ಭದ್ರಾವತಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಯತ್ನದ ಆರೋಪ, ಜಿಲ್ಲಾ ಪಂಚಾಯಿತಿ ಸದಸ್ಯ ಆಸ್ಪತ್ರೆಗೆ ದಾಖಲು

160120 ZP Member Assault in Bhadravathi 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಭದ್ರಾವತಿಯಲ್ಲಿ ಹಲ್ಲೆ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಜಿ ಶಾಸಕ ಅಪ್ಪಾಜಿಗೌಡ ಸೇರಿದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಹಲ್ಲೆಗೇನು ಕಾರಣ? ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಹಲ್ಲೆಗೊಳಗಾಗಿದ್ದಾರೆ. ಭದ್ರಾವತಿ ತಾಲೂಕು ಅರಳಿಹಳ್ಳಿ ಕೆರೆಯ ಹೂಳು ತೆಗಿಸುವ ಕಾರ್ಯ ನಡೆಯುತ್ತಿತ್ತು. ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿದ್ದ ಕಾಮಗಾರಿಯ ಪರಿಶೀಲನೆಗೆ ಮಣಿಶೇಖರ್ ಅವರು ತೆರಳಿದ್ದರು. ಈ ವೇಳೆ … Read more

ಶಿಕಾರಿಪುರದಲ್ಲಿ ಸಿಎಂ ವಿಶೇಷ ಪೂಜೆ, ಕುಟುಂಬದೊಂದಿಗೆ ಸಂಕ್ರಾಂತಿ ಆಚರಣೆ

150120 CM Celebrates Sankranthi in Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA | 15 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದೊಂದಿಗೆ ಇವತ್ತು ಸಂಕ್ರಾಂತಿ ಹಬ್ಬ ಆಚರಿಸಿದರು. ಶಿಕಾರಿಪುರದಲ್ಲಿ ತಮ್ಮ ಮನೆಯಲ್ಲಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರು ಮನೆಗೆ ಆಗಮಿಸಿದ ಹಿನ್ನೆಲೆ, ಆಪ್ತರು, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆಗೆ ಭೇಟಿ ನೀಡಿದ್ದರು. ಬಂದಿದ್ದ ಎಲ್ಲರಿಗೂ ಯಡಿಯೂರಪ್ಪ ಅವರು ಎಳ್ಳ, ಬೆಲ್ಲ ನೀಡಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಕ್ರಾಂತಿ ಶುಭಾಶಯ ಕೋರಿದರು. ಅಲ್ಲದೆ ಸಚಿವ ಸಂಪುಟ … Read more

ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಅದ್ಧೂರಿ ಮಕರ ಸಂಕ್ರಮಣ, ಹೇಗಿತ್ತು ಪೂಜೆ? ಏನೇನೆಲ್ಲ ಆಚರಣೆಗಳು ನಡೆದವು?

ಶಿವಮೊಗ್ಗ ಲೈವ್.ಕಾಂ | THIRTHAHALLI | 15 ಜನವರಿ 2020 ಬೆಜವಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಉತ್ಸವ ಅದ್ದೂರಿಯಾಗಿ ನಡೆಯಿತು. ಅಯ್ಯಪ್ಪ ಸ್ವಾಮಿಗೆ ಆಭರಣ ಹಾಗೂ ಗಣ ಪರಿವಾರ ದೈವಗಳ ಸಮೇತ ಪಟ್ಟದ ಆಯುಧಗಳ ಉತ್ಸವ ಗುರುಮನೆಯಿಂದ ಹೊರತರುತ್ತಿದ್ದಂತೆ ಆಗಸದಲ್ಲಿ ಗರುಡ ಪಕ್ಷಿಗಳ ದರ್ಶನವಾಯಿತು. ಈ ವೇಳೆ ಅಯ್ಯಪ್ಪ ಭಕ್ತರಿಂದ ದೇವರ ಸ್ಮರಣೆ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಆಭರಣವನ್ನು ದೇವರ ಸನ್ನಿಧಾನಕ್ಕೆ ತರಲಾಯಿತು. ಮುಂಜಾನೆ ಗಣಪತಿ ಪೂಜೆಯೊಂದಿಗೆ … Read more

ರೈಲ್ವೆ ಟರ್ಮಿನಲ್’ಗಾಗಿ ಸಾಗರದಲ್ಲಿ ಉಪವಾಸ ಸತ್ಯಾಗ್ರಹ, ಕೋಟೆಗಂಗೂರಿಗೆ ಶಿಫ್ಟ್ ಮಾಡಿದ್ದೇಕೆ ಅಂತಾ ಪ್ರಶ್ನೆ

ಶಿವಮೊಗ್ಗ ಲೈವ್.ಕಾಂ | SAGARA | 15 ಜನವರಿ 2020 ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್ ಅನ್ನು ಏಕಾಏಕಿ ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಕಚೇರಿ ಆವರಣದಲ್ಲಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ಕೋಟಿಗಂಗೂರಿಗೆ ಸ್ಥಳಾಂತರಗೊಳ್ಳಲು ಕಾರಣ ಏನು? ಈ ಬಗ್ಗೆ ಸಾರ್ವಜನಿಕರೆದುರು ಸಾಗರ ಹಾಗೂ ಸೊರಬ ಶಾಸಕರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಯೋಜನೆಯೊಂದನ್ನು ಮಂಜೂರು … Read more

ಬೆಂಗಳೂರು ತಾಳಗುಪ್ಪ ಎಕ್ಸ್’ಪ್ರೆಸ್ ರೈಲಿಗೆ ಹೊಸ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಶಿವಮೊಗ್ಗ ಸಂಸದ

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಬೆಂಗಳೂರು- ತಾಳಗುಪ್ಪ ಎಕ್ಸ್’ಪ್ರೆಸ್ ರೈಲಿಗೆ ಕೆಳದಿ ರಾಣಿ ಚನ್ನಮ್ಮಾಜಿ ಎಕ್ಸ್’ಪ್ರೆಸ್ ಎಂದು ಹೆಸರಿಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಧನುರ್ಮಾಸದ ಶಿವಪೂಜಾ ಅನುಷ್ಠಾನ ಮುಕ್ತಾಯ, ಶಿವಲಿಂಗಶ್ರೀ ಪ್ರಶಸ್ತಿ ಪ್ರದಾನ ಮತ್ತು ಶಾಶ್ವತ ಮುತ್ತೈದೆತನಕ್ಕಾಗಿ ಭಕ್ತ ದಂಪತಿಗಳಿಂದ ಮಾಂಗಲ್ಯ ಧರ್ಮವೇ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಲೆನಾಡಿನ 5 ಜಿಲ್ಲೆಗಳಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದ ಕೆಳದಿ … Read more

ಶಿಕಾರಿಪುರಕ್ಕೆ ಸಿಎಂ, ರೆಡಿಯಾಗ್ತಿದೆ ರೈತರ ಆದಾಯ ಹೆಚ್ಚಳಕ್ಕೆ ಯೋಜನೆ, ಬಜೆಟ್ ಡೇಟ್ ಫಿಕ್ಸ್ ಅಂದರು ಯಡಿಯೂರಪ್ಪ

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರಕ್ಕೆ ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿಎಂ, ಸಂಜೆ ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ಇಲ್ಲಿನ ಹೆಲಿಪ್ಯಾಡ್’ನಲ್ಲಿ ಸಿಎಂಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಶಿಕಾರಿಪುರದಲ್ಲಿ ತಮ್ಮ ಮನೆಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ಬಳಿಕ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಆರಂಭಿಸಲಾಗಿರುವ ನೀರಾವರಿ … Read more

ಮಂಗನ ಕಾಯಿಲೆಗೆ ಮೊದಲ ಬಲಿ, ಸಾಗರದ ಮಹಿಳೆ ಮಣಿಪಾಲದಲ್ಲಿ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 12 ಜನವರಿ 2020 ಮಂಗನ ಕಾಯಿಲೆ(ಕೆಎಫ್‌ಡಿ)ಯಿಂದ ಬಳಲುತ್ತಿದ್ದ ತುಮರಿ ಗ್ರಾಪಂ ವ್ಯಾಪ್ತಿ ಸೀಗೆಮಕ್ಕಿಯ ಮಹಿಳೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇದು ಈ ವರ್ಷ ಕೆಎಫ್‌ಡಿ ಪಡೆದ ಮೊದಲ ಬಲಿ. ಹೂವಮ್ಮ (58) ಮೃತರು. ಗುರುವಾರ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ ಹೂವಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸೇರಿಸಲಾಗಿತ್ತು. ನಾಲ್ಕು ತಿಂಗಳಿಂದ ಇದುವರೆಗೆ 69 ಮಂಗಗಳು ಮೃತಪಟ್ಟಿವೆ. ಆದರೆ ಯಾವುದೇ ಮಂಗದಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿಲ್ಲ. ಹೂವಮ್ಮಗೆ … Read more

ಕೆರೆಗಿಳಿದು ಸ್ವಚ್ಛತೆ ಆರಂಭಿಸಿದ ಎಂಎಲ್ಎ, ಸಾಗರದ ಪ್ರಸಿದ್ಧ ಕೆರೆ ಇನ್ಮುಂದೆ ಕ್ಲೀನ್ ಕ್ಲೀನ್

ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020 ಗಣಪತಿ ಕೆರೆ ಪುನಶ್ಚೇತನದ ಹಿನ್ನೆಲೆ ಇವತ್ತಿನಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶಾಸಕ ಹರತಾಳು ಹಾಲಪ್ಪ ಅವರೇ ಕೆರೆಗಿಳಿದು ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದರು. ಇವತ್ತಿಂದ ಎರಡು ದಿನ ಸ್ವಚ್ಛತಾ ಕಾರ್ಯ ನಡೆಯಲಿದೆ. ರಾಫ್ಟಿಂಗ್ ಬೋಟುಗಳನ್ನು ಬಳಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಶಾಸಕ ಹರತಾಳು ಹಾಲಪ್ಪ ಅವರು ರಾಫ್ಟಿಂಗ್ ಬೋಟ್ ಬಳಸಿ, ಕೆರೆ ಸ್ವಚ್ಛತಾ ಕಾರ್ಯ ನಡೆಸಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 … Read more

ಲಕ್ಕಿನಕೊಪ್ಪ ಬಳಿ ಪಲ್ಟಿ ಹೊಡೆದ ಟ್ರಾಕ್ಟರ್, ರಸ್ತೆ ಪಾಲಾದ ಅಡಕೆ

ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020 ರಸ್ತೆಯಲ್ಲಿರುವ ಸಾಲು ಸಾಲು ಗುಂಡಿಗಳಿಗೆ ಟ್ರಾಕ್ಟರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ತೋಟದಿಂದ ಸಾಗಿಸುತ್ತಿದ್ದ ಅಡಕೆ ರಸ್ತೆ ಪಾಲಾಗಿದೆ. ಲಕ್ಕಿನಕೊಪ್ಪ ಸರ್ಕಲ್ ಬಳಿ ಘಟನೆ ನಡೆದಿದೆ. ರಸ್ತೆ ಗುಂಡಿಗಳಿಂದಾಗಿಯೇ ಟ್ರಾಕ್ಟರ್ ಪಲ್ಟಿ ಹೊಡೆದಿದೆ. ಚಾಲಕ ಮಂಜುನಾಥ್ ಅದೃಷ್ಟವಶಾತ್ ಪರಾಗಿದ್ದಾರೆ. ಶಿವಮೊಗ್ಗ ಎನ್.ಆರ್.ಪುರ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಪ್ರತಿ ದಿನ ಈ ರಸ್ತೆಯಲ್ಲಿ ನೂರಾರು ಬಸ್ಸುಗಳು ಓಡಾಡುತ್ತವೆ. ಉಂಬ್ಳೆಬೈಲು ಗ್ರಾಮದ ಸಮೀಪದಲ್ಲಿ ಭಾರಿ … Read more

ಮನೆಗೆ ನುಗ್ಗಿದ ಆಗಂತುಕನಿಗೆ ತುರೇಮಣೆಯಿಂದ ಏಟು, ಮಗು ರಕ್ಷಿಸಿದ ದಿಟ್ಟ ತಾಯಿ, ಮತ್ತೆ ಶುರುವಾಯ್ತು ಮಕ್ಕಳ ಕಳ್ಳರ ಆತಂಕ

ಶಿವಮೊಗ್ಗ ಲೈವ್.ಕಾಂ | THIRTHAHALLI | 9 ಜನವರಿ 2020 ಅಪಹರಣಕಾರನಿಗೆ ತುರೇಮಣೆಯಲ್ಲಿ ಹೊಡೆದು ತಾಯಿಯೊಬ್ಬಳು ಮಗುವನ್ನು ರಕ್ಷಿಸಿದ್ದಾಳೆ. ತಾಯಿಯ ದಿಟ್ಟ ನಡೆ ಸರ್ವರ ಮೆಚ್ಚುಗೆ ಗಳಿಸಿದೆ. ಈ ನಡುವೆ ಅಪಹರಣಕಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿ ಘಟನೆ ನಡೆದಿದೆ. ಶಿವಕುಮಾರ್ ಮತ್ತು ಕೃಷ್ಣವೇಣಿ ಅವರ ನಾಲ್ಕು ವರ್ಷದ ಮಗುವಿನ ಅಪಹರಣಕ್ಕೆ ಪ್ರಯತ್ನಿಸಲಾಗಿತ್ತು. ದಿಢೀರನೆ ಬಂದ ಅಗಂತುಕ ಮನೆಯಲ್ಲಿ ಯಾರು ಇಲ್ಲ ಎಂದುಕೊಂಡು ದಿಢೀರನೆ ನುಗ್ಗಿದ ಆಗಂತುಕನೊಬ್ಬ, ಮಗುವನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ … Read more