ಮಾನವೀಯತೆ ಮೆರೆದ ಮಹಿಳಾ ಎಎಸ್ಐ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

020820 Police Help A Lady in Sagara Talaguppa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020 ವಿವಸ್ತ್ರಳಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರಿಗೆ ಎಎಸ್‍ಐ ಒಬ್ಬರು ಬಟ್ಟೆ ತೊಡಿಸಿ, ಊಟ ಮಾಡಿಸಿ, ಊರಿಗೆ ಬಸ್ಸು ಹತ್ತಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದ್ದು, ಎಎಸ್ಐ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಳಗುಪ್ಪದಲ್ಲಿ ಮಹಿಳೆಯೊಬ್ಬರು ಬಟ್ಟೆ ಇಲ್ಲದೆ ಓಡಾಡುತ್ತಿದ್ದರು. ಬಕ್ರಿದ್ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಎಎಸ್‍ಐ ಮೀರಾಬಾಯಿ ಇದನ್ನು ಗಮನಿಸಿ, ಮಹಿಳೆಗೆ ಬಟ್ಟೆ ತೊಡಿಸಿ, ಊಟ, ತಿಂಡಿ ಕೊಡಿಸಿ, ಆಪ್ತ ಸಮಾಲೋಚನೆ ಮಾಡಿ, ಊರಿಗೆ ಕಳುಹಿಸಿದ್ದಾರೆ. ಮಹಿಳೆ … Read more

ಜಿಲ್ಲಾ ಪಂಚಾಯಿತಿ ಮುಂದೆ ಸಾಗರ ತಾಲೂಕು ಪಂಚಾಯಿತಿ ಸದಸ್ಯರ ಪ್ರತಿಭಟನೆ, ಅಧ್ಯಕ್ಷರನ್ನು ವಿರುದ್ಧ ದೂರು

290720 Sagara Taluk Panchayat Member Prortest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಜುಲೈ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರದ್ದು ತುಘಲಕ್ ದರ್ಬಾರ್. ಕೂಡಲೆ ಅವರು ಅಧಿಕಾರ ಬಿಟ್ಟು ಕೆಳಗಿಳಿಬೇಕು ಎಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರ್ವ ಪಕ್ಷದ ಸದಸ್ಯರ ಪ್ರತಿಭಟನೆ ಪ್ರತಿಭಟನೆಯಲ್ಲಿ ಬಿಜೆಪಿಯ ಆರು ಸದಸ್ಯರು, ಕಾಂಗ್ರೆಸ್‍ನ ಒಬ್ಬರು, ಜೆಡಿಎಸ್‍ನ ಒಬ್ಬರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಹಕ್ರೆ ಅವರು … Read more

ಭದ್ರಾವತಿ ಕೂಡ್ಲಿಗೆರೆ ಬಳಿ ಎರಡು ಆಲೆಮನೆಗಳ ಮೇಲೆ ತಹಶೀಲ್ದಾರ್ ನೇತೃತ್ವದ ತಂಡದಿಂದ ದಿಢೀರ್ ದಾಳಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಜುಲೈ 2020 ಎರಡು ಆಲೆಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ, ಪ್ರಕರಣ ದಾಖಲಿಸಿದೆ. ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಿದ್ದರಿಂದ ಈ ಕ್ರಮ ಕೈಗೊಳ‍್ಳಲಾಗಿದೆ. ಕೂಡ್ಲಿಗೆರೆ ಹೋಬಳಿಯ ಅರಳಿಹಳ್ಳಿ ಮತ್ತು ಕಾಗೆಹಳ್ಳ ಗ್ರಾಮದ ಎರಡು ಆಲೆಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕಬ್ಬು ಬಳಸಿ ಬೆಲ್ಲ ತಯಾರಿಸಬೇಕು. ಆದರೆ ಈ ಆಲೆ ಮನೆಗಳಲ್ಲಿ ಸಕ್ಕರೆ ಬಳಸಿ ಬೆಲ್ಲ ಸಿದ್ಧಪಡಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ … Read more

ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಭದ್ರಾವತಿ ತಾಲೂಕಿನ ಏಳು ಮಂದಿಯಲ್ಲಿ ಕರೋನ ಸೋಂಕು

Corona PPE Kit and swab box

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಜುಲೈ 2020 ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ಏಳು ಮಂದಿಯಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಕೂಡ್ಲಿಗೆರೆಯ ಅರಣ್ಯ ಸಿಬ್ಬಂದಿ (35), ಹುತ್ತ ಕಾಲೋನಿಯ ಅರಣ್ಯ ಸಿಬ್ಬಂದಿ (35) ಇವರಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೊಂದೆಡೆ ಗಾಂಧಿ ನಗರದ ನಿವಾಸಿ (43), ಹಳೇ ಬುಳ್ಳಾಪುರದ ಪುರುಷ (34), ವಿಜಯನಗರದ ಪುರುಷ (30), ಕಲ್ಲಹಳ್ಳಿಯ ಪುರುಷ (30), ಮಾಚೇನಹಳ್ಳಿಯ ಪುರುಷ (35) ಇವರಲ್ಲಿ ಸೋಂಕು … Read more

ಸೊರಬ ತಾಲೂಕಿನ ಇಬ್ಬರಲ್ಲಿ ಕರೋನ ಪಾಸಿಟಿವ್, ಎಲ್ಲಿಯವರು?

ಶಿವಮೊಗ್ಗ ಲೈವ್.ಕಾಂ | SORABA NEWS | 29 ಜುಲೈ 2020 ಸೊರಬ ತಾಲೂಕಿನ ಇಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಕೂಡಲೆ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಬಾರಂಗಿಯ 50 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪ‍ತ್ತೆಯಾಗಿದೆ. ಮತ್ತೊಂದೆಡೆ ಬೆಲವಂತನಕೊಪ್ಪದ 59 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಿಗೆ ಪಾಸಿಟಿವ್ ಬಂದ ಹಿನ್ನೆಲೆ ಕೂಡಲೆ ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಶುರು ಮಾಡಲಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ … Read more

ತೀರ್ಥಹಳ್ಳಿಯ ನಾಲ್ವರಲ್ಲಿ ಕರೋನ ಸೋಂಕು, ತರಕಾರಿ ವ್ಯಾಪಾರಿಗೆ ಪಾಸಿಟಿವ್

ಶಿವಮೊಗ್ಗ ಲೈವ್.ಕಾಂ | SHIMOGA | 28 ಜುಲೈ 2020 ತೀರ್ಥಹಳ್ಳಿಯಲ್ಲಿ ಸೋಮವಾರ ನಾಲ್ಕು ಮಂದಿಯಲ್ಲಿ ಕರೋನ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಒಬ್ಬ ತರಕಾರಿ ವ್ಯಾಪಾರಿ ಇರುವುದು ಆತಂಕ ಮೂಡಿಸಿದೆ. ತರಕಾರಿ ವ್ಯಾಪಾರಿಗೆ ಸೋಂಕು ತೀರ್ಥಹಳ್ಳಿ ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡುವ ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಪತ್ತೆಯಾಗಿದೆ. ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ ವ್ಯಾಪಾರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ತಗುಲಿರುವುದು ದೃಢವಾಗಿದೆ. ಮತ್ತೊಂದೆಡೆ ತೀರ್ಥಹಳ್ಳಿಯ ದತ್ತರಾಜಪುರದಲ್ಲಿ ಇಬ್ಬರಿಗೆ, ಕಿತ್ತಂದೂರು ಗ್ರಾಮದ ಒಬ್ಬರಲ್ಲಿ … Read more

ಕಾರ್ಗಲ್‌ನಲ್ಲಿ ಮೊದಲ ಕರೋನ ಕೇಸ್, ಸೋಂಕಿತ ವ್ಯಕ್ತಿಯ ಮನೆ ಇರುವ ರಸ್ತೆ ಸೀಲ್ ಡೌನ್

ಶಿವಮೊಗ್ಗ ಲೈವ್.ಕಾಂ | SAGARA | 28 ಜುಲೈ 2020 ಕಾರ್ಗಲ್‌ನಲ್ಲಿ ಮೊಟ್ಟಮೊದಲ ಕರೋನ ಪ್ರಕರಣ ಪತ್ತೆಯಾಗಿದೆ. ಹಾಗಾಗಿ ಸೋಂಕಿತ ವ್ಯಕ್ತಿಯ ಮನೆ ಭಾಗದ ರಸ್ತೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಇಲ್ಲಿನ ೬೦ ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಇವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ಮನೆ ಇರುವ ರಸ್ತೆಯನ್ನು … Read more

ಭದ್ರಾವತಿ ಪೊಲೀಸರಿಂದ ದಾಳಿ, ಮನೆ ಹಿತ್ತಲಲ್ಲಿ ಬೆಳೆಸಿದ್ದ 10 ಕೆ.ಜಿ ಗಾಂಜಾ ಗಿಡ ವಶಕ್ಕೆ, ಒಬ್ಬ ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 ಜುಲೈ 2020 ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಯುವರಾಜ(೩3) ಬಂಧಿತ ವ್ಯಕ್ತಿ. ಮನೆ ಹಿತ್ತಲಿನಲ್ಲಿ ಚೆಂಡು ಹೂ ಬೆಳೆದಿದ್ದರು. ಇದರ ನಡುವೆ ಗಾಂಜಾ ಬೆಳೆಸಿದ್ದರು. 10 ಕೆ.ಜಿ 300 ಗ್ರಾಂನಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಡಿವೈಎಸ್‍ಪಿ ಸುಧಾಕರ್ ನಾಯಕ್, ಭದ್ರಾವತಿ ಗ್ರಾಮಾಂತರ ಠಾಣೆ … Read more

ತೀರ್ಥಹಳ್ಳಿಯ ಕನ್ನಂಗಿಯಲ್ಲಿ ಕ್ಷೌರಿಕನಿಗೆ ಕರೋನ, ಹೇರ್ ಕಟ್ ಮಾಡಿಸಿಕೊಂಡವರಿಗೆ ಕ್ವಾರಂಟೈನ್, ಸೋಂಕು ತಗುಲಿದ್ದು ಹೇಗೆ?

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 23 ಜುಲೈ 2020 ತೀರ್ಥಹಳ್ಳಿ ತಾಲೂಕು ಕನ್ನಂಗಿಯಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಗೆ ಕರೋನ ಸೋಂಕು ತಗುಲಿದೆ. ಈತನಿಂದ ಹೇರ್ ಕಟ್ ಮಾಡಿಸಿಕೊಂಡವರಲ್ಲಿ ಈಗ ಅತಂಕ ಸೃಷ್ಟಿಯಾಗಿದೆ. ಕ್ಷೌರಿಕನಿಗೆ ಸೋಂಕು ತಗುಲಿದ್ದು ಹೇಗೆ? ಕನ್ನಂಗಿ ಸಮೀಪದ ಕಳ್ಳಿಗದ್ದೆ ಗ್ರಾಮದಲ್ಲಿ ಜೂನ್ 30ರಂದು ನಿಧನರಾಗಿದ್ದ ಮಹಿಳೆಯ ಅಂತ್ಯಕ್ರಿಯೆಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಂಬಂಧಿಗಳು ಬಂದಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರು ಸೇರಿ ಆ ಕುಟುಂಬದ 9 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಕೆಲವರಿಗೆ … Read more

ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ಎಡ, ಬಲ ನಾಲೆಗಳಿಗೆ ನೀರು

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2020 ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಲಿ ಎಂದು ಜುಲೈ 22ರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ಕಾಲುವೆ ಪಾತ್ರದಲ್ಲಿ ಸಾರ್ವಜನಿರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ಇತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ … Read more