ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಬೆಳೆಗಾರರ ಆಕ್ರೋಶ
ಶಿವಮೊಗ್ಗ ಲೈವ್.ಕಾಂ | ಸೊರಬ | 17 ಸೆಪ್ಟೆಂಬರ್ 2019 ಅಡಕೆ ಕೊಳೆರೋಗದಿಂದ ಸಂಕಷ್ಟಕ್ಕೀಡಾದ ಬೆಳೆಗಾರರಿಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಮುಂದೆ ಕೊಳೆರೋಗಕ್ಕೆ ತುತ್ತಾದ ಅಡಕೆ ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಸಾರ್ವಜನಿಕರ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಚಿದಾನಂದಗೌಡ, ಭಾರಿ ಬಿಸಿಲಿಗೆ ಅಡಕೆ ಉದುರಿದ್ದರು. ಆ ಬಳಿಕ ಸುರಿ ಜೋರು ಮಳೆಗೆ ಕೊಳೆ ರೋಗ ಬಂದಿದೆ. … Read more