ಮಾಸ್ಕ್ ಧರಿಸದವರಿಗೆ ಫೈನ್ ಹಾಕ್ತೀವಿ ಅಂತಿದ್ದರು, ಅನುಮಾನದಿಂದ ವಿಚಾರಿಸಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020 ಲಾಕ್‍ಡೌನ್ ಸಂದರ್ಭವನ್ನು ಬಳಿಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಮತ್ತು ನಕಲಿ ಆರೋಗ್ಯ ಇಲಾಖೆ ಅಧಿಕಾರಿ ಜೈಲು ಸೇರಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಗ್ರಾಮಗಳಲ್ಲಿ ಜನರನ್ನ ಬೆದರಿಸಿ ಹಣ ವಸೂಲಿಗಿಳಿದಿದ್ದರು. ಹಣ ವಸೂಲಿ ಹೇಗೆ? ಯಾಕೆ? ಕರೋನ ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕರಿಬ್ಬರು, ವಾಹನಗಳಲ್ಲಿ ಹೋಗುತ್ತಿದ್ದವರನ್ನು ತಡೆಯುತ್ತಿದ್ದರು. ತಮ್ಮನ್ನು ಪೊಲೀಸ್ … Read more

ಸಾಗರದಲ್ಲಿ ತರಕಾರಿ ಮಾರಾಟಕ್ಕೆ ರೈತರಿಗೆ ಜಾಗ ಫಿಕ್ಸ್, ಎಲ್ಲೆಲ್ಲಿ ಮಾರಾಟ ಮಾಡಬಹುದು? ಟೈಮಿಂಗ್ ಏನು?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 21 ಏಪ್ರಿಲ್ 2020 ಲಾಕ್‍ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಆಗಬಾರದು. ರೈತರು ಬೆಳೆದ ಬೆಳೆಯನ್ನು ಪಟ್ಟಣದಲ್ಲಿ ಮಾರಾಟಕ್ಕೆ ತಾಲೂಕು ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಲಾಗುತ್ತೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಅಭಯ ನೀಡಿದ್ದಾರೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ, ಸಾಗರ ನ್ಯಾಯಾಲಯದ ಎದುರಿನ ಒಂದು ಭಾಗ, ಜೋಗ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗದ ಚಾಮರಾಜಪೇಟೆ ರಸ್ತೆ, ಹಳ್ಳಿಗಳಿಂದ ನಗರಕ್ಕೆ … Read more

ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದ ಪ್ರಕರಣಕ್ಕೆ ಟ್ವಿಸ್ಟ್, ಸದಸ್ಯರ ವಿರುದ್ಧ ಪೊಲೀಸ್ ಕೇಸ್ಗೆ ಸೂಚನೆ, ಅನುಪಾಲನ ವರದಿಗೆ ಆಗ್ರಹ

200420 TP President Office Door Locked 1

ಶಿವಮೊಗ್ಗ ಲೈವ್.ಕಾಂ | SAGARA | 21 ಏಪ್ರಿಲ್ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದ ಪ್ರಕರಣ ಮತ್ತೊಂದು ಟ್ವಿಸ್ಟ್  ಪಡೆದುಕೊಂಡಿದೆ. ಬೀಗ ಹಾಕಿದವರ ವಿರುದ್ಧ ದೂರು ನೀಡುವಂತೆ ಆದೇಶಿಸಿ ತಾಲೂಕು ಪಂಚಾಯಿತಿ ಇಒಗೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸೂಚನೆ ನೀಡಿದ್ದಾರೆ. ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹಾಗಾಗಿ ಬೀಗ ಹಾಕಿದವರ ವಿರುದ್ಧ ಕೂಡಲೇ ದೂರು ದಾಖಲಿಸಿ ಅನುಪಾಲನ ವರದಿ ನೀಡುವಂತೆ ಇಒಗೆ ಪತ್ರ ಬರೆದು ಸೂಚಿಸಿದ್ದಾರೆ. ಕೆಲವು … Read more

ಅಧ್ಯಕ್ಷರ ಕೊಠಡಿಗೆ ಸದಸ್ಯರಿಂದಲೇ ಬೀಗ, ತಾರಕಕ್ಕೇರಿದ ಅವಿಶ್ವಾಸ ಕದನ

200420 TP President Office Door Locked 1

ಶಿವಮೊಗ್ಗ ಲೈವ್.ಕಾಂ | SAGARA | 20 ಏಪ್ರಿಲ್ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ ಮತ್ತೊಂದು ಹಂತಕ್ಕೆ ತಲುಪಿದೆ. ಇವತ್ತು ಅಧ್ಯಕ್ಷರ ಕೊಠಡಿಗೆ ಸದಸ್ಯರೆ ಬೀಗ ಹಾಕಿ ಪ್ರತಿರೋಧ ತೋರಿಸಿದ್ದಾರೆ. ಬೀಗ ಹಾಕಲು ಕಾರಣವೇನು? ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನಾಲ್ಕು ವರ್ಷದಿಂದ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಹನ್ನೊಂದು ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಈ ಸಂಬಂಧ ಎರಡು ಸಭೆಗಳನ್ನು ನಡೆಸಲಾಗಿದೆ. ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಒಂದು ಸಭೆಯಲ್ಲಿ … Read more

ಬೆಂಗಳೂರಿಂದ ಶಿವಮೊಗ್ಗ, ಸೊರಬಕ್ಕೆ ಆಂಬುಲೆನ್ಸ್‌ನಲ್ಲಿ ಬಂದ ಜನರು, ಆಂಬುಲೆನ್ಸ್ ಸೀಜ್, ಬಿತ್ತು ಕೇಸ್

130420 Ambulance Seized in Shimoga 1

ಶಿವಮೊಗ್ಗ ಲೈವ್.ಕಾಂ | SORABA | 13 ಏಪ್ರಿಲ್ 2020 ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಬೆಂಗಳೂರಿನಿಂದ ಜನರನ್ನು ಕರೆತಂದಿದ್ದ ಆಂಬುಲೆನ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಬುಲೆನ್ಸ್‌ ಚಾಲಕ ಮತ್ತು ಅದರಲ್ಲಿ ಬಂದಿದ್ದ ಮೂವರ ವಿರುದ್ಧ ಕೇಸ್‌ ಬಿದ್ದಿದೆ. ಯಾವ ಊರಿಗೆ ಬಂದಿದ್ದದರು? ಲಾಕ್‌ಡೌನ್‌ ಹಿನ್ನೆಲೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳುವುದು ನಿಷೇಧ. ಆದರೂ ಬೆಂಗಳೂರಿನಿಂದ ಸೊರಬದ ಕಾನಕೇರಿಗೆ ಮೂವರನ್ನು ಬಂದಿದ್ದರು. ಇವರೆಲ್ಲ ಭಾನುವಾರ ಆಂಬುಲೆನ್ಸ್‌ನಲ್ಲಿ ತಮ್ಮ ಊರಿಗೆ ಬಂದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸೊರಬ ಠಾಣೆ ಪೊಲೀಸರು … Read more

ಭದ್ರಾವತಿಯ ವೈನ್ ಶಾಪ್‌ನಿಂದ ಎಣ್ಣೆ ಕದ್ದವರು 24 ಗಂಟೆಯಲ್ಲೇ ಅರೆಸ್ಟ್, ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 13 ಏಪ್ರಿಲ್ 2020 ವೈನ್ ಸ್ಟೋರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯಲ್ಲೇ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಲಾಕ್‌ಡೌನ್ ಬಳಿಕ ಮದ್ಯ ಸಿಗದೇ ಸಾವಿರಾರು ಜನ ಪರಿತಪಿಸುತ್ತಿದ್ದಾರೆ. ಕೆಲವು ಕಡೆ ಸಿಕ್ಕ ಮದ್ಯಕ್ಕೆ ನಾಲ್ಕೈದು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ವೈನ್‌ ಶಾಪ್‌ನಿಂದ ಮದ್ಯ ಕದ್ದು ಹಣ ಮಾಡಿಕೊಳ್ಳಲು ಮುಂದಾಗಿದ್ದ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ. 24 ಸಾವಿರದ ಎಣ್ಣೆ ಕದ್ದರು … Read more

ಲಾಕ್‌ಡೌನ್‌ ಇದ್ದರೂ ಜೆಲ್ಲಿ ಕ್ರಷರ್ ಲಾರಿಗಳ ಸಂಚಾರ, ಹೊಸನಗರದಲ್ಲಿ ಗ್ರಾಮಸ್ಥರಿಂದ ಲಾರಿ ತಡೆದು ಆಕ್ರೋಶ

130420 Kumbathi Lorry Protest Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA | 13 ಏಪ್ರಿಲ್ 2020 ಕರೋನ ಲಾಕ್‌ಡೌನ್‌ ಅವಧಿಯಲ್ಲೂ ಕ್ರಷರ್‌ಗಳಿಂದ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಮ‍ಸ್ಥರು ಇವತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸನಗರ ತಾಲೂಕು ಕುಂಬತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರತಿದಿನ ಸುಮಾರು ೧೫ ಲಾರಿಗಳು ಜೆಲ್ಲಿ ಕ್ರಷರ್‌ಗಳಿಂದ ಕುಂಬತ್ತಿ ಗ್ರಾಮದಲ್ಲಿ ಸಂಚರಿಸುತ್ತಿವೆ. ಇದರಿಂದ ಧೂಳು ಹೆಚ್ಚಾಗಿದೆ. ಅಲ್ಲದೆ ಹೊರಗಿನಿಂದ ಲಾರಿಗಳು ಬರುವುದರಿಂದ ಜನರಲ್ಲಿ ಸೋಂಕು ತಗಲುವ ಆತಂಕ ಮೂಡಿದೆ. ಇಲ್ಲಿ ಸುತ್ತಾ ಗ್ರಾಮದಲ್ಲಿ ಇರುವ ಜೆಲ್ಲಿ ಕ್ರಷರ್‌ಗಳಿಂದ … Read more

ಕೇರಳದಿಂದ ತರಕಾರಿ ಲಾರಿಯಲ್ಲಿ ಭದ್ರಾವತಿಗೆ ಬಂದವನು ಮೆಗ್ಗಾನ್ ಆಸ್ಪತ್ರೆ ಕ್ವಾರಂಟೈನ್‌ಗೆ

Mc Gann Hospital Building

ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020 ಕೇರಳದಿಂದ ತರಕಾರಿ ಲಾರಿಯಲ್ಲಿ ಭದ್ರಾವತಿಗೆ ಬಂದು ಪರಿಚಯದವರ ಮನೆಯಲ್ಲಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, 28 ದಿನ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಿಂದ ತಬ್ಬೀರ್ ಸಾಬ್ (55) ಎಂಬಾತ ಭದ್ರಾವತಿಗೆ ಆಗಮಿಸಿದ್ದಾನೆ. ಈತ ಏಪ್ರಿಲ್ 10ರಂದು ದೊಣಬಘಟ್ಟದ  ಪರಿಚಯದವರ ಮನೆಗೆ ಬಂದಿದ್ದ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೆ ಆರೋಗ್ಯ ಇಲಾಖೆ ಅಧಿಕಾರಿಗಳು ತಬ್ಬೀರ್ ಸಾಬ್‍ನನ್ನು … Read more

ಶಿವಮೊಗ್ಗದ ಗಾಜನೂರಿನಲ್ಲಿ ಬಾರ್ ಗೋಡೆ ಕೊರೆದ ಕಳ್ಳರು

120420 Bar theft attempt in gajanur 1

ಶಿವಮೊಗ್ಗ ಲೈವ್.ಕಾಂ | SHIMOGA | 12 ಏಪ್ರಿಲ್ 2020 ಲಾಕ್‌ಡೌನ್‌ ಹಿನ್ನೆಲೆ ದೇಶಾದ್ಯಂತ ಮದ್ಯ ಮಾರಾಟ ಬಂದ್‌ ಆಗಿದೆ. ಇದರಿಂದ ಮದ್ಯ ಪ್ರಿಯರು ಪರಿತಪಿಸುತ್ತಿದ್ದಾರೆ. ಈ ನಡುವೆ ಬಾರ್‌, ವೈನ್‌ ಶಾಪ್‌ಗಳ ಗೋಡೆ ಕೊರೆದು, ಬಾಟಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಶಿವಮೊಗ್ಗ ತಾಲೂಕು ಗಾಜನೂರಿನಲ್ಲೂ ಇಂಥದ್ದೇ ಪ್ರಕರಣ ನಡೆದಿದೆ. ಗೋಡೆ ಕೊರೆದು ಎಣ್ಣೆ ಹಾರಿಸಲು ಪ್ಲಾನ್‌ ಗಾಜನೂರಿನ ಸ್ನೇಹ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಬಾರ್‌ನ ಗೋಡೆ ಕೊರೆದು ಕಳ್ಳರು … Read more

ಕರೋನ ಆತಂಕದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಐದನೇ ಬಲಿ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 06 ಏಪ್ರಿಲ್ 2020 ಕರೋನ ಭೀತಿಯ ನಡುವೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ಕೆಎಫ್’ಡಿಗೆ ಬಲಿಯಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ತೀರ್ಥಹಳ್ಳಿ ತಾಲೂಕು ಉಡುಕೆರೆ ಗ್ರಾಮದ ಸುಬ್ರಹ್ಮಣ್ಯ (52) ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಾರ್ಚ್ 30ರಂದು ಸುಬ್ರಹ್ಮಣ್ಯ ಅವರಿಗೆ ಕೆಎಫ್’ಡಿ ಇರುವುದು ದೃಢಪಟ್ಟಿತ್ತು. ಅಂದಿನಿಂದಲೂ ಸುಬ್ರಹ್ಮಣ್ಯ ಅವರು ಮಣಿಪಾಲದ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಬ್ರಹ್ಮಣ್ಯ ಅವರು ಕೊನೆಯುಸಿರೆಳೆದಿದ್ದಾರೆ. ಈತನಕ … Read more