‘ಎಲೆಕ್ಷನ್ ಮುಗಿಸಿ ಪ್ಯಾಕೇಜ್ ಟೂರ್ ಹೋದರು, ಅಭ್ಯರ್ಥಿಯಾದ್ರೂ ಪ್ಯಾಕೇಜ್ ಬರುವವರೆಗೆ ನನ್ನ ತಮ್ಮ ಕ್ಷೇತ್ರಕ್ಕೇ ಬಂದಿರಲಿಲ್ಲ’

Kumar Bangarappa Photo 1

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಕರೆಕ್ಟಾದ ಪ್ಯಾಕೇಜ್ ಬಾರದೆ ಇದ್ದಿದ್ದರಿಂದಲೇ, ಮುಖ್ಯಮಂತ್ರಿ ಶಿವಮೊಗ್ಗ ಭೇಟಿ ವೇಳೆ ನನ್ನ ತಮ್ಮ ಕಾಣಿಸಲಿಲ್ಲ. ಪ್ಯಾಕೇಜ್ ಕುರಿತು ಸ್ಪಷ್ಟತೆ ಸಿಗುವವರೆಗೂ ಅಭ್ಯರ್ಥಿಯಾಗಿ ಅವರು ಕ್ಷೇತ್ರಕ್ಕೆ ಬರಲಿಲ್ಲ. ಹೀಗಂತ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಸೊರಬ ತಾಲೂಕು ಕೋಟಿಪುರ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ವಿಧಾನಸಭೆ ಚುನಾವಣೆ ಬಳಿಕ ಪ್ಯಾಕೇಜ್ ಟೂರ್ ಹೋದವರು, ಮಧ್ಯರಾತ್ರಿ ಮೂರು … Read more

ಚುನಾವಣೆ ಹೊಸ್ತಿಲಲ್ಲಿ ಶಿವಮೊಗ್ಗ ಜೆಡಿಎಸ್’ಗೆ ಶಾಕ್, ತೀರ್ಥಹಳ್ಳಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜೀನಾಮೆ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚುನಾವಣೆ ಹೊಸ್ತಿಲಲ್ಲೇ ಶಿವಮೊಗ್ಗ ಜೆಡಿಎಸ್’ಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ತೀರ್ಥಹಳ್ಳಿ ಜೆಡಿಎಸ್’ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ತಾಲೂಕು ಅಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸದೆ ತಟಸ್ಥವಾಗಿ ಉಳಿಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯ ಮಾತನಾಡಿದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷ ಮದನ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ ಮದನ್, … Read more

ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ಮಾಡದೆ ನಿದ್ರೆ ಮಾಡಿದ ಮೂವರು ಸಸ್ಪೆಂಡ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚೆಕ್’ಪೋಸ್ಟ್’ನಲ್ಲಿ ಕರ್ತವ್ಯ ನಿರ್ವಹಿಸುವ ಬದಲು ನಿದ್ರೆ ಮಾಡಿದ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ. ವಾಹನಗಳ ತಪಾಸಣೆ ನಡೆಸದೆ ನಿದ್ರೆ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು, ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕಾರಿಪುರ ತಾಲೂಕಿನ ಖವಾಸಪುರ ಚೆಕ್’ಪೋಸ್ಟ್’ಗೆ ನಿಯೋಜನೆಗೊಂಡಿದ್ದ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಶೋಕ್ ರಾಜ್, ಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜಪ್ಪ, ಬೇಗೂರು ಸಿ.ಆರ್.ಪಿ ಚನ್ನೇಶ್ ಸಸ್ಪೆಂಡ್ ಆದವರು. ಈ … Read more

ಭದ್ರಾವತಿ ಡಿಕೆಶಿ ಕಾರ್ಯಕ್ರಮದಲ್ಲಿ ಉಪ್ಪಿಟ್ಟು, ಕೇಸರಿಬಾತ್ ಹಂಚಿದ ಕಾಂಗ್ರೆಸ್ ವಿರುದ್ಧ ಕೇಸ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಸಚಿವ ಡಿ.ಕೆ.ಶಿವಕುಮಾರ್ ಅವರ ಭದ್ರಾವತಿಯ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗ ದೂರು ದಾಖಲಿಸಿದೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಬಂದಿದ್ದ ಕಾರ್ಯಕರ್ತರಿಗೆ ಉಪ್ಪಿಟ್ಟು, ಕೇಸರಿ ಬಾತ್ ಹಂಚಲಾಯಿತು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ARO ದೂರು ದಾಖಲಿಸಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚುನಾವಣಾ ಪ್ರಚಾರ ಸಭೆಗೆ ಆಗಮಿಸುವ ಕಾರ್ಯಕರ್ತರಿಗೆ ನೀರು, ಮಜ್ಜಿಗೆ ಹಂಚಬಹುದು. ಒಂದು ವೇಳೆ … Read more

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಮೆಷಿನ್ ಒಡೆದು ಹಣ ದೋಚಲು ಯತ್ನ

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಹಾನಿಗೊಳಿಸಿರುವ ಕಳ್ಳರು, ತಮ್ಮ ಪ್ರಯತ್ನ ಕೈಗೊಡದೆ ಬರಿಗೈಯಲ್ಲಿ ತೆರಳಿದ್ದಾರೆ. ಹೊಸ ಸಿದ್ದಾಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಕಳ್ಳರು ನುಗ್ಗಿದ್ದಾರೆ. ಎಟಿಎಂ ಮೆಷಿನ್ ಒಡೆದು, ಹಣ ದೋಚಲು ಯತ್ನಿಸಿದ್ದಾರೆ. ಇದರಿಂದ ಎಟಿಎಂ ಮೆಷಿನ್’ಗೆ ಹಾನಿಯಾಗಿದೆ. ಆದರೆ ಕಳ್ಳರಿಗೆ ಹಣ ದೋಚಲು ಸಾದ್ಯವಾಗಿಲ್ಲ. ಹಾಗಾಗಿ ಬರಿಗೈಯಲ್ಲಿ ತೆರಳಿದ್ದಾರೆ. ನ್ಯೂಟೌನ್ ಪೊಲೀಸ್ … Read more

ಸಾಗರದ ಸಿಗಂದೂರು ರಸ್ತೆಯಲ್ಲಿ ಕಾಡುಕೋಣಗಳು ಪ್ರತ್ಯಕ್ಷ, ವಿಡಿಯೋ ವೈರಲ್

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಸಾಗರ ಪಟ್ಟಣದಲ್ಲಿ ಕಾಡುಕೋಣಗಳು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ಕಾಡುಕೋಣಗಳು ರಾಜಾರೋಷವಾಗಿ ರಸ್ತೆಯಲ್ಲಿ ಸಾಗುತ್ತಿರುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಗುರುವಾರ ಮಧ್ಯರಾತ್ರಿ ಸಾಗರದ ಎಸ್.ಎನ್.ನಗರದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷವಾಗಿವೆ. ಸಾಗರ ಸಿಗಂದೂರು ರಸ್ತೆಯಲ್ಲಿ ಹೋಗುತ್ತಿದ್ದ ಕಾಡುಕೋಣಗಳನ್ನು, ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ, ಕಾರಿನಲ್ಲಿ ತೆರಳುತ್ತಿದ್ದವರು ಗಮನಿಸಿ, ವಾಹನಗಳನ್ನು ಸೈಡಿಗೆ ನಿಲ್ಲಿಸಿದ್ದಾರೆ. ಕಾಡುಕೋಣಗಳ ವಿಚಾರ ತಿಳಿಯದ ಪೊಲೀಸರು, ಬೈಕಿನಲ್ಲಿ ಅವುಗಳ ಬಳಿಗೆ ಹೋಗಿ, ಬೆದರಿ ಹಿಂತಿರುಗುವ ದೃಶ್ಯ, … Read more

ಭದ್ರಾವತಿಗೆ ಬಂದಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ ಡಿಕೆಶಿ

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಂತೆ, ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಭದ್ರಾವತಿ ಹೆಲಿಪ್ಯಾಡ್’ಗೆ ಬಂದಿಳಿಯುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು. ವ್ಯಕ್ತಿ ನಿಷ್ಠೆಗಿಂತಲೂ ಪಕ್ಷ ನಿಷ್ಠೆ ಮುಖ್ಯ ಅಂದರು. ನಾಳೆಯಿಂದ ಒಂದೇ ಕಾರಲ್ಲಿ ಹೋಗಬೇಕು ತೀರ್ಥಹಳ್ಳಿ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯತೆಯಿಲ್ಲ, ನಾಯಕರು ಒಟ್ಟಾಗಿ ಪ್ರಚಾರ ನಡೆಸುವುದಿಲ್ಲ ಎಂದು ಬಹಿರಂಗ … Read more

ಭದ್ರಾವತಿ ಮೆಸ್ಕಾಂಗೆ ಬಿಜೆಪಿ ಕಾರ್ಯಕರ್ತ ಅಂತಾ ಪತ್ರ, ಜ.30ರಂದು ಬಾಂಬ್ ಇಡ್ತೀವಿ ಅಂತಾ ಬೆದರಿಕೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019 ಜನವರಿ 30ರಂದು ಟಿವಿಯಲ್ಲಿ ಯಶ್ ಅಭಿನಯನದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತಿದೆ. ಈ ವೇಳೆ ರಾಜಕೀಯ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಕಚೇರಿಗೆ ಬೆಂಕಿ ಹಾಕುತ್ತೇವೆ. ನಿಮ್ಮ ಜೀವ ಹೋಗುತ್ತದೆ ಎಂದು ಪುಡಾರಿಗಳು ಕೆಇಬಿ ಹಾಗೂ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಭದ್ರಾವತಿಯ ಕೆಇಬಿ ಕಚೇರಿಗೆ ಅಂಚೆ ಪತ್ರ ಬರೆಯಲಾಗಿದ್ದು, ಚಲನಚಿತ್ರ ಪ್ರಸಾರವಾಗುವ ಸಮಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಕುಮ್ಮಕ್ಕಿನಿಂದ ಕರೆಂಟ್ ತೆಗೆದ್ರೆ ನಿಮ್ಮ ಆಫೀಸ್’ಗೆ ಬಾಂಬ್ ಫಿಕ್ಸ್ ಮಾಡ್ತೀವಿ … Read more

ಮರ ಹತ್ತಿ ಕುಳಿತ ಗ್ರಾ. ಪಂ ಉಪಾಧ್ಯಕ್ಷ, ಬೇಡಿಕೆ ಈಡೇರಿಸೋವರೆಗೆ ಕಳೆಗಿಲಿಯಲ್ವಂತೆ, ಇವರ ಡಿಮಾಂಡ್ ಏನ್ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 25 ಮಾರ್ಚ್ 2019 ಹೊಸನಗರ ತಾಲೂಕಿನ ಗ್ರಾಮ ಪಂಚಾಯಿತಿ ಒಂದರ ಉಪಾಧ್ಯಕ್ಷರು, ಪಂಚಾಯಿತಿ ಕಚೇರಿ ಮುಂದಿರುವ ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು, ಜನರು ಎಷ್ಟೇ ಮನವೊಲಿಸಿದರು, ಹಣ ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಅಂತಾ ತಿಳಿಸಿದ್ದಾರೆ. ತಾಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅನುದಾನ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮರವೇರಿ ಕುಳಿತಿದ್ದಾರೆ. … Read more

ಮದ್ಯದ ಅಮಲಿನಲ್ಲಿ ನಾಗರ ಹಾವು ಹಿಡಿದ, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 25 ಮಾರ್ಚ್ 2019 ಕುಡಿದ ಅಮಲಿನಲ್ಲಿ ನಾಗರ ಹಾವು ಹಿಡಿದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯ ಬೆಟ್ಟಮಕ್ಕಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಕುಮಾರ್ (48) ಮೃತ ದುರ್ದೈವಿ. ಮದ್ಯದ ಅಮಲಿನಲ್ಲಿದ್ದ ಕುಮಾರ್, ಮನೆಗೆ ಬಂದ ನಾಗರ ಹಾವು ಹಿಡಿಯಲು ಮುಂದಾಗಿದ್ದಾರೆ. ಯಾರು ಎಷ್ಟೇ ಬುದ್ದಿ ಮಾತು ಹೇಳಿದರೂ ಕೇಳದೆ, ಕುಮಾರ್ ನಾಗರ ಹಾವನ್ನು ಹಿಡಿದಿದ್ದಾರೆ. ಆದರೆ ಹಾವು ನಾಲ್ಕು ಬಾರಿ ಕಚ್ಚಿದ್ದರಿಂದ, ಕುಮಾರ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಮಾರ್ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು … Read more