BREAKING NEWS | ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ

030920 MJ Appaji Gowda Bhadravathi MLA 1

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 3 ಸೆಪ್ಟಂಬರ್ 2020 ಭದ್ರಾವತಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನರಾಗಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಅಪ್ಪಾಜಿಗೌಡ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಉಸಿರಾಟದ ಸಮಸ್ಯೆ ಅಪ್ಪಾಜಿಗೌಡ ಅವರಿಗೆ ರಾತ್ರಿ ಮನೆಯಲ್ಲಿದ್ದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಭದ್ರಾವತಿಯಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರೋನ ಟೆಸ್ಟ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ … Read more

ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ಕರೋನ, ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ನಿರ್ಧಾರ

ಶಿವಮೊಗ್ಗ ಲೈವ್.ಕಾಂ | SAGARA NEWS | 2 ಸೆಪ್ಟಂಬರ್ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಅವರು, ಅಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿರುವ ಮಲ್ಲಿಕಾರ್ಜುನ ಹಕ್ರೆ, ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್‌ ಎಂದು ದೃಢಪಟ್ಟಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೂಡಲೆ ಪರೀಕ್ಷೆಗೆ ಒಳಗಾಗಿ ಎಂದು ವಿನಂತಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋವಿಡ್‌ ಪರೀಕ್ಷೆಗೆ … Read more

ಭದ್ರಾವತಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡಿದ್ದ ಕೋಳಿ ಮಂಜ ಅರೆಸ್ಟ್, ಎರಡು ಬೈಕ್ ಸೀಜ್

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 ಸೆಪ್ಟಂಬರ್ 2020 ಭದ್ರಾವತಿಯಲ್ಲಿ ಬೈಕ್‍ ಕಳ್ಳತನ ಮಾಡಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನವಾಗಿತ್ತು. ನಾಲ್ಕೆ ದಿನದಲ್ಲಿ ಅರೆಸ್ಟ್ ಭದ್ರಾವತಿ ಅನ್ವರ್ ಕಾಲೋನಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶೆಟ್ಟಿಹಳ್ಳಿ ಗ್ರಾಮದ ವಾಸುಭೋವಿ ಅಲಿಯಾಸ್ ಕೋಳಿ ಮಂಜ (33) ಎಂಬಾತನನ್ನು ಬಂಧಿಸಲಾಗಿದೆ. ಎರಡು ಬೈಕ್ ಸೀಜ್ ಕೋಳಿ ಮಂಜನಿಂದ ಎರಡು ಬೈಕ್‍ಗಳನ್ನು … Read more

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಕರೋನ ಟೆಸ್ಟ್, ನಿನ್ನೆ ನೆಗೆಟಿವ್, ಇವತ್ತು ಪಾಸಿಟಿವ್

Aaraga Jnanendra Thirthahalli MLA 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 31 ಆಗಸ್ಟ್ 2020 ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಸಂಬಂಧ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಫೇಸ್‍ಬುಕ್‍ನಲ್ಲಿ ಏನು ಪ್ರಕಟಿಸಿದ್ದಾರೆ? ನಾನು ಇಂದು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲವಾದರೂ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಎಂದು ಫೇಸ್‍ಬುಕ್‍ನಲ್ಲಿ ಆರಗ ಜ್ಞಾನೇಂದ್ರ ಬರೆದುಕೊಂಡಿದ್ದಾರೆ. ಮೊದಲೇ ಕ್ವಾರಂಟೈನ್‍ನಲ್ಲಿ … Read more

ಜೀವಂತ ಹಸುವಿನ ಚರ್ಮ ಸುಲಿಯಲು ಯತ್ನ, ಕಟುಕರಿಂದ ತಪ್ಪಿಸಿಕೊಂಡ ಹಸುವಿಗೆ ಭಜರಂಗದಳದಿಂದ ಚಿಕಿತ್ಸೆ, ದೂರು

310820 Bajarangadal Rescues Cow in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 31 ಆಗಸ್ಟ್ 2020 ಹತ್ಯೆಕೋರರಿಂದ ತಪ್ಪಿಸಿಕೊಂಡು ಬಂದು ಗಾಯಗೊಂಡಿದ್ದ ಹಸುವಿಗೆ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ನೀಡಿ, ರಕ್ಷಣೆ ಮಾಡಿದ್ದಾರೆ. ಭದ್ರಾವತಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಜೀವಂತ ಹಸುವಿನ ಚರ್ಮ ಸುಲಿಯಲು ಕಟುಕರು ಪ್ರಯತ್ನಿಸಿದ್ದಾರೆ. ಅದರ ಕಾಲಿನ ಭಾಗದಲ್ಲಿ ಚರ್ಮ ಸುಲಿಯಲಾಗಿದೆ. ಬೊಮ್ಮನಕಟ್ಟೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಟುಕರಿಂದ ತಪ್ಪಿಸಿಕೊಂಡ ಹಸು ಹುಡ್ಕೊ ಕಾಲೋನಿವರೆಗೂ ಬಂದಿದ್ದು, ಸುಸ್ತಾಗಿ ಕೂಳಿತಿತ್ತು. ಇದನ್ನು ಗಮನಿಸಿದ ಭಜರಂಗದಳ ಕಾರ್ಯಕರ್ತರು, ಚಿಕಿತ್ಸೆ … Read more

ಹುಚ್ಚು ನಾಯಿ ಕೊಲ್ಲಲು ತಾನೇ ಹಾಯಿಸಿದ ವಿದ್ಯುತ್‌ಗೆ ವ್ಯಕ್ತಿ ಬಲಿ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA NEWS | 31 ಆಗಸ್ಟ್ 2020 ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಡರಾತ್ರಿ ವರದಿಯಾಗಿದೆ. ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಮನೆಯ ಅಂಗಳಕ್ಕೆ ಹಾಗೂ ಮನೆಯ ಒಳಗಡೆ ಹುಚ್ಚುನಾಯಿ ಬರುತ್ತದೆ ಎಂದು ಮನೆಯ ಮಾಲಿಕ ನಿಂಗಪ್ಪ ಪುಟ್ಟಪ್ಪ (58) ಗೇಟ್ ಮುಂಭಾಗ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾನೆ. ರಾತ್ರಿ ಮೂತ್ರ ಮಾಡಲು ತೆರಳಿದಾಗ ಆತ ಅದೇ ತಂತಿ ತುಳಿದು ಸ್ಥಳದಲ್ಲಿಯೇ … Read more

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕ್ವಾರಂಟೈನ್, ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಡುವಂತೆ ಮನವಿ

Aaraga Jnanendra Thirthahalli MLA 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 31 ಆಗಸ್ಟ್ 2020 ಕಾರು ಚಾಲಕನಿಗೆ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಕ್ವಾರಂಟೈನ್ ಆಗಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರು ಕ್ವಾರಂಟೈನ್‍ಗೆ ಒಳಗಾಗಿದ್ದು, ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದಾರೆ. ಅವರ ವರದಿ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳುವಂತೆಯು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ತಾಲೂಕು ಪಂಚಾಯಿತಿ ಸಭೆಯಲ್ಲಿ ಉಪಾಧ್ಯಕ್ಷರಿಂದಲೇ ಧರಣಿ, ಕಾರಣವೇನು?

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA NEWS | 28 ಆಗಸ್ಟ್ 2020 ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರೆ ಧರಣಿ ನಡೆಸಿದ್ದಾರೆ. ಸಭೆಯ ವೇದಿಕೆ ಮುಂಭಾಗ ಸದಸ್ಯರೊಬ್ಬರ ಜೊತೆಗೆ ತಾಲೂಕು ಉಪಾಧ್ಯಕ್ಷರು ಧರಣಿ ನಡೆಸಿ, ಬೇಡಿಕೆ ಮುಂದಿಟ್ಟಿದ್ದಾರೆ. ಉಪಾಧ್ಯಕ್ಷರ ಧರಣಿಗೆ ಕಾರಣವೇನು? ಆನವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಘಟಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಜನರು ವಿರೋಧ ವ್ಯಕ್ತಪಡಿಸಿದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಘಟಕ ಸ್ಥಾಪಿಸಿದಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಆಗಸ್ಟ್ 25ರಂದು ಪೊಲೀಸ್ … Read more

ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಭದ್ರಾವತಿಯಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವು

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 28 ಆಗಸ್ಟ್ 2020 ತಾವರೆಘಟ್ಟದ ಸ್ಮಶಾನ ಜಾಗದಲ್ಲಿ ಆಗಿದ್ದ ಒತ್ತುವರಿಯನ್ನು ತಾಲೂಕು ಆಡಳಿತ ಕೊನೆಗೂ ತೆರವು ಮಾಡಿದೆ. ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ತಾವರೆಘಟ್ಟದ ಸರ್ವೇ ನಂ.29ರಲ್ಲಿ ಗೋಮಾಳ ಜಾಗದಲ್ಲಿ ಸ್ಮಶಾನಕ್ಕೆ ಅಂತಾ 1.20ಎಕರೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ತಾಲೂಕು ಆಡಳಿತ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಶಾಸಕ ಸಂಗಮೇ‍ಶ್ವರ ಮತ್ತು … Read more

ಜೋಗ ರಾಣಿ ಫಾಲ್ಸ್‌ನಿಂದ ಜಿಗಿಯಲು ಯತ್ನಿಸಿದ್ದ ಯುವಕ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ

260820 Youth Attempts Suicide in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 ಆಗಸ್ಟ್ 2020 ಜೋಗ ಜಲಪಾತದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಯುವಕನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದೆ. ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಬುಧವಾರ ಜೋಗದ ರಾಣಿ ಫಾಲ್ಸ್‍ ಮೇಲಿಂದ ಜಿಗಿಯಲು ಬೆಂಗಳೂರಿನ ಚೇತನ್ ಯತ್ನಿಸಿದ್ದ. ಪೊಲೀಸರು ಆತನ ಮನವೊಲಿಸಿದ್ದರು. ಚೇತನ್ ಬಳಿ ಮಾಹಿತಿ ಪಡೆದು ಬೆಂಗಳೂರಿನಲ್ಲಿರುವ ಪೋಷಕರಿಗೆ ತಿಳಿಸಲಾಗಿತ್ತು. ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಚೇತನ್‍ ತಾಯಿ ಮತ್ತು ಸಹೋದರ ಜೋಗ ಪೊಲೀಸ್ ಠಾಣೆಗೆ ಬಂದು ಕರೆದೊಯ್ದಿದ್ದಾರೆ. ಈ ವೇಳೆ ಠಾಣೆಯಲ್ಲಿ … Read more