ಸಾಗರದ ಮಾರಿಕಾಂಬ ದೇವಿ ಜಾತ್ರೆ ಆರಂಭ, ತವರು ಮನೆಯಲ್ಲಿ ದೇವಿಯ ದರ್ಶನ, ಹೇಗಿತ್ತು ವೈಭವ?

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ (Marikamba Jathre) ಇಂದಿನಿಂದ ಆರಂಭವಾಗಲಿದೆ. ತವರು ಮನೆಯಲ್ಲಿ ತಾಯಿ ದರ್ಶನ ನೀಡುತ್ತಿದ್ದು, ರಾತ್ರಿಯಿಂದಲೇ ಸಾವಿರಾರು ಜನರು ಸರತಿಯಲ್ಲಿ ನಿಂತು ದೇವಿಯನ್ನು ಕಣ್ತುಂಬಿಕೊಂಡರು. ಇವತ್ತು ಸಾಗರದ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ, ಬ್ರಾಹ್ಮಿ ಮುಹೂರ್ತದಲ್ಲಿ ತಾಯಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ 3 ಗಂಟೆಗೆ ಅರ್ಚಕರ ಮನೆಯಲ್ಲಿ ಪೂಜೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮಂಗಳ ದ್ರವ್ಯ ತರಲಾಯಿತು. ದೇವಿಯ ತವರು ಮನೆಯಲ್ಲಿ ಉತ್ಸವ ಮೂರ್ತಿಗೆ … Read more

ಸಾಗರದಲ್ಲಿ ಪ್ರಾಂತೀಯ ಸಮಾವೇಶ, ಕೋಲ್ಕತ್ತದ ಅವಧೂತರು ಸೇರಿ ಹಲವರು ಭಾಗಿ

Sagara-News-Update.

ಸಾಗರ: ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಜನವರಿ 25ರಂದು ಮಧ್ಯಾಹ್ನ 2.30ರಿಂದ ಲಯನ್ಸ್‌ ಸಂಸ್ಥೆಯ ಮಲೆನಾಡು ಸಿರಿ ಪ್ರಾಂತೀಯ ಸಮಾವೇಶ (Regional Convention) ನಡೆಯಲಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕೆ.ಬಿ.ಮಹಾಬಲೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಕೋಲ್ಕತ್ತದ ಆಚಾರ್ಯ ಪ್ರಿಯಾ ಕೃಷ್ಣಾನಂದ ಅವಧೂತರು, ಸುರೇಶ್ ಪ್ರಭು, ಗಣೇಶ್ ಭಟ್ ಉಪ್ಪೋಣಿ, ರಾಜೀವ್ ಕೋಟ್ಯಾನ್, ಹರಿಪ್ರಸಾದ್ ರೈ ಶ್ರೀನಿವಾಸ್ ಮೂರ್ತಿ, ಅಶ್ವಿನಿಕುಮಾ‌ರ್, … Read more

ಆನಂದಪುರ: ಗೊಬ್ಬರ ಹಾಕುವಾಗ ಕಚ್ಚಿದ ಹಾವು, ಮಹಿಳೆ ಸಾವು

Anandapura Sagara Graphics

ಸಾಗರ: ಆನಂದಪುರ ಹೋಬಳಿಯ ಬಳ್ಳಿಬೈಲು ಗ್ರಾಮದಲ್ಲಿ ಹಾವು ಕಚ್ಚಿ (Snake Bite) ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪುಟ್ಟಪ್ಪ ಅವರ ಪತ್ನಿ ಲಕ್ಷ್ಮಮ್ಮ (65) ಮೃತರು. ತಮ್ಮ ಜಮೀನಿಗೆ ಗೊಬ್ಬರ ಹಾಕುತ್ತಿರುವಾಗ ಹಾವು ಕಚ್ಚಿದೆ. ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ  ಫಲಿಸದೆ ಲಕ್ಷ್ಮಮ್ಮ ಕೊನೆಯುಸಿರೆಳೆದಿದ್ದಾರೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಚಾರ, ಸಂಸದರಿಗೆ ಮನವಿ, ಏನಿದೆ ಮನವಿ ಕಾಪಿಯಲ್ಲಿ?

ನಿಯಂತ್ರಣ ತಪ್ಪಿದ ರಾಯಲ್‌ ಎನ್‌ಫೀಲ್ಡ್‌ ಬೈಕ್‌, ಅಪಘಾತ, ಸವಾರ ಸ್ಥಳದಲ್ಲೇ ಸಾವು

Royal-Enfiled-accident-near-anandapura.

ಸಾಗರ: ಬೈರಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ (Royal Enfield) ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟೆಕೊಪ್ಪ ಗ್ರಾಮದ ನಿವಾಸಿ ರಮೇಶ್ (55) ಮೃತರು. ಆನಂದಪುರ ಬಳಿಯ ಬೈರಾಪುರ ಗ್ರಾಮದ ಹತ್ತಿರ ಚಲಿಸುತ್ತಿದ್ದ ವೇಳೆ ಸವಾರನ ನಿಯಂತ್ರಣ ತಪ್ಪಿದ ರಾಯಲ್‌ ಎನ್‌ಫೀಲ್ಡ್‌ ಬೈಕ್‌, ರಸ್ತೆ ಪಕ್ಕದಲ್ಲಿದ್ದ ಹೋರ್ಡಿಂಗ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಆನಂದಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. … Read more

ಸಾಗರ ಪಟ್ಟಣದ ಜನರಿಗೆ 24 ಗಂಟೆ ಕುಡಿಯುವ ನೀರು ಪೂರೈಕೆ, ಎಂಎಲ್‌ಎ ಹೇಳಿದ್ದೇನು?

Drinking-Water-for-sagara-city-MLA-Beluru-Gopalakrishna

ಸಾಗರ: ಪಟ್ಟಣ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಗೆ (Water Supply) ₹230 ಕೋಟಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಜೋಗ ರಸ್ತೆಯಲ್ಲಿ ನಗರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ‘ಮನೆಯ ಅಂಗಳದಲ್ಲಿ ನಮ್ಮ ಶಾಸಕರು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು. ಎಂಎಲ್‌ಎ ಏನೇನು ಹೇಳಿದರು? 24 ಗಂಟೆ ನೀರು ಕೊಡುವುದರಿಂದ ಯಾರಿಗೂ ನೀರಿನ ಕೊರತೆ ಅಗುವುದಿಲ್ಲ. ಹೊಸನಗರ ತಾಲೂಕಿಗೆ ಜೆಜೆಎಂ ಅಡಿ ನೀರು ಪೂರೈಕೆಗೆ ₹420 … Read more

ಆನಂದಪುರ, ಜನವರಿ 20ರಂದು ಮಹಾರಥೋತ್ಸವ, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ

Anandapura Sagara Graphics

ಆನಂದಪುರ: ಇಲ್ಲಿನ ಬಸವನ ಬೀದಿಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವರ ಮಹಾರಥೋತ್ಸವ (Grand Rathotsava) ಜನವರಿ 20ರಂದು ನಡೆಯಲಿದೆ. ಈ ಹಿನ್ನೆಲೆ ದೇವಾಲಯದಲ್ಲಿ ಜ.19ರಿಂದ 21ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾವ್ಯಾವ ದಿನ ಏನೇನು ಕಾರ್ಯಕ್ರಮ? ಜನವರಿ 19ರ ಬೆಳಗ್ಗೆ10ಕ್ಕೆ ಗಣಪತಿ ಪೂಜೆ, ಪುಣ್ಯಾಹ, ಮಹಾಪೂಜೆ, ಸಂಜೆ ಯಾಗಶಾಲಾ ಪ್ರವೇಶ, ಪುಷೋತ್ಸವ ನಡೆಯಲಿದೆ. ಜನವರಿ 20ರಂದು ಬೆಳಗ್ಗೆ 9ಕ್ಕೆ ಗಣಪತಿ ಪೂಜೆ, ಕಲಾತತ್ವ ಹವನ, ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, … Read more

ಶರಾವತಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಡಾಕ್ಟರ್‌ ಸಾವು, ಹೇಗಾಯ್ತು ಘಟನೆ?

Sagara-News-Update.

ಸಾಗರ: ತಾಲೂಕಿನ ಹಕ್ರೆ ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶು ವೈದ್ಯಾಧಿಕಾರಿಯೊಬ್ಬರು (Doctor) ಮೃತಪಟ್ಟಿದ್ದಾರೆ. ಮಾಸೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸುನಿಲ್ (38) ಮೃತರು. ಭಾನುವಾರ ರಜೆಯ ಹಿನ್ನೆಲೆ ಕುಟುಂಬದವರ ಜೊತೆಗೆ ಹಕ್ರೆ ಹಿನ್ನೀರು ಪ್ರದೇಶಕ್ಕೆ ತೆರಳಿದ್ದರು. ಹಿನ್ನೀರು ಭಾಗದಲ್ಲಿ ಈಜಲು ಇಳಿದಾಗ ಡಾ. ಸುನಿಲ್‌ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ತಿಳಿಸಲಾಗಿತ್ತು. ಸ್ಥಳಕ್ಕೆ ಸಾಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಈಜುಗಾರರ ಸಹಾಯದೊಂದಿಗೆ ನಾಪತ್ತೆಯಾದ … Read more

ಮಾವ, ಸೊಸೆಗೆ ಖಾರದ ಪುಡಿ ಎರಚಿ, ರಾಡ್‌ನಿಂದ ಹೊಡೆದ ಕೇಸ್‌, ಇಬ್ಬರು ಅರೆಸ್ಟ್‌, ಯಾರವರು?

Anandapura-Police-nab-two-persons

ಸಾಗರ: ಮಾವ, ಸೊಸೆ ಬೈಕಿನಲ್ಲಿ ತೆರಳುವಾಗ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಸೊಸೆ ಶೃತಿ ತಲೆಗೆ ರಾಡ್‌ನಿಂದ ಹೊಡೆದ (Attacking) ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲೂಕು ತತ್ತೂರು ಗ್ರಾಮದ ಗೋವಿಂದ (24) ಮತ್ತು ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕಿರಣ್ ಕುಮಾರ್ (32) ಬಂಧಿತರು. ಏನಿದು ಪ್ರಕರಣ? ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್‌ … Read more

ಪಾತ್ರೆ ಮಾರಾಟಕ್ಕೆ ಬಂದವರಿಂದ ಮಹಿಳೆ ಸರ ಅಪಹರಣ, ಎಲ್ಲಿ? ಹೇಗಾಯ್ತು ಘಟನೆ?

Sagara Police Station Building

ಸಾಗರ: ಪಾತ್ರೆ ಮಾರಾಟ ಮಾಡಲು ಬಂದವರು ಗೃಹಿಣಿಯ ಚಿನ್ನದ ಸರ ಅಪಹರಿಸಿದ್ದಾರೆ (Chain snatching). ಸಾಗರದ ಸುಭಾಷ್‌ ನಗರದ ಚಿಲುಮೆಕಟ್ಟೆಯಲ್ಲಿ ಕವಿತಾ ಅವರು ಗೇಟಿನ ಶಬ್ದವಾದ ಕಾರಣ ಮನೆಯ ಬಾಗಿಲು ತೆರೆದಿದ್ದಾರೆ. ಇಬ್ಬರು ಅಪರಿಚಿತರು ಮಾರ್ಕೆಟಿಂಗ್ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ 30 ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಗರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ

281123-Anandapura-Police-Station-Board.webp

ಆನಂದಪುರ: ಇಲ್ಲಿನ ಮಸ್ಕಲಬೈಲು ಗ್ರಾಮದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದ ಪುರಡಿ ಎರಚಿ, ಬೈಕ್‌ನ ಹಿಂಬದಿ ಕುಳಿತಿದ್ದ ಅವರ ಸೊಸೆಯ ತಲೆಗೆ ಸ್ಟೀಲ್‌ ರಾಡ್‌ನಿಂದ ಹೊಡೆಯಲಾಗಿದೆ (Shocking attack) ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ಮತ್ತೆರಡು ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೆ ಟೈಮ್‌ ಫಿಕ್ಸ್‌ ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್‌ ರಸ್ತೆಗೆ … Read more