ಭದ್ರಾವತಿಯ ಆಶಾ ಭಟ್ ಈಗ ಹಿಂದಿ ಸಿನಿಮಾ ಹೀರೋಯಿನ್, ರಿಲೀಸ್’ಗೆ ರೆಡಿಯಾಗಿದೆ ಚಿತ್ರ

ಶಿವಮೊಗ್ಗ ಲೈವ್.ಕಾಂ | 14 ಮಾರ್ಚ್ 2019 ಭದ್ರಾವತಿಯ ಬೆಡಗಿ ಈಗ ಬಾಲಿವುಡ್ ಸಿನಿಮಾದ ಹೀರೋಯಿನ್. ಈಕೆ ಆಭಿನಯಿಸುತ್ತಿರುವ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವಲ್ಲ, ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್ ಆಗಲಿದೆ. ಈ ಮೂಲಕ ಭದ್ರಾವತಿಯ ಆಶಾ ಭಟ್, ಈಗ ಹಾಲಿವುಡ್ ಮತ್ತು ಬಾಲಿವುಡ್’ನಲ್ಲಿ ಏಕಕಾಲದಲ್ಲಿ ಮಿಂಚಲಿದ್ದಾರೆ. ಜಂಗ್ಲಿ ಅನ್ನುವ ಹಿಂದಿ ಸಿನಿಮಾದಲ್ಲಿ ಭದ್ರಾವತಿಯ ಆಶಾ ಭಟ್ ಅಭಿನಯಿಸುತ್ತಿದ್ದಾರೆ. ಮೀರಾ ಅನ್ನುವ ಪತ್ರಕರ್ತೆಯ ಪಾತ್ರದಲ್ಲಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜಂಗ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮಾರ್ಚ್ 29ಕ್ಕೆ … Read more

ಭದ್ರಾವತಿಯಲ್ಲಿ ಸರ್ಕಾರಿ ಶಾಲೆಗೆ ಬೆಂಕಿ ಇಟ್ಟು, ‘ಐ ಲವ್ ಯು’ ಅಂತಾ ಬರೆದ ಕಿಡಿಗೇಡಿಗಳು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 10 ಮಾರ್ಚ್ 2019 ಸರ್ಕಾರಿ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬಳಿಕ ಗೋಡೆ ಮೇಲೆ ಐ ಲವ್ ಯು ಎಂದು ಬರೆದಿದ್ದಾರೆ. ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ದೊಣಬಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿ ಮೂಲಕ, ಬೆಂಕಿಕಡ್ಡಿ ಗೀರಿ ಹಾಕಲಾಗಿದೆ. ಇದರಿಂದ ಕೊಠಡಿಯಲ್ಲಿದ್ದ ಎರಡು ಕುರ್ಚಿಗಳು ಸುಟ್ಟು ಹೋಗಿವೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಲೈವ್.ಕಾಂ … Read more

ಮಧು ಬಂಗಾರಪ್ಪ ಬದಲು ಶಿವಮೊಗ್ಗ ಲೋಕಸಭೆಗೆ ಕಾಗೋಡು ತಿಮ್ಮಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | 10 ಮಾರ್ಚ್ 2019 ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಬೇಕು ಅನ್ನುವ ಒತ್ತಾಯ ಶುರುವಾಗಿದೆ. ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆ ಬಳಿಕ ಮಧು ಬಂಗಾರಪ್ಪ ಜಿಲ್ಲೆಯ ಜನರೊಂದಿಗೆ ಸಂಪರ್ಕದಲ್ಲಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಜೆಡಿಎಸ್ … Read more

ಮುಂದುವರೆದ ಪೊಲೀಸ್ ರೇಡ್, ಹೊಸನಗರದಲ್ಲಿ 80 ಲೋಡ್ ಮರಳು ಸೀಜ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 9 ಮಾರ್ಚ್ 2019 ಹೊಸನಗರ ತಾಲೂಕಿನ ಹಲುಸಾಲೆ ಮಳವಳ್ಳಿ ಗ್ರಾಮದ ಬಳಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು 2.56 ಲಕ್ಷ ವೌಲ್ಯದ ಮರಳನ್ನು ವಶಕ್ಕೆ ಪಡೆಯಲಾಗಿದೆ. ಹಲುಸಾಲೆ ಮಳವಳ್ಳಿ ಗ್ರಾಮದ ದಿನೇಶ್‌ಗೌಡ ಎಂಬುವವರು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಶರಾವತಿ ಹಿನ್ನೀರಿಗೆ ಸೇರಿದ ನೀರಿಲ್ಲದ ಹಳ್ಳದಲ್ಲಿ  ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್, ಸಿಬ್ಬಂದಿ ಭೇಟಿ ನೀಡಿ … Read more

ತೀರ್ಥಹಳ್ಳಿಯಲ್ಲಿ ಸಿಎಂ, ಒಕ್ಕಲಿಗ ಸಮುದಾಯ ಭವನಕ್ಕೆ ಶಂಕುಸ್ಥಾಪನೆ, ಒಕ್ಕಲೆಬ್ಬಿಸುವ ವಿಚಾರದಲ್ಲಿ ಏನಂದ್ರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ವನ್ಯಜೀವಿ ರಕ್ಷಣೆ ನೆಪದಲ್ಲಿ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಅರಣ್ಯ ಅಧಿಕಾರಿಗಳ ಬದಲು ಅರಣ್ಯ ರಕ್ಷಣೆಯ ಹೊಣೆಯನ್ನು, ಸಾರ್ವಜನಿಕರಿಗೆ ವಹಿಸಿದರೆ, ಅರಣ್ಯ ಸಂರಕ್ಷಣೆಯಾಗುತ್ತದೆ ಅಂತಾ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ತೀರ್ಥಹಳ್ಳಿಯಲ್ಲಿ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ಸಿಎಂ ಯಾವೆಲ್ಲ ವಿಚಾರ ಮಾತಾಡಿದರು? ಕಾರ್ಯಕ್ರಮದ ಕಂಪ್ಲೀಟ್ ವಿಡಿಯೋ ರಿಪೋರ್ಟ್.. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ … Read more

ಸಾಗರದಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ, ಅರಳಗೋಡಿನ ಮಹಿಳೆ ಮಣಿಪಾಲದಲ್ಲಿ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಶಂಕಿತ ಮಂಗನ ಕಾಯಿಲೆ ಮತ್ತೊಬ್ಬ ಮಹಿಳೆಯನ್ನ ಬಲಿ ಪಡೆದಿದೆ. ಅರಳಗೋಡು ಗ್ರಾಮದ ಪೂರ್ಣಿಮಾ (36) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದಾಗಿ ಪೂರ್ಣಿಮಾ ಅವರು ಫೆ.27ರಂದು ಮಣಿಪಾಲ್ ಅಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಕೂಡಲೇ ಐಸಿಯುಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಪೂರ್ಣಿಮಾ ಕೊನೆಯುಸಿರೆಳೆದಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕಾರ್ಗಲ್’ನ ಕಾಳಮಂಜಿ ಗ್ರಾಮದ ಪಾರ್ಶ್ವನಾಥ್ ಅವರು, ಶಂಕಿತ ಮಂಗನ ಕಾಯಿಲೆಗೆ ಮೃತಪಟ್ಟಿದ್ದರು. … Read more

ವಕೀಲನ ಮೇಲೆ ಸರ್ಕಲ್ ಇನ್ಸ್’ಪೆಕ್ಟರ್ ಹಲ್ಲೆ, ಸಾಗರದಲ್ಲಿ ಪೊಲೀಸ್ ವಿರುದ್ಧ ವಕೀಲರ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ವಕೀಲರ ಸಂಘ ಪ್ರತಿಭಟನೆ ನಡೆಸಿತು. ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು. ವಕೀಲ ಎಸ್.ಬಿ.ರಾಜೇಶ್ ಅವರ ಮೇಲೆ ಗ್ರಾಮಾಂತರ ಠಾಣೆ ಸಿಪಿಐ ಮಂಜುನಾಥ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಸಮೀಪದ ಕ್ಯಾಂಟೀನ್’ನಲ್ಲಿ ವಕೀಲ ರಾಜೇಶ್ ಊಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹೋಂ ಗಾರ್ಡ್ … Read more

ಮಧು ಬಂಗಾರಪ್ಪ ಹುಟ್ಟುಹಬ್ಬ ಹಿನ್ನೆಲೆ, ಯೋಧರ ಕಲ್ಯಾಣಕ್ಕೆ ಹಣ ಕಳುಹಿಸಿದ ಅಭಿಮಾನಿಗಳು

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಮಾಜಿ ಶಾಸಕ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ, ಅಭಿಮಾನಿ ಬಳಗದಿಂದ ಸೈನಿಕರ ಕಲ್ಯಾಣಕ್ಕೆ 25 ಸಾವಿರ ರೂ. ಕಳುಹಿಸಲಾಗಿದೆ. ಅಭಿಮಾನಿಗಳು ಹಣ ಸಂಗ್ರಹಿಸಿ, ಸೈನಿಕರ ಕಲ್ಯಾಣಕ್ಕೆ ಕಳುಹಿಸಿದ್ದಾರೆ. ಇನ್ನು, ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಜೆಡಿಎಸ್ ಬ್ಲಾಕ್ ಅಧ್ಯಕ್ಷ ಹೆಚ್.ಗಣಪತಿ, ವಕ್ತಾರ ಎಂ.ಡಿ.ಶೇಖರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಸದಸ್ಯ ಪ್ರಕಾಶ್ ಹಳೇ ಸೊರಬ, ನಾಗರಾಜ್ ಚಂದ್ರಗುತ್ತಿ, … Read more

‘ವಿಐಎಸ್ಎಲ್’ಗೆ ಗಣಿ ಮಂಜೂರು ಮಾಡಿಸಿದ್ದಾಯ್ತು, ಎಂಪಿಎಂ ಆರಂಭಿಸುವ ಪ್ರಯತ್ನವೂ ಶುರುವಾಗಿದೆ’

VISL Bhadravathi 1

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಗಣಿ ಮಂಜೂರು ಮಾಡಿಸಿದರೆ ವಿಎಐಎಸ್ಎಲ್’ಗೆ ಬಂಡಾವಳ ಹಾಕುತ್ತೇವೆ, ಕಾರ್ಖಾನೆಯನ್ನು ಪುನಾರಂಭ ಮಾಡಿಸುತ್ತೇವೆ ಎಂದು ಭಾಷಣ ಮಾಡಿದ ಬಿಜೆಪಿ ಮಂತ್ರಿಗಳು ಮತ್ತು ಸಂಸದರು, ಈವರೆಗೂ ಕಾರ್ಖಾನೆಗಾಗಿ ಏನನ್ನೂ ಮಾಡಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರಾಗಿದೆ. ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಈಗ ಕಾರ್ಖಾನೆಯನ್ನು ಆರಂಭಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಗುತ್ತಿಗೆ ಕಾರ್ಮಿಕರಿಗೆ 26 ದಿನ ಕೆಲಸ ನೀಡಬೇಕು ಎಂಬ ಹೋರಾಟಕ್ಕೆ … Read more

ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಎಳೆದೊಯ್ದು ತಿಂದ ಹುಲಿ, ಗ್ರಾಮಸ್ಥರಲ್ಲಿ ಭಾರೀ ಆತಂಕ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 1 ಮಾರ್ಚ್ 2019 ಕೊಟ್ಟಿಗೆಗೆ ನುಗ್ಗಿದ ಹುಲಿಯೊಂದು ಹಸುವೊಂದನ್ನು ಎಳೆದೊಯ್ದು ತಿಂದು ಹಾಕಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ತೀರ್ಥಹಳ್ಳಿಯ ಬಸವಾನಿ ಸಮೀಪದ ಕವಡೇಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲಕಂಠ ಭಟ್ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದನ್ನು ಹಗ್ಗ ಸಹಿತ ಎಳೆದೊಯ್ದ ಹುಲಿ, ತಿಂದು ಹಾಕಿದೆ. ಹಸುವನ್ನು ಪೂರ್ತಿ ತಿಂದು ತಲೆ ಭಾಗವನ್ನು ಮಾತ್ರ ಬಿಟ್ಟು ಹೋಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಕೊಪ್ಪ ಮತ್ತು ತೀರ್ಥಹಳ್ಳಿ ಗಡಿ ಭಾಗದಲ್ಲಿರುವ ಕವಡೇಕಟ್ಟೆ … Read more