ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದವರ ಮೇಲೆ ಐಜಿಪಿ ಸ್ಕ್ವಾಡ್‌ನಿಂದ ದಾಳಿ, ಎಷ್ಟು ಉಗುರು ಸಿಕ್ಕಿವೆ? ಬಂಧಿತರು ಯಾರು?

ಶಿವಮೊಗ್ಗ ಲೈವ್.ಕಾಂ | ANANDAPURA NEWS | 28 ಆಗಸ್ಟ್ 2020 ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದವರ ಮೇಲೆ ದಾವಣಗೆರೆ ಐಜಿಪಿ ಸ್ಕ್ವಾಡ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ. ಆನಂದಪುರದ ಮಾರಿಕಾಂಬ ದೇಗುಲ ಎದುರಿನ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ. ಇಲ್ಲಿನ ಅಶೋಕ ರಸ್ತೆಯ ಓಂಕೇಶ್ (56), ವಿಶ್ವನಾಥ್ (60) ಮತ್ತು ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚ್ಕಾಳಸರದ ಮೋಹನ್ (35) ಬಂಧಿತರು. ಐದು ಹುಲಿ ಉಗುರುಗಳನ್ನು ಮಾರಾಟಕ್ಕೆ ತಂದಿದ್ದು … Read more

ಶಿಕಾರಿಪುರ ಕೈಗಾರಿಕಾ ತರಬೇತಿ ಸಂಸ್ಥೆಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಹುದು?

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 27 ಆಗಸ್ಟ್ 2020 ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂ‍ಸ್ಥೆಯು ಪ್ರಸಕ್ತ ಸಾಲಿನಲ್ಲಿ ಎಲೆಕ್ಟ್ರೀಷಿಯನ್‌, ಇಎಂ, ಐಸಿಟಿಎಸ್‌ಎಂ, ಫಿಟ್ಟರ್‌ ಮತ್ತು ಟರ್ನರ್‌ ಹಾಗು ಪಿಪಿಪಿ ಅಡಿಯಲ್ಲಿ ಎಲೆಕ್ಟ್ರೀಷಿಯನ್‌, ಫಿಟ್ಟರ್‌ ಮತ್ತು ಎಂಎಂವಿ ವೃತ್ತಿಗಳ ಪ್ರವೇಶಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಗಳೇನು? ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿಬೇಕು. ಆಸಕ್ತರು ಪ್ರವೇಶಾತಿ ಕುರಿತಾದ ಅರ್ಜಿ ಮತ್ತು ಮತ್ತಿತರ ಮಾಹಿತಿಗೆ www.emptrg.kar.nic.in ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಆಗಸ್ಟ್‌ ೩೧ರೊಳಗಾಗಿ … Read more

ಜೋಗದಲ್ಲಿ ಸಾಮಾಜಿಕ ಅಂತರ ಕಡ್ಡಾಯ, ಉಲ್ಲಂಘಿಸಿದ ಪ್ರವಾಸಿಗರಿಗೆ ಶಿವಮೊಗ್ಗ ಎಸ್ಪಿ ಕ್ಲಾಸ್

270820 Shimoga SP Warns Tourists in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಆಗಸ್ಟ್ 2020 ಜೋಗ ಜಲಪಾತ ವೀಕ್ಷಣೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹಲವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹ ಪ್ರವಾಸಿಗರಿಗೆ ಇವತ್ತು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಇವತ್ತು ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಹಾಕಲ್ಲ, ಸಾಮಾಜಿಕ ಅಂತರವಿಲ್ಲ ಅಭಿವೃದ್ಧಿ ಕುರಿತು ಪರಿಶೀಲನೆಗೆ ಇವತ್ತು ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಜೋಗ ಜಲಪಾತಕ್ಕೆ ಭೇಟಿ ನೀಡಿದ್ದರು. ಪರಿಶೀಲನೆಗೆ ತೆರಳಿದ್ದ … Read more

ಕೈ ಕೊಟ್ಟ ಶುಂಠಿ ಬೆಳೆ, ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

farmer suicide poison

ಶಿವಮೊಗ್ಗ ಲೈವ್.ಕಾಂ | SORABA NEWS | 27 ಆಗಸ್ಟ್ 2020 ಸಾಲಬಾಧೆ ತಾಳಲಾರದೆ ಶುಂಠಿ ಬೆಳೆಗೆ ಸಿಂಪಡಿಸುವ ಔಷಧ ಸೇವಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನವಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯ ನೆಗವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವಂತಪ್ಪ (೫೫) ಆತ್ಮಹತ್ಯೆ ಮಾಡಿಕೊಂಡ ರೈತ. ಮಗಳ ಮದುವೆ ಮತ್ತು ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಸುಮಾರು ೩.೭೦ ಲಕ್ಷ ರೂ. ಸಾಲವಿತ್ತು ಎಂದು ಹೇಳಲಾಗುತ್ತಿದೆ. ಸಾಲ ತೀರಿಸಲು ಬಸವಂತಪ್ಪ ಅವರು ಶುಂಠಿ ಬೆಳೆಯನ್ನು ನಂಬಿಕೊಂಡಿದ್ದರು. ಆದರೆ … Read more

ಸಿಗಂದೂರು ಲಾಂಚ್‌ನಲ್ಲಿ ಪ್ರವಾಸಿಗರು, ಸ್ಥಳೀಯರ ನಡುವೆ ಜಟಾಪಟಿ

Sigandur Launch with people 1

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಆಗಸ್ಟ್ 2020 ಲಾಂಚ್‍ನಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕಳಸವಳ್ಳಿ ದಡದಲ್ಲಿ ಬುಧವಾರ ಘಟನೆ ಸಂಭವಿಸಿದೆ. ಗದಗದಿಂದ ಸಿಗಂದೂರಿಗೆ ಬಂದಿದ್ದ ಪ್ರವಾಸಿಗರು, ತಮ್ಮ ವಾಹನವನ್ನು ಮೊದಲು ಲಾಂಚ್‍ಗೆ ಹತ್ತಿಸಬೇಕು ಎಂದು ಜಗಳ ತೆಗೆದಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಕೈ ಕೈ ಮಿಲಾಯಿಸುವ … Read more

ಪೊಲೀಸ್ ಇನ್ಸ್‌ಪೆಕ್ಟರ್ ಫೇಸ್‌ಬುಕ್ ಹ್ಯಾಕ್, 20 ಸಾವಿರ ಕೊಡುವಂತೆ ಸ್ನೇಹಿತರಿಗೆ ಮನವಿಯ ಮೆಸೇಜ್

facebook logo

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಆಗಸ್ಟ್ 2020 ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರ ಫೇಸ್‍ಬುಕ್ ಖಾತೆಯನ್ನೇ ಹ್ಯಾಕ್ ಮಾಡಿ, ಅವರ ಫೇಸ್‍ಬುಕ್ ಖಾತೆಯಲ್ಲಿರುವ ಸ್ನೇಹಿತರಿಗೆ ಹಣ ನೀಡುವಂತೆ ಹ್ಯಾಕರ್‍ಗಳು ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ಅವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಬಳಿಕ ಅವರ ಫ್ರೆಂಡ್ ಲಿಸ್ಟ್‍ನಲ್ಲಿರುವವರಿಗೆ ಮೆಸೇಜ್ ಕಳುಹಿಸಿರುವ ಹ್ಯಾಕರ್‍ಗಳು, ತಾವು ಕಷ್ಟದಲ್ಲಿದ್ದು, 20 ಸಾವಿರ ಹಣ ನೀಡುವಂತೆ … Read more

ಭದ್ರಾವತಿ VISLಗೆ ಸರ್ಕಾರವೇ ಬಂಡಾವಳ ಹೂಡಿಕೆ ಮಾಡಲಿ, ಕಾರ್ಮಿಕರ ಆಗ್ರಹ, ಪ್ರತಿಭಟನೆ

260820 VISL Workers Protest 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 26 ಆಗಸ್ಟ್ 2020 ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಸ್.ರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಐಎಸ್‍ಎಲ್ ಕಾರ್ಮಿಕ ಸಂಘ ಮತ್ತು ಗುತ್ತಿಗೆ ಕಾರ್ಮಿಕ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿ, ಕಾರ್ಖಾನೆಯನ್ನು ಖಾಸಗೀಕರಣ ನೀತಿಯಿಂದ ಹೊರತೆಗೆಯಬೇಕು. ಸರ್ಕಾರವೇ ಅಗತ್ಯವಿರುವ ಬಂಡಾವಳ ಹೂಡಿಕೆ ಮಾಡಬೇಕು ಎಂದು ಮನವಿ ಮಾಡಿದರು. ಗುತ್ತಿಗೆ ಕಾರ್ಮಿಕರಿಗೂ ತುಟ್ಟಿಭತ್ಯೆ ಅನ್ವಯಿಸಿ ವೇತನ ನೀಡಬೇಕು, ಮೂಲ ವೇತನಕ್ಕೆ ಅನುಗುಣವಾಗಿ … Read more

ಜೋಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರು ಯುವಕ, ರಕ್ಷಣೆ ಬಳಿಕ ‘ರಾಣಿ ಫಾಲ್ಸ್ ಮೇಲೆ ಜ್ಞಾನೋದಯವಾಯ್ತು’ ಅಂದ

260820 Youth Attempts Suicide in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 26 ಆಗಸ್ಟ್ 2020 ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ಯುವಕ ಬಚಾವಾಗಿದ್ದಾನೆ. ಯಾರಿದು ಯುವಕ? ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಆಗಮಿಸಿದ್ದ ಚೇತನ್ ಎಂಬ ಯುವಕ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬ್ರಿಟಿಷ್ ಬಂಗಲೆ ಬಳಿ ರಾಣಿ ಫಾಲ್ಸ್ ಕಡೆಯಿಂದ ಕೆಳಗೆ ಧುಮುಕಲು ಪ್ರಯತ್ನಿಸಿದ್ದಾನೆ. ಈತ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, … Read more

ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕಿಯನ್ನು ಅಡ್ಡಗಟ್ಟಿ ಐದು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಶಿವಮೊಗ್ಗ ಲೈವ್.ಕಾಂ | HOSANAGARA NEWS | 26 ಆಗಸ್ಟ್ 2020 ಬೈಕ್‍ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೊಸನಗರ ತಾಲೂಕು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಸುಮಾರು ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೇಗಾಯ್ತು ಘಟನೆ? ಆರೋಡಿ ಕೊಡಸೆ ಸರ್ಕಾರಿ ಶಾಲೆ ಶಿಕ್ಷಕಿ ಮಂಜುಳಾ, ತಮ್ಮ ಬೈಕ್‍ನಲ್ಲಿ ತೆರಳುವಾಗ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಆರೋಡಿಯಿಂದ ಸಂಸೆ ಕಡೆಗೆ ತೆರಳುತ್ತಿದ್ದಾಗ … Read more

ಸಾಗರ ತಾಲೂಕು ಪಂಚಾಯಿತಿ ಸಭೆಯಲ್ಲಿ ಮತ್ತೆ ಕೋರಂ ಕೊರತೆ, ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಐವರಷ್ಟೇ ಹಾಜರು, ಕಾರಣವೇನು?

260820 Sagara Taluk Panchayat Meeting 1

ಶಿವಮೊಗ್ಗ ಲೈವ್.ಕಾಂ | SAGARA NEWS | 25 ಆಗಸ್ಟ್ 2020 ಕೋರಂ ಕೊರತೆಯಿಂದಾಗಿ ಸಾಗರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಮತ್ತೆ ಮುಂದಕ್ಕೆ ಹೋಗಿದೆ. ಸೆಪ್ಟಂಬರ್ 3ರಂದು ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದೆ. ಇವತ್ತು ಸಭೆಯಲ್ಲಿ ಯಾರೆಲ್ಲ ಇದ್ದರು? ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸದಸ್ಯರಾದ ಆನಂದಿ ಲಿಂಗರಾಜ್, ಹೇಮಾ ರಾಜಪ್ಪ, ಸವಿತಾ ದೇವರಾಜ್ ಅವರು ಭಾಗವಹಿಸಿದ್ದರು. 15 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ … Read more