ಶಿವಮೊಗ್ಗದಲ್ಲಿ ಬಲೆ ಹಾಕಿ ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್‌

Attack-on-Street-dog-at-gopala-in-Shimoga

ಶಿವಮೊಗ್ಗ: ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್.ಎಸ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಲ್ಲಿ ಆಗಿದ್ದು? ಹೇಗಾಯ್ತು ಘಟನೆ? ಹಂದಿ ಹಿಡಿಯುವ ಗುಂಪೊಂದು ಬೀದಿ ನಾಯಿಯೊಂದನ್ನು ಬಲೆಯಲ್ಲಿ ಸೆರೆಹಿಡಿದು ದೊಣ್ಣೆಯಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 28ರ ಬೆಳಗ್ಗೆ 8.16ಕ್ಕೆ ಶಿವಮೊಗ್ಗದ ಗೋಪಾಳ ಪೊಲೀಸ್ ಲೇಔಟ್‌ನ ವೃದ್ಧಾಶ್ರಮದ ಎದುರು ನಡೆದಿದೆ ಎಂದು … Read more

ದಾಸರಕಲ್ಲಹಳ್ಳಿಯಲ್ಲಿ ಬೆಳಗ್ಗೆಯಿಂದ ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು, ಮಕ್ಕಳು, ಕಾರಣವೇನು?

lunatic-dog-manace-at-dasarakallahalli-in-bhadravathi-taluk

ಭದ್ರಾವತಿ: ಹುಚ್ಚು (Lunatic) ನಾಯಿಯ ಹಾವಳಿಯಿಂದ ಆತಂಕಕ್ಕೀಡಾದ ಗ್ರಾಮಸ್ಥರು ಬಡಿಗೆಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಭದ್ರಾವತಿ ತಾಲೂಕು ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆಯಿಂದ ಜನ ಬಡಿಗೆ ಸಾಹಿತ ಓಡಾಡುತ್ತಿದ್ದಾರೆ. ಹುಚ್ಚು ನಾಯಿಯೊಂದು ಒಂಭತ್ತು ಮಕ್ಕಳು ಸೇರಿ ಹಲವರಿಗೆ ಕಡಿದಿದೆ. ಕೆಲವರು ನಾಯಿ ದಾಳಿ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಗಾಯಗೊಂಡಿದ್ದಾರೆ. ನಾಯಿ ಕಡಿತಕ್ಕೆ ಒಳಗಾದವರು ಮತ್ತು ಓಡಿ ಬಿದ್ದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದನ, ಕರುಗಳ ಮೇಲು ಹುಚ್ಚು ನಾಯಿ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಳಗ್ಗೆಯಿಂದ … Read more

ಆಗಷ್ಟೇ ಜನಿಸಿದ ಕರುವಿನ ಮೇಲೆ ಬೀದಿ ನಾಯಿಗಳ ದಾಳಿ, ಸಾವು

Stray-Dog-Attack-General-Image

SHIVAMOGGA LIVE NEWS | 19 DECEMBER 2023 SHIKARIPURA : ಬೀದಿ ನಾಯಿಗಳ ದಾಳಿಗೆ ಆಗಷ್ಟೆ ಜನಿಸಿದ ಕರು ಸಾವನ್ನಪ್ಪಿದೆ. ಶಿಕಾರಿಪುರ ತಾಲೂಕು ಈಸೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈಸೂರಿನ ಉಜ್ಜಳ್ಳಿ ಸುರೇಶ್‌ ಎಂಬುವವರ ಮನೆಯಲ್ಲಿ ಹಸು ಬೆಳಗ್ಗೆ 5 ಗಂಟೆ ಹೊತ್ತಿಗೆ ಕರುವಿಗೆ ಜನ್ಮ ನೀಡಿತ್ತು. ವಾಸನೆ ಹಿಡಿದು ಬಂದ ನಾಯಿಗಳು ಕರುವಿನ ಮೇಲೆ ದಾಳಿ ನಡೆಸಿವೆ. ನಾಯಿಗಳು ಜೋರಾಗಿ ಕೂಗುತ್ತಿರುವುದನ್ನು ಗಮನಿಸಿ ಬಂದ ಸಾರ್ವಜನಿಕರು ಅವುಗಳನ್ನು ಓಡಿಸಿ ಕರುವನ್ನು ರಕ್ಷಿಸಲು ಯತ್ನಿಸಿದ್ದಾರೆ. ಆ … Read more

ಡಾಬರ್‌ ಮ್ಯಾನ್‌ ನಾಯಿ ಎಳೆದೊಯ್ದು ಅರೆಬರೆ ತಿಂದ ಚಿರತೆ

201023-leopard-general-image.webp

SHIVAMOGGA LIVE NEWS | 20 OCTOBER 2023 BHADRAVATHI : ಮನೆ ಮುಂದೆ ಕಟ್ಟಿದ್ದ ಡಾಬರ್‌ ಮ್ಯಾನ್‌ ನಾಯಿಯನ್ನು ಎಳೆದೊಯ್ದಿರುವ ಚಿರತೆಯೊಂದು (Leopard) ಅರೆಬರೆ ತಿಂದು ಪರಾರಿಯಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಧನಂಜಯ ಎಂಬುವವರ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಇದನ್ನೂ ಓದಿ- ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್‌ ಏನು? ಡಾಬರ್‌ ಮ್ಯಾನ್‌ ನಾಯಿಯನ್ನು ಚೈನ್ ಹಾಕಿ ಮನೆ … Read more

ಶಿವಮೊಗ್ಗದಲ್ಲಿ ಕಾರಿನ ಚಕ್ರದ ಮೇಲೆ ಮೂತ್ರ ವಿಸರ್ಜಿಸಿದ ಬೀದಿ ನಾಯಿ, ಕೈ ಕೈ ಮಿಲಾಯಿಸಿದ ಎರಡು ಕುಟುಂಬ

Doddapete-Police-Station.

SHIVAMOGGA LIVE NEWS | 9 SEPTEMBER 2023 SHIMOGA : ಬೀದಿ ನಾಯಿಯೊಂದು (Stray Dog) ಕಾರಿನ ಚಕ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಜಗಳವಾಗಿ ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಶಿವಮೊಗ್ಗದ ಆರ್‌ಎಂಎಲ್‌ ನಗರದಲ್ಲಿ ಘಟನೆ ಸಂಭವಿಸಿದೆ. ಹಾಲಮ್ಮ ಎಂಬುವವರು ತಮ್ಮ ಮನೆ ಸಮೀಪ ಇದ್ದ ಬೀದಿ ನಾಯಿ ಒಂದಕ್ಕೆ ಆಗಾಗ ಊಟ ಹಾಕುತ್ತಿದ್ದರು. ನಾಯಿ ಸಮೀಪದಲ್ಲಿ ನಿಲ್ಲಿಸಿದ್ದ ಕಾರಿನ ಚಕ್ರದ ಮೇಲೆ ಮೂತ್ರ … Read more

ಸಂಸದ ರಾಘವೇಂದ್ರ ಸೇರಿ ಹಲವರು ವಶಕ್ಕೆ | ಚಾರ್ಲಿಗಾಗಿ ಬಹುಮಾನ | ಶಿವಮೊಗ್ಗ ನಗರದ 10 ಫಟಾಫಟ್‌ ಸುದ್ದಿ

BY-Raghavendra-taken-to-police-custody-for-protest

SHIVAMOGGA LIVE | 16 JUNE 2023 | FATAFAT NEWS ಸಂಸದ ರಾಘವೇಂದ್ರ ಸೇರಿ ಹಲವರು ಪೊಲೀಸ್‌ ವಶಕ್ಕೆ SHIMOGA : ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಬಿಜೆಪಿ ಗ್ರಾಮಾಂತರ ಕಾರ್ಯಕರ್ತರು ಗುರುವಾರ ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು. ಬುಧವಾರ ಬಿಜೆಪಿ ನಗರ ಘಟಕದ ಪ್ರತಿಭಟನೆ ವೇಳೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಕಿಟಿಕಿ ಗಾಜಿಗೆ … Read more

ಗೌರಿ ಇನ್ನಿಲ್ಲ, ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ಗೌರವ ನಮನ, ಯಾರಿದು ಗೌರಿ? ಈಕೆಯ ಹಿರಿಮೆ ಏನು?

Police-Dog-Squad-Gowri-Dies

SHIVAMOGGA LIVE NEWS | 10 MAY 2023 SHIMOGA : ಪೊಲೀಸ್‌ ಇಲಾಖೆಯ ಅಪರಾಧ ಪತ್ತೆ ದಳದ ಪ್ರಮುಖ ಶ್ವಾನ (Dog Squad) ಗೌರಿ ಕೊನೆಯುಸಿರೆಳೆದಿದೆ. ಅನಾರೋಗ್ಯ ಹಿನ್ನೆಲೆ ಇವತ್ತು ಬೆಳಗ್ಗೆ ಗೌರಿ ಸಾವನ್ನಪ್ಪಿದೆ. ಸರ್ಕಾರಿ ಗೌರವದೊಂದಿಗೆ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಿವಮೊಗ್ಗದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಗೌರಿ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಗೌರಿಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ – ಬೆಳಗ್ಗೆಯಿಂದ … Read more

ಮಗು ಮೃತದೇಹ ಕಚ್ಚಿಕೊಂಡು ಶಿವಮೊಗ್ಗದ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ, ಯಾರ ಮಗು?

Mc Gann Hospital Building

SHIVAMOGGA LIVE NEWS | 2 APRIL 2023 SHIMOGA : ನಾಯಿಯೊಂದು ನವಜಾತ ಹೆಣ್ಣು ಶಿಶುವನ್ನು (New Born) ಕಚ್ಚಿಕೊಂಡು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದೆ. ಸಾರ್ವಜನಿಕರು, ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ಶಿಶುವನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ನಾಯಿ ಬಾಯಲ್ಲಿ ನವಜಾತ ಶಿಶು ಬೆಳಗಿನ ಜಾವ ನಾಯಿಯೊಂದು ನವಜಾತ (New Born) ಶಿಶುವನ್ನು ಕಚ್ಚಿಕೊಂಡು, ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದ ಭದ್ರತಾ … Read more

ಮಾಲೀಕಳಿಗಾಗಿ ಆಸ್ಪತ್ರೆ ಬಾಗಿಲಲ್ಲೇ ಕಾದು ಕುಳಿತ ನಾಯಿ, ಇದು ರಿಯಲ್ ಚಾರ್ಲಿ ಕಥೆ

Puppi-Dog-Real-Charlie-at-Thirthahalli-Kiran-Hospital

SHIVAMOGGA LIVE NEWS |7 JANUARY 2023 THIRTHAHALLI : ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರಿಗಾಗಿ ನಾಯಿಯೊಂದು (dog) ಅದೆ ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊ ವೈರಲ್ ಆಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನನೆಪಿಸುತ್ತಿದೆ. ಅಷ್ಟೆ ಅಲ್ಲ, ಈಗ ಇಡೀ ಪಟ್ಟಣದ ಜನ ಈ ಶ್ವಾನಕ್ಕೆ (dog) ಚಾರ್ಲಿ ಎಂದು ಕರೆಯುತ್ತಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. … Read more

ಶಿವಮೊಗ್ಗ ನಗರದಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು

Dog-Attack-on-Child-in-Shimoga-PUrle

SHIVAMOGGA LIVE NEWS | 1 DECEMBER 2022 ಶಿವಮೊಗ್ಗ : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಭದ್ರಾವತಿಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಆ ಘಟನೆ ಬೆನ್ನಲ್ಲೆ ಶಿವಮೊಗ್ಗ ನಗರದಲ್ಲಿಯು ಮಗುವೊಂದರ ಮೇಲೆ ಬೀದಿ ನಾಯಿಗಳು ದಾಳಿ (dog bite) ನಡೆಸಿವೆ. ಗಾಯಗೊಂಡಿರುವ ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪುರಲೆಯ ಅವಿನಾಶ್ ಮತ್ತು ರೇಣುಕಾ ದಂಪತಿಯ ಮಗಳು ಪ್ರತೀಕ್ಷಾ ಮೇಲೆ ಬೀದಿ ನಾಯಿಗಳು (dog bite) ದಾಳಿ ನಡೆಸಿವೆ. ಎಡಗೈಯನ್ನು ಕಚ್ಚಿದ್ದು, ಗಂಭೀರ ಗಾಯವಾಗಿದೆ. ವಿಚಾರ ತಿಳಿಯುತ್ತಿದ್ದಂತೆ … Read more