ತೀರ್ಥಹಳ್ಳಿ ಮಾರಿ ಜಾತ್ರೆಗೆ ದಿನಾಂಕ ಫಿಕ್ಸ್, ಒಂಭತ್ತು ದಿನ ನಡೆಯಲಿದೆ ಅದ್ಧೂರಿ ಜಾತ್ರೆ

Thirthahalli V

ಶಿವಮೊಗ್ಗ ಲೈವ್.ಕಾಂ | THIRTHAHALLI | 15 ಫೆಬ್ರವರಿ 2020 ಎರಡು ವರ್ಷಗಳಿಗೊಮ್ಮೆ ನಡೆಯುವ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಯನ್ನು ಫೆ.25ರಿಂದ 9 ದಿನಗಳು ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ನಾಗರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ.25ಕ್ಕೆ ಮಾರಿ ಸಾರಲಾಗುತ್ತದೆ. ಮಾ. 3ರಂದು ರಾತ್ರಿ ಸಂಪ್ರದಾಯದಂತೆ ಎಣ್ಣೆ ಪೂಜೆಯೊಂದಿಗೆ ನಾಡ್ತಿಆಚಾರ್ ಕುಟುಂಬವರು ಕೆತ್ತನೆ ಮಾಡಿದ ಗೊಂಬೆ ಪೂಜೆಯನ್ನು ನೆರವೇರಿಸಿದ ನಂತರ ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಗದ್ದುಗೆಯಲ್ಲಿ ಗೊಂಬೆಯನ್ನು ಸ್ಥಾಪಿಸಲಾಗುವುದು. ಮರುದಿನ ಮಧ್ಯಾಹ್ನದವರೆಗೆ ಪೂಜಾವಿಧಿಗಳು ನೆರವೇರಲಿದ್ದು … Read more

ಸಾಗರ ಮಾರಿಕಾಂಬ ಜಾತ್ರೆ, ತಾಯಿಯ ಬೃಹತ್ ಮೂರ್ತಿಗೆ ಅಂತಿಮ ಸ್ಪರ್ಶ, ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SAGARA | 14 ಫೆಬ್ರವರಿ 2020 ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ 16 ಅಡಿ ಎತ್ತರದ ಆಕರ್ಷಕ ಮೂರ್ತಿ ಸಿದ್ಧಪಡಿಸಲಾಗುತ್ತಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಸಾಗರ ಪಟ್ಟಣದ ಜಡೆ ಮಂಜಪ್ಪ ಗುಡಿಗಾರ್ ಕುಟುಂಬದವರು, ಮೂರ್ತಿ ಸಿದ್ಧತೆಯ ಕಾರ್ಯದಲ್ಲಿ ತೊಡಿದ್ದಾರೆ. ಮೂರ್ತಿ ಸಿದ್ಧವಾಗಿದ್ದು, ಅಲಂಕಾರ ಮಾಡಲಾಗುತ್ತಿದೆ. ಸಾಗರ ಮಾರಿಕಾಂಬ ದೇವಿ ಜಾತ್ರೆಗೆ ಇದೇ ಮನೆತನದವರು ಮುಂಚಿನಿಂದಲೂ ಮೂರ್ತಿ ಸಿದ್ಧಪಡಿಸುತ್ತಿದ್ದಾರೆ. ಫೆಬ್ರವರಿ 16ರಿಂದ ಒಂಭತ್ತು … Read more

ಸಾಗರ ಪಟ್ಟಣದಲ್ಲಿ ಪದವಿ ವಿದ್ಯಾರ್ಥಿಗಳಿಂದ ಪ್ರತಿಭಟನಾ ಮೆರವಣಿಗೆ, ಕೂಡಲೇ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 10 ಫೆಬ್ರವರಿ 2020 ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್’ಟಾಪ್ ವಿತರಿಸುವಂತೆ ಆಗ್ರಹಿಸಿ ಸಾಗರ ಪಟ್ಟಣದಲ್ಲಿ  ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಎರಡು ವರ್ಷದಿಂದ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್ ವಿತರಣೆ ಆಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಾಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇವತ್ತು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಉಪ ವಿಭಾಗಾಧಿಕಾರಿ ಮತ್ತು ಶಾಸಕ ಹರತಾಳು ಹಾಲಪ್ಪ ಅವರಿಗೆ ಮನವಿ ಸಲ್ಲಿಸಿದರು. 2017ರಿಂದ ರಾಜ್ಯ ಸರ್ಕಾರ … Read more

ಖಾಸಗಿ ಬಸ್, ಕಾರು ನಡುವೆ ಅಫಘಾತ, ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದ ಕಾರು, ಎಲ್ಲಿ? ಹೇಗಾಯ್ತು ಗೊತ್ತಾ ಅಪಘಾತ?

ಶಿವಮೊಗ್ಗ ಲೈವ್.ಕಾಂ | HOSANAGARA | 8 ಫೆಬ್ರವರಿ 2020 ಹೊಸನಗರದ  ಮುಡುಬಾ ಸೇತುವೆ ಕ್ರಾಸ್ ಬಳಿ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸೇತುವೆ ಕೆಳಗೆ ಪಲ್ಟಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದೆ. ಕಾರು ಹೊನ್ನಾವರದಿಂದ ಸಾಗರ, ಹೊಸನಗರ ಮಾರ್ಗವಾಗಿ ನಗರದ ದರ್ಗಾಕ್ಕೆ ತೆರಳುತ್ತಿತ್ತು. ಖಾಸಗಿ ಬಸ್ ಕುಂದಾಪುರ ಹೊಸನಗರ ಮಾರ್ಗವಾಗಿ ಸಾಗರಕ್ಕೆ ಹೋಗುತ್ತಿತ್ತು. ಈ ವೇಳೆ ಮುಡುಬಾ ಸೇತುವೆ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. … Read more

ಸಚಿವ ಸ್ಥಾನ ಕುರಿತು ಶಿವಮೊಗ್ಗದಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ, ಮಿನಿಸ್ಟರ್ ಪಟ್ಟದ ಬಗ್ಗೆ ಸಿಎಂ ಏನು ಹೇಳಿದ್ದಾರಂತೆ ಗೊತ್ತಾ?

Aaraga Jnanendra going in car

ಶಿವಮೊಗ್ಗ ಲೈವ್.ಕಾಂ | SHIMOGA | 8 ಫೆಬ್ರವರಿ 2020 ನಮ್ಮಂಥ ಹರಿಯರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಾಯವಿದೆ. ಹಾಗಂತ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಲ್ಲ ಅಂತಾ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳು ಮತ್ತು ತಾವು ಜೊತೆ ಜೊತೆಗೆ ಬೆಳೆದವರು. ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದೇನೆ. ಆದರೆ ಮನವಿ ಪತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸ್ಥಾನಕ್ಕಾಗಿ ಇನ್ನಷ್ಟು ಸಮಯ … Read more

*ಉಂಬ್ಳೆಬೈಲು ಬಳಿ ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ

ಶಿವಮೊಗ್ಗ ಲೈವ್.ಕಾಂ | SHIMOGA | 8 ಫೆಬ್ರವರಿ 2020 ಅಪರಿಚಿತ ವಾಹನ ಡಿಕ್ಕಿಹೊಡೆದು ಜಿಂಕೆಯೊಂದು ಸಾವನ್ನಪ್ಪಿದೆ. ಶಿವಮೊಗ್ಗ – ಎನ್.ಆರ್.ಪುರ ರಸ್ತೆಯಲ್ಲಿ ರಾತ್ರಿ ಘಟನೆ ಸಂಭವಿಸಿದೆ. ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟಕೆರೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ರಾತ್ರಿ ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಅರಣ್ಯಾಧಿಕಾರಿ ಸುನಿಲ್ ಸ್ಥಳಕ್ಕೆ ಭೇಟಿ ನೀಡಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | … Read more

ಆಯನೂರು ಬಳಿ ರೈಲು ಡಿಕ್ಕಿ ಹೊಡೆದು ಚಿರತೆ ಸಾವು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ

ಶಿವಮೊಗ್ಗ ಲೈವ್.ಕಾಂ | SHIMOGA | 7 ಫೆಬ್ರವರಿ 2020 ಆಯನೂರು ಸಮೀಪದ ಕೊನಗವಳ್ಳಿಯಲ್ಲಿ ರೈಲು ಹಳಿ ಪಕ್ಕದಲ್ಲಿ ಏಳರಿಂದ ಎಂಟು ವರ್ಷದ ಗಂಡು ಚಿರತೆಯ ಮೃತದೇಹ ಗುರುವಾರ ಪತ್ತೆಯಾಗಿದ್ದು, ರಾತ್ರಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕೊನಗವಳ್ಳಿ ಸರ್ವೇ ನಂ.56ರ ಸಿದ್ಧಿಪುರ ಮೈನರ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ರೈಲ್ವೆ ಸಿಬ್ಬಂದಿ, ಟ್ರಾಕ್‌ಮನ್ ಹಾಗೂ ಕೀಮನ್’ಗಳು ಚಿರತೆ ಸತ್ತು ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. … Read more

ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಯುವ ಮುಖಂಡನ ಏಕಾಂಗಿ ಹೋರಾಟ

060220 Thirthahalli Youth Leader Protest 1

ಶಿವಮೊಗ್ಗ ಲೈವ್.ಕಾಂ | SHIMOGA | 6 ಫೆಬ್ರವರಿ 2020 ಮನೆ ಬಾಗಿಲಿಗೆ ಅಕ್ರಮ ಮದ್ಯ ಪೂರೈಕೆಯಾಗಿ ಮಾರಾಟವಾಗುತ್ತಿದ್ದು ಅಬಕಾರಿ ಇಲಾಖೆ ತಡೆಯುತ್ತಿಲ್ಲ ಹಳ್ಳಿಯಲ್ಲಿ ಸಾರ್ವಜನಿಕವಾಗಿ ನೆಮ್ಮದಿ ವಾತಾವರಣ ಹಾಳಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಯುವ ಮುಖಂಡ ಕೆಳಕೆರೆ ಪೂರ್ಣೇಶ್ ಏಕಾಂಗಿಯಾಗಿ ಧರಣಿ ನಡೆಸಿದರು. ಅಕ್ರಮ ಮದ್ಯ ಮಾರಾಟ ನಿಲ್ಲಿಸಿ, ಆರೋಪಿಗಳನ್ನು ಬಂಧಿಸುವರೆಗೆ ಹೋರಾಟ ಎಂಬ ಘೋಷಣೆಗಳ ಭಿತ್ತಿ ಪತ್ರ ಹಿಡಿದು ಪೂರ್ಣೇಶ ಧರಣಿ ಸತ್ಯಾಗ್ರಹ ಕೈಗೊಂಡರು. ಮಾನವ ಹಕ್ಕುಗಳ ಹೋರಾಟಗಾರ್ತಿ ಗಾಯತ್ರಿ … Read more

ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಪ್ರಯಾಣಿಕರ ಪ್ರಾಣ ಉಳಿಸಿ ಕೊನೆಯುಸಿರೆಳೆದ ಡ್ರೈವರ್

050220 Bus Accident at Shikaripura 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020 ಬಸ್ ಚಾಲನೆ ಮಾಡುತ್ತಿದ್ದಾಗಲೇ ಖಾಸಗಿ ಬಸ್ ಚಾಲಕರೊಬ್ಬರಿಗೆ ಹೃದಯಾಘಾತವಾಗಿದೆ. ಆದರೆ ಈ ವೇಳೆಯಲ್ಲೂ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಾರ್ (32) ಹೃದಯಾಘಾತದಿಂದ ಮೃತರಾದ ಚಾಲಕ. ಖಾಸಗಿ ಬಸ್ ಶಿಕಾರಿಪುರದಿಂದ ಹೊನ್ನಾಳಿಗೆ ತೆರಳುತ್ತಿತ್ತು. ಕೆಂಗಟ್ಟೆ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕ ಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಆ ಸಮಯದಲ್ಲೂ ಬಸಿನ ವೇಗ ತಗ್ಗಿಸಿದ ಕುಮಾರ್, ಎಡ ಭಾಗದ ಮರಕ್ಕೆ ಗುದ್ದಿಸಿ, ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ … Read more

ಆಯನೂರು ಬಳಿ ರಸ್ತೆ ಅಪಘಾತ, ಕ್ಯಾಂಟರ್, ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸಾವು

ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020 ಆಯನೂರು ಬಳಿ ಕ್ಯಾಂಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಯನೂರು ಬಳಿಯ ಚೆನ್ನಹಳ್ಳಿ ಕ್ರಾಸ್’ನಲ್ಲಿ ಘಟನೆ ಸಂಭವಿಸಿದೆ. ಬೈಕ್ ಸವಾರ ಮೋಹನ್ ಕುಮಾರ್ (46) ಸ್ಥಳದಲ್ಲೆ ಮೃತರಾಗಿದ್ದಾರೆ. ಮೋಹನ್ ಕುಮಾರ್ ಅವರು ಆಯನೂರು ಸಮೀಪದ ಚಾಮುಂಡಿಪುರ ನಿವಾಸಿ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ … Read more