಂಜಾ ಸಾಗಿಸುತ್ತಿದ್ದ ಎಂಟು ಮಂದಿ ಅರೆಸ್ಟ್, ಕಾರು ವಶಕ್ಕೆ

070920 Old Town Police Arrest Ganja Smugglers 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟಂಬರ್ 2020 ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕಾರಿನಲ್ಲಿತ್ತು ಕೆಜಿಗಟ್ಟಲೆ ಗಾಂಜಾ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತ ಮೇರೆಗೆ ಬಿ.ಹೆಚ್.ರಸ್ತೆಯಲ್ಲಿ ದಾಳಿ ನಡೆಸಿದ ಭದ್ರಾವತಿ ಪೊಲೀಸರು, ಆರು ಕೆ.ಜಿ 400 ಗ್ರಾಂ ಗಾಂಜಾ ಪತ್ತೆಯಾಗಿದೆ. ಎಂಟು ಮಂದಿ ಅರೆಸ್ಟ್ ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು … Read more

ನರಸೀಪುರದಲ್ಲಿ ನಾಟಿ ಔಷಧ ವಿತರಣೆ ಮತ್ತೆ ಸ್ಥಗಿತ, ಹೊರ ಊರಿನವರಿಗೆ ಗ್ರಾಮ ಪ್ರವೇಶ ಸಂಪೂರ್ಣ ನಿರ್ಬಂಧ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಸೆಪ್ಟಂಬರ್ 2020 ನಾಟಿ ವೈದ್ಯ ನಾರಾಯಣಮೂರ್ತಿ ಅವರ ನಿಧನದ ಬಳಿಕ ಪುನಾರಂಭವಾಗಿದ್ದ ಔಷಧ ವಿತರಣೆಗೆ ಮತ್ತೊಮ್ಮೆ ತಡೆ ನೀಡಲಾಗಿದೆ. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಹೊರ ಊರಿನಿಂದ ಬಂದವರನ್ನು ನರಸೀಪುರ ಗ್ರಾಮ ಪ್ರವೇಶಿಸದಂತೆ ತಡೆದಿದ್ದಾರೆ. ಪುನಾರಂಭವಾಗಿತ್ತು ಔಷಧ ವಿತರಣೆ ನರಸೀಪುರದಲ್ಲಿ ನಾಟಿ ವೈದ್ಯ ನಾರಾಯಣಮೂರ್ತಿ ಅವರು ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಹಲವು ಸಮಸ್ಯೆಗೆ ಔಷಧ ವಿತರಿಸಿತ್ತಿದ್ದರು. ಕರೋನ ಲಾಕ್‍ಡೌನ್ ಹಿನ್ನೆಲೆ ಔಷಧ … Read more