ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಪ್ರತಿಭಟನೆ, ಎಂಎಲ್ಎ, ಅಧಿಕಾರಿಗಳು ಬರುವವರೆಗೂ ಸಂಸ್ಕಾರವಿಲ್ಲ ಅಂತಾ ಪಟ್ಟು

150320 Aralagodu Villagers Protest 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020 ಶಂಕಿತ ಮಂಗನ ಕಾಯಿಲೆಗೆ ಮೃತರಾಗಿರುವ ಕೋಮರಾಜ್ ಜೈನ್ ಅವರ ಮೃತದೇಹವನ್ನು ಅರಳಗೋಡು ಗ್ರಾಮ ಪಂಚಾಯಿತಿ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಗ್ರಾಮಕ್ಕೆ ಬರುವವರೆಗೂ ಸಂಸ್ಕಾರ ಮಾಡುವುದಿಲ್ಲ ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಮೃತದೇಹ ಇರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಗುಪ್ಪೆ ಗ್ರಾಮದ ಕೋಮರಾಜ್ ಜೈನ್ (36) ಅವರು ಶಂಕಿತ … Read more

ಕಾರು ಚಾಲಕ, ಪತ್ನಿ ಆತ್ಮಹತ್ಯೆ ಹಿಂದೆ ಬಿಜೆಪಿ ಮುಖಂಡನ ಕೈವಾಡದ ಆರೋಪ, ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

150320 Sagara Protest for Driver Suicide 1

ಶಿವಮೊಗ್ಗ ಲೈವ್.ಕಾಂ | SAGARA | 15 ಮಾರ್ಚ್ 2020 ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರ ಸಾವಿನ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಾಗರ ಪಟ್ಟಣ ಠಾಣೆ ಎದುರು ಪ್ರತಿಭಟನೆ ನಡೆಸಿ, ಸರ್ಕಲ್ ಇನ್ಸ್’ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಗಿದೆ. ಏನಿದು ಪ್ರಕರಣ? ಹುಟ್ಟುಹಬ್ಬದ ದಿನವೇ ಸಾಗರದ ಬಸವನಹೊಳೆ ಡ್ಯಾಂ ಬಳಿ ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. … Read more

ವಿದ್ಯುತ್ ಸ್ಪರ್ಶ, ಕಂಬದಿಂದ ಬಿದ್ದು ಗುತ್ತಿಗೆ ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಾಯ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA | 15 ಮಾರ್ಚ್ 2020 ವಿದ್ಯುತ್ ಕಂಬದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನಿಗೆ ವಿದ್ಯುತ್ ಶಾಕ್ ತುಗುಲಿ, ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಮತ್ತೊಬ್ಬ ಗುತ್ತಿಗೆ ಕಾರ್ಮಿಕನಿಗೆ ವಿದ್ಯತ್ ಸ್ಪರ್ಶವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುತ್ತಿಗೆ ಕಾರ್ಮಿಕ ಮಾರುತಿ (28) ಮೃತಪಟ್ಟಿದ್ದಾನೆ. ಮಹೇಶ (26)  ಎಂಬಾತನಿಗೆ ವಿದ್ಯುತ್ ಸ್ಪರ್ಶವಾಗಿದೆ. ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಸವೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ಕಂಬದ … Read more

ಹುಟ್ಟುಹಬ್ಬದ ದಿನ ಹೆಂಡತಿ ಜೊತೆ ವಿಷ ಸೇವಿಸಿದ ಕಾರ್ ಡ್ರೈವರ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 14 ಮಾರ್ಚ್ 2020 ವಿಷ ಸೇವಿಸಿ ಗಂಡ, ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಬಸವನಹೊಳೆ ಬ್ಯಾರೇಜ್ ಸಮೀಪ ವಿಷ ಸೇವಿಸಿ ಮೃತರಾಗಿದ್ದಾರೆ. ಹರೀಶ್ (35) ಮತ್ತು ಅನಿತಾ (28) ಮೃತರು. ದಂಪತಿಗಳು ನಿನ್ನೆ ಸಂಜೆ ವೇಳೆ ಬಸವನಹೊಳೆ ಬ್ಯಾರೇಜ್ ಬಳಿ ವಿಷ ಸೇವಿಸಿ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಇವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡು ಸಾವು ಮಾರ್ಚ್ 13ರಂದು ಹರೀಶ್ ಅವರ … Read more

ಹೊಸನಗರದ ಕ್ರಿಶ್ಚಿಯನ್ ಕಾಲನಿಯಲ್ಲಿ ಧಗಧಗ ಹೊತ್ತಿ ಉರಿದ ಕಾರು

ಶಿವಮೊಗ್ಗ ಲೈವ್.ಕಾಂ | HOSANAGARA | 12 ಮಾರ್ಚ್ 2020 ಶಾರ್ಟ್ ಸರ್ಕಿಟ್’ನಿಂದಾಗಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಲದಲ್ಲಿ ಕಾರಿನ ಒಳಭಾಗ ಸುಟ್ಟು ಹೋಗಿದೆ. ಹೊಸನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಘಟನೆಯಲ್ಲಿ ಸಂಭವಿಸಿದೆ. ಚರ್ಚ್ ರಸ್ತೆ ನಿವಾಸಿ ಅಬ್ದುಲ್ ರೆಹಮಾನ್ ಅವರು ತಮ್ಮ ದಿನಸಿ ಅಂಗಡಿ ಮುಂದೆ ಕಾರು ನಿಲ್ಲಿಸಿ, ಮನೆಗೆ ಹೊರಡುವಾಗ ಬೆಂಕಿ ಕಾಣಿಸಿಕೊಂಡಿದೆ. ಅಬ್ದುಲ್ ರೆಹಮಾನ್ ಅವರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. … Read more

ಭದ್ರಾವತಿಯಲ್ಲಿ ಬೀದಿಗಿಳಿದ ವಕೀಲರು, ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆಕ್ರೋಶ, ಸಮಸ್ಯೆ ಏನು? ಏನೆಲ್ಲ ತಾರತಮ್ಯ ಆಗಿದೆ ಗೊತ್ತಾ?

090320 Bhadravathi Advocates Protest for Road 1

ಶಿವಮೊಗ್ಗ ಲೈವ್.ಕಾಂ | SHIMOGA | 9 ಮಾರ್ಚ್ 2020 ನಿಗದಿತ ಅಳತೆಗಿಂತಲೂ ಕಡಿಮೆ ಅಳತೆಯಲ್ಲಿ ರಸ್ತೆ ಅಗಲೀಕರಣ ಮಾಡುತ್ತಿರುವುದನ್ನು ಖಂಡಿಸಿ ಭದ್ರಾವತಿಯಲ್ಲಿ ವಕೀಲರು, ವಿವಿಧ ಸಂಘಟನೆಗಳು ಮತ್ತು ನಾಗರೀಕರು ಇವತ್ತು ಬೃಹತ್ ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡಕ್ಕೆ ಮಣಿದು ಸಮರ್ಪಕವಾಗಿ ರಸ್ತೆ ಅಗಲೀಕರಣ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿ ನ್ಯಾಯಾಲಯದಿಂದ ಅಂಬೇಡ್ಕರ್ ಸರ್ಕಲ್’ವರೆಗೆ ವಕೀಲರು ಮೆರವಣಿಗೆ ನಡೆಸಿದರು. ಇವರ ಜೊತೆಗೆ ನಾಗರೀಕರು ಮತ್ತು ವಿವಿಧ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಸ್ತೆ ಅಗಲೀಕರಣದಲ್ಲಿ … Read more

ನಕಲಿ ಔಷಧ ಮಾರಾಟಗಾರರ ವಿರುದ್ಧ ರೊಚ್ಚಿಗೆದ್ದ ಜನ, ಬೇರೆ ರಾಜ್ಯ, ಜಿಲ್ಲೆಯಿಂದ ಬಂದ ವಾಹನಗಳನ್ನು ತಡೆದು ಆಕ್ರೋಶ, ಎಲ್ಲಿ ಗೊತ್ತಾ?

090320 Protest in Narasipura Narayanamurthy 1

ಶಿವಮೊಗ್ಗ ಲೈವ್.ಕಾಂ | SAGARA | 9 ಮಾರ್ಚ್ 2020 ಕರೋನ ವೈರಸ್ ಭೀತಿ ಹಿನ್ನೆಲೆ ನರಸೀಪುರದ ಖ್ಯಾತ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ಗಿಡಮೂಲಿಕೆ ಔಷಧಿ ಕೊಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೂ ಕೆಲವರು ನಾರಾಯಣಮೂರ್ತಿ ಅವರ ಹೆಸರಲ್ಲಿ ನಕಲಿ ಔಷಧಿ ವಿತರಿಸುತ್ತಿರುವುದನ್ನು ಖಂಡಿಸಿ, ನರಸೀಪುರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನರಸೀಪುರದಲ್ಲಿ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ವಿವಿಧ ಕಾಯಿಲೆಗೆ ನಾಟಿ ಔಷಧಿ ನೀಡುತ್ತಾರೆ. ಈ ದಿನಗಳಲ್ಲಿ ನರಸೀಪುರಕ್ಕೆ ರಾಜ್ಯ ಮತ್ತು ಹೊರ ರಾಜ್ಯದ … Read more

ಹೊಸನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ನಿ, ರಾಘವೇಶ್ವರ ಸ್ವಾಮೀಜಿಯಿಂದ ಆಶೀರ್ವಾದ, ಎಲ್ಲೆಲ್ಲಿ ಭೇಟಿ ನೀಡಿದರು ಗೊತ್ತಾ?

040320 Modi Wife Jashoda Ben visit Hosanagara 1

ಶಿವಮೊಗ್ಗ ಲೈವ್.ಕಾಂ | SHIMOGA | 4 ಮಾರ್ಚ್ 2020 ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜೋಶೋಧಾಬೆನ್ ಅವರು ಇವತ್ತು ಹೊಸನಗರದ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಕೃಷ್ಣಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೋಶೋಧಾಬೆನ್ ಮೋದಿ ಅವರು ಮಠಕ್ಕೆ ಆಗಮಿಸಿದ್ದರು. ಗೋವರ್ಧನಗಿರಿಯಲ್ಲಿ ಪೂಜೆ ಶ್ರೀರಾಮಚಂದ್ರಾಪುರಕ್ಕೆ ಆಗಮಿಸುತ್ತಿದ್ದಂತೆ ಗೋವರ್ಧನ ಗಿರಿಗೆ ತೆರಳಿದ ಜೋಶೋಧಾಬೆನ್ ಮೋದಿ ಅವರು, … Read more

ವೈಭವದ ಸಾಗರ ಮಾರಿಕಾಂಬ ಜಾತ್ರೆಗೆ ತೆರೆ, ಕೊನೆ ದಿನವು ಹರಿದು ಬಂತು ಭಕ್ತಸಾಗರ

180220 Sagara Marikamba Jathre Inauguration 1

ಶಿವಮೊಗ್ಗ ಲೈವ್.ಕಾಂ | SAGARA | 26 ಫೆಬ್ರವರಿ 2020 ಸಾಗರದ ಐತಿಹಾಸಿಕ ಶ್ರೀ ಮಾರಿಕಾಂಬ ಜಾತ್ರೆಗೆ ತೆರೆಬಿದ್ದಿದೆ. 9 ದಿನ ನಡೆದ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಜನರು ಶ್ರೀದೇವಿಯ ದರ್ಶನ ಪಡೆದರು. ನಿತ್ಯ ಸಾವಿರಾರು ಜನರು ಸರತಿ ಸಾಲಿನಲ್ಲಿ ದೇವಿಗೆ ಉಡಿ ಸಮರ್ಪಿಸುವ ಮೂಲಕ ಹರಕೆ ತೀರಿಸಿದರು. ಶ್ರೀದೇವಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಸಾಗರದ ಜನರು ಹಬ್ಬಕ್ಕಾಗಿಯೇ ಆಗಮಿಸಿ ದರ್ಶನ ಪಡೆದರು. ದಾಸೋಹಕ್ಕೆ ಒಂದು ಲಕ್ಷ ಜನ … Read more

ಭದ್ರಾ ಡ್ಯಾಂ ಮುಂದೆ ಭೀಕರ ಅಪಘಾತ, ನವುಲೆಯ ಇಬ್ಬರ ದುರ್ಮರಣ, ಪೊಲೀಸರ ವಿರುದ್ಧ ರೊಚ್ಚಿಗೆದ್ದ ಜನರಿಂದ ರಸ್ತ ತಡೆ

240220 Accident in Lakkavalli 1

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 24 ಫೆಬ್ರವರಿ 2020 ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಪೊಲೀಸರೆ ಕಾರಣ ಎಂದು ಆರೋಪಿಸಿ ಲಕ್ಕವಳ್ಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೇಗಾಯ್ತು ಅಪಘಾತ? ಬಿಆರ್’ಪಿ ಮತ್ತು ಲಕ್ಕವಳ್ಳಿ ನಡುವಿನ ಹೈವೇಯಲ್ಲಿ ಚಿಕ್ಕಮಗಳೂರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಬಿಆರ್’ಪಿ ಮತ್ತು ಲಕ್ಕವಳ್ಳಿ ನಡುವಿನ ರಸ್ತೆಯಲ್ಲಿ ಚಿಕ್ಕಮಗಳೂರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ … Read more