GOOD NEWS | ಈ ಯುವಕರ ಹುಟ್ಟುಹಬ್ಬದ ಪಾರ್ಟಿಯೇ ಡಿಫರೆಂಟ್, ಇದಕ್ಕೆ ಕಾರಣ ಫೇಸ್’ಬುಕ್, ಹೊಸನಗರ ಜನರಿಂದ ಸಿಗ್ತಿದೆ ಶಹಬ್ಬಾಸ್

191119 Hosanagara Youth New Type Birthday 1

ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019 ಹುಟ್ಟುಹಬ್ಬದ ಆಚರಣೆ ಅಂದರೆ ಪಾರ್ಟಿ ಮಾಡುವುದು. ಪಟಾಕಿ ಹೊಡೆದು ಸಂಭ್ರಮಿಸುವುದು. ಡಾನ್ಸ್ ಮಾಡಿ ಖುಷಿ ಪಡುವುದು. ಇದೆಲ್ಲ ಈಗಿನ ಟ್ರೆಂಡ್. ಆದರೆ ಹೊಸನಗರದ ಯುವಕರ ಗುಂಪೊಂದು ಡಿಫರೆಂಟ್ ರೀತಿಯಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುತ್ತಿದೆ. ಇದು ಇಡೀ ತಾಲೂಕಿಗೆ ಕುತೂಹಲ ಮೂಡಿಸಿದೆ. ಜನರು ಭೇಷ್ ಅನ್ನುವಂತೆ ಮಾಡಿದೆ. ಆದರೆ ಇದೆಲ್ಲ ಶುರುವಾಗಿದ್ದು ಫೇಸ್’ಬುಕ್’ನಿಂದ. ಯುವಕರ ಗುಂಪೊಂದು ತಮ್ಮ ಪರಿಚಿತರ ಹುಟ್ಟುಹಬ್ಬಗಳಿದ್ದರೆ ತಾಲೂಕಿನ ವಿವಿಧೆಡೆ ಶ್ರಮದಾನ ಮಾಡುತ್ತಿದೆ. ನಿಗದಿತ ಸ್ಥಳವನ್ನು … Read more

ವಿಐಎಸ್ಎಲ್ ಗೇಟಿಗೆ ಮತ್ತೆ ಬೀಗ, ಕಾರ್ಮಿಕರ ಆಕ್ರೋಶ, ಹೋರಾಟಕ್ಕೆ ಕಾರ್ಮಿಕರ ಕುಟಂಬದವರು ಸಾಥ್

ಶಿವಮೊಗ್ಗ ಲೈವ್.ಕಾಂ | BHADRAVATHI | 16 ನವೆಂಬರ್ 2019 ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ಎರಡನೆ ದಿನವು ಮುಂದುವರೆದಿದೆ. ಇವತ್ತು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಖಾನೆ ಗೇಟ್ ಮುಂದೆ ಆಹೋರಾತ್ರಿ ಧರಣಿ ನಡೆಸಿದ ಗುತ್ತಿಗೆ ಕಾರ್ಮಿಕರು, ಬೆಳಗ್ಗೆಯಿಂದಲೆ ಪ್ರತಿಭಟನೆ  ಶುರ ಮಾಡಿದ್ದರೆ. ಮತ್ತೆ ಗೇಟ್’ಗೆ ಬೀಗ ಹಾಕಿ ಆಡಳಿತ ಮಂಡಳಿ ವಿಐಎಸ್ಎಲ್ ಗೇಟಿಗೆ ಇವತ್ತು ಮತ್ತೊಮ್ಮೆ ಬೀಗ ಹಾಕಲಾಗಿತ್ತು. ಇದು ಪ್ರತಿಭಟನಾಕಾರರನ್ನು ರೊಚ್ಚಿಗೇಳಿಸಿತು. ಕೂಡಲೇ … Read more

VISL ಕಾರ್ಖಾನೆ ಮುಂದೆ ಟೈರ್’ಗೆ ಬೆಂಕಿ, ಗುತ್ತಿಗೆ ಕಾರ್ಮಿಕನಿಗೆ ಸುಟ್ಟ ಗಾಯ, ಸ್ಥಳದಲ್ಲಿ ಬಿಗುವಿನ ವಾತಾವರಣ

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಮುಂದೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಮಿಕರೊಬ್ಬರಿಗೆ ಬೆಂಕಿ ತಗುಲಿದ್ದು, ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾರ್ಖಾನೆ ಗೇಟ್ ಮುಂದೆ ಸಂಜೆ ವೇಳೆಗೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ಕಾರ್ಮಿಕರು ಸಿಡಿದೆದ್ದಿದ್ದೇಕೆ? ಗುತ್ತಿಗೆ ಕಾರ್ಮಿಕರು ಇವತ್ತು ಬೆಳಗ್ಗೆ … Read more

ಪಾದಾಚಾರಿಗೆ ಡಿಕ್ಕಿ ಹೊಡೆಸಿ ಸಾವಿಗೆ ಕಾರಣವಾಗಿದ್ದ ತೀರ್ಥಹಳ್ಳಿ ಬೈಕ್ ಸವಾರಿಗೆ ಜೈಲು, ದಂಡ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ತೀರ್ಥಹಳ್ಳಿ ಪಟ್ಟಣದಲ್ಲಿ ಪಾದಾಚಾರಿ ಸಾವಿಗೆ ಕಾರಣವಾಗಿದ್ದ ಬೈಕ್ ಸವಾರನಿಗೆ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳು ಜೈಲು, 5,500 ರೂ. ದಂಡ ವಿಧಿಸಿದೆ. ರಾಘವೇಂದ್ರ ಶಿಕ್ಷೆಗೆ ಒಳಗಾದ ಸವಾರ, 2015ರ ಫೆ.5ರಂದು ಪಾದಚಾರಿ ಟಿ.ಕೆ.ಅನ್ವರ್ ಬಾಷಾ ಎಂಬುವರಿಗೆ ಡಿಕ್ಕಿ ಹೊಡೆಸಿದ್ದರು. ಗಂಭೀರವಾಗಿ ಗಾಯ ಗೊಂಡಿದ್ದ ಅನ್ವರ್ ಬಾಷಾ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಕೆ.ಅಖಿಲ್, ರಾಘವೇಂದ್ರಗೆ ಜೈಲು … Read more

50 ಲಾರಿಗಳನ್ನು ತಡೆದ ಗ್ರಾಮಸ್ಥರು, ಗುಂಡಿ ಮುಚ್ಚುವಂತೆ ಪಟ್ಟು, ಹೊಸನಗರದ ಗ್ರಾಮದಲ್ಲಿ ಮತ್ತೆ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ಹೊಸನಗರ ಕುಂಬತ್ತಿ ಗ್ರಾಮದಲ್ಲಿ ಸುಮಾರು 50 ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗ್ಗೆಯಿಂದಲೆ ರಸ್ತೆಗಿಳಿದ ಗ್ರಾಮಸ್ಥರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿಗಳ ಓಡಾಟದಿಂದಾಗಿ ಕುಂಬತ್ತಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವುದೆ ಕಷ್ಟವಾಗಿದೆ. ಇತ್ತೀಚೆಗಷ್ಟೆ ಗುಂಡಿಯಿಂದಾಗಿ ರಸ್ತೆಯಲ್ಲಿ ಬಿದ್ದು ಗ್ರಾಮಸ್ಥರೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ಅಲ್ಲದೆ ಈ ಭಾಗದ ಮಕ್ಕಳು ಶಾಲೆಗೆ ತೆರಳುವುದೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ … Read more

ಜೋಗ ಕಾರ್ಗಲ್ ಪಟ್ಟಣ ಪಂಚಾಯತಿ ಎಲಕ್ಷನ್, ಅರಳಿದ ಕಮಲ, ಕೈಗೆ ಭಾರಿ ಮುಖಭಂಗ, ಯಾವ್ಯಾವ ವಾರ್ಡ್’ನಲ್ಲಿ ಯಾರೆಲ್ಲ ಗೆದ್ದಿದ್ದಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ತೀವ್ರ ಕುತೂಹಲ ಕೆರಳಿಸಿದ್ದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೇವಲ ಒಂದು ಸ್ಥಾನ ಗಳಿಸಿ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸಿದೆ. ಕಾರ್ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 11 ಸ್ಥಾನದ ಪೈಕಿ ಬಿಜೆಪಿ 9, ಕಾಂಗ್ರೆಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 … Read more

ಭದ್ರಾವತಿ ವಿಐಎಸ್ಎಲ್, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ವಿನಯ್ ಗುರೂಜಿ

ಶಿವಮೊಗ್ಗ ಲೈವ್.ಕಾಂ | BHADRAVATHI | 11 ನವೆಂಬರ್ 2019 ವಿನಯ್ ಗುರೂಜಿ ಅವರು ಶಾಸಕ ಬಿ.ಕೆ.ಸಂಗಮೇಶ್ವರ್ ಅವರೊಂದಿಗೆ ಭಾನುವಾರ ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದರು. ಪ್ರಸ್ತುತ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಸಂಗಮೇಶ್ವರ್ ಅವರಿಂದ ಮಾಹಿತಿ ಪಡೆದ ಗುರೂಜಿ, ಕಾರ್ಖಾನೆಯ ವಿವಿಧ ಪ್ಲಾಂಟ್‌ಗಳ ಪರಿಶೀಲನೆ ನಡೆಸಿದರು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೇವಾಕಾರ್ಯಗಳಿಗೆ ಚಾಲನೆ ನೀಡಲು ನಗರಕ್ಕೆ ಆಗಮಿಸಿದ್ದ ವಿನಯ್ ಗುರೂಜಿ ಅವರು ಬೆಳಗ್ಗೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ, ಹಳೇನಗರದ ಗ್ರಾಮ ದೇವತೆ ಶ್ರೀ … Read more

ಇದು ಶಿವಮೊಗ್ಗದ ಅತ್ಯಂತ ಕೋಲ್ಡ್ ಜಾಗ, ಜಿಲ್ಲೆಯ ರೈತರಿಗೆ ತರಲಿದೆ ಲಾಭ, ರಿಪ್ಪನ್’ಪೇಟೆಯಲ್ಲಿ ಹೈಟೆಕ್ ಕೋಲ್ಡ್ ಸ್ಟೋರೇಜ್

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ರೈತರ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ ಮಾತ್ರ ಆತ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಆದರೆ, ಬಹಳಷ್ಟು ಸಮಯದಲ್ಲಿ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರೈತರ ಇನ್ನೂ ಆರ್ಥಿಕವಾಗಿ ದುರ್ಬಲನಾಗಿದ್ದಾನೆ. ಫಸಲು ಕೈಗೆ ಬಂದು ಇನನ್ನೇನು ಮಾರಾಟ ಮಾಡಬೇಕು ಎನ್ನುವ ಸಂದರ್ಭದಲ್ಲಿ ಧಾರಣೆ ಕುಸಿದಿರುತ್ತದೆ. ಆಗ ಅನಿವಾರ್ಯವಾಗಿ ಆತ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡಬೇಕಾದ ಪರಿಸ್ಥಿತಿ ರೈತರನ್ನು ಬಾಧಿಸತೊಡಗಿದೆ. ರೈತರ ಸಮಸ್ಯೆಗೆ ಪರಿಹರಿಸಿದ ಸಹಕಾರಿ … Read more

ಶಿಕಾರಿಪುರದಿಂದ ಹೊಸ ಕೆಎಸ್‌ಆರ್‌ಟಿಸಿ ಬಸ್ ಶುರು, ಸದ್ಯದಲ್ಲೇ ಡಿಪೋ ಆರಂಭ, ಗ್ರಾಮಗಳಿಗೂ ಬರುತ್ತೆ ಸರ್ಕಾರಿ ಬಸ್

ಶಿವಮೊಗ್ಗ ಲೈವ್.ಕಾಂ | SHIKARIPURA | 8 ನವೆಂಬರ್ 2019 ಶಿಕಾರಿಪುರದಿಂದ ಶ್ರೀ ಕ್ಷೇತ್ರ ಕೊಟ್ಟೂರಿಗೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಡಿಪೋ ಆದ ಬಳಿಕ ನಮಗೆ ಭಾರಿ ಅನುಕೂಲವಾಗಲಿದೆ. ಗ್ರಾಮಾಂತರ ಭಾಗಗಳಿಗೆ ಇನ್ನೂ ಹೆಚ್ಚಿನ ಬಸ್ ಸೇವೆ ಅಗತ್ಯವಾಗಿದೆ. ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕಾರಿಪುರದಿಂದ ವಾಣಿಜ್ಯ ನಗರಗಳಿಗೆ, … Read more

ಶಿವಮೊಗ್ಗದಲ್ಲಿ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ, ಮಹಿಳೆಯ ರಕ್ಷಣೆ, ಮಗು ಸಾವು

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಗ್ರಾಮಸ್ಥರು ಬಾವಿಗೆ ಬಿದ್ದ ತಾಯಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಾಗಲೆ ಮಗು ಜೀವ ಕಳೆದುಕೊಂಡಿದ್ದು, ತಾಯಿಯನ್ನು ರಕ್ಷಿಸಲಾಗಿದೆ. ಮಗು ಕೌಶಿಕ್ (3) ಮೃತಪಟ್ಟಿದೆ. ತಾಯಿ ಚೈತ್ರ (23) ಅವರನ್ನು ರಕ್ಷಿಸಲಾಗಿದೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಸಮಸ್ಯೆಯೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ … Read more