ಅಡಿಕೆ ಬೆಳೆಗಾರರ ಸಮಾವೇಶ ಮುಂದೂಡಿಕೆ, ಕಾರಣವೇನು?

Areca-Farm-Adike-tota-in-Shimoga

SHIVAMOGGA LIVE NEWS | 1 DECEMBER 2024 ಸಾಗರ: ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಡಿಸೆಂಬರ್ 6ರಂದು ಆಯೋಜಿಸಿದ್ದ ಅಡಿಕೆ ಬೆಳೆಗಾರರ (Adike) ಸಮಾವೇಶವನ್ನು ಜನವರಿ 18ಕ್ಕೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ತಿಳಿಸಿದ್ದಾರೆ. ಡಿ. 6ರಂದು ನಿಗದಿಯಾಗಿದ್ದ ಸಮಾವೇಶಕ್ಕೆ ಕೇಂದ್ರದ ಕೃಷಿ ಸಚಿವರು ಪಾಲ್ಗೊಳ್ಳುವ ಭರವಸೆ ನೀಡಿದ್ದರು. ಆಡಳಿತಾತ್ಮಕ ಕಾರಣಗಳಿಗಾಗಿ ಅಂದು ಸಮಾವೇಶಕ್ಕೆ ಬರಲು ಸಚಿವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ … Read more

ಜೋಗ ಜಲಪಾತದಲ್ಲಿ ರೈನ್‌ ಡಾನ್ಸ್‌, ಈಜು ಕೊಳ, ಇನ್ನು ಏನೇನಿರುತ್ತೆ?

Beluru-Gopalakrishna-in-Jog-Falls-in-Sagara

SHIVAMOGGA LIVE NEWS | 29 NOVEMBER 2024 ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತವನ್ನು (Jog Falls) ಸರ್ವಋತು ಪ್ರವಾಸಿ ತಾಣವಾಗಿ ರೂಪಿಸಲಾಗುತ್ತದೆ. 185 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಜೋಗ ಜಲಪಾತ ಆವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿದರು. ಬಳಿಕ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದರು. ಎಂಎಲ್‌ಎ ಹೇಳಿದ 3 ಪ್ರಮುಖಾಂಶ ಪ್ರವಾಸಿಗರು ವರ್ಷ ಪೂರ್ತಿ ಜೋಗ ಜಲಪಾತಕ್ಕೆ ಭೇಟಿ … Read more

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

Crime-News-General-Image

SHIVAMOGGA LIVE NEWS, 28 NOVEMBER 2024 ಸಾಗರ : ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನಲ್ಲಿ (Transformer) ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪದ ಹಾನಂಬಿ ಹೊಳೆಯ ಮೇಲ್ಭಾಗದ ಟ್ರಾನ್ಸ್‌ಫಾರ್ಮರ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ಸಾಗರದ ಜನ್ನತ್‌ ನಗರದ ನಿವಾಸಿ ಪ್ರಕಾಶ್‌ ಶೆಟ್ಟಿ (36) ಎಂದು ಗುರುತಿಸಲಾಗಿದೆ. ಯುವಕ ಬಾರ್‌ ಬೆಂಡಿಂಗ್‌ ಕೆಲಸ ಮಾಡುತ್ತಿದ್ದ. ಬುಧವಾರ ಈತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ … Read more

ಸಾಗರದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ, ಸ್ಥಳಕ್ಕೆ ತೆರಳಿ MLA ಪರಿಶೀಲನೆ

MLA-Beluru-Gopalakrishna-inspects-highway-project-in-sagara

SHIMOGA NEWS, 27 NOVEMBER 2024 ಸಾಗರ : ಇಲ್ಲಿನ ಅಗ್ರಹಾರ ವೃತ್ತದಿಂದ ರಾಮನಗರದವರೆಗೆ ನಿರ್ಮಾಣವಾಗುತ್ತಿರುವ ರಾಜ್ಯ ಹೆದ್ದಾರಿ (Highway) ಕಾಮಗಾರಿಯನ್ನು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿದರು. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಗ್ರಹಾರ ವೃತ್ತದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ತೆರಳಿ ಕಾಮಗಾರಿ ಪರಿಶೀಲಿಸಿದರು. ಮಾರ್ಕೆಟ್‌ ರಸ್ತೆ ಅಗಲೀಕರಣಕ್ಕೆ ಇನ್ನು ಹದಿನೈದು ದಿನದಲ್ಲಿ … Read more

ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

R-Lakshman-Former-Nagarasabhe-Member.

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ … Read more

ಜಿಂಕೆ ಬೇಟೆಯಾಡಿ ಸಾಂಬಾರು ಮಾಡುವಾಗ ದಾಳಿ

Sagara-News-Update.

SAGARA NEWS, 19 NOVEMBER 2024 : ಜಿಂಕೆ (Deer) ಬೇಟೆಯಾಡಿದ ಆರೋಪದ ಸಂಬಂಧ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಮ್ ಸೂರನಗದ್ದೆ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ. ಜಿಂಕೆಯನ್ನು ಬೇಟೆಯಾಡಿ ಕೆಲವರು ಮಾಂಸವನ್ನು ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಆಧರಿಸಿ ಸೂರನಗದ್ದೆ ಗ್ರಾಮದಲ್ಲಿರುವ ಜಯರಾಮ್ ಅವರ ಮನೆಯ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಜಿಂಕೆ ಮಾಂಸವನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯರಾಮ್ ಪರಾರಿಯಾಗಿದ್ದಾರೆ ಎಂದು ಸಿಬ್ಬಂದಿ … Read more

ಹತ್ತು ಪಟ್ಟು ಲಾಭಾಂಶ, ನಂಬಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ

Crime-News-General-Image

SAGARA NEWS, 18 NOVEMBER 2024 : ಸ್ಟಾಕ್‌ ಮಾರ್ಕೆಟ್‌ನಲ್ಲಿ (Stock Market) ಹೂಡಿಕೆ ಮಾಡಿ ಹತ್ತು ಪಟ್ಟು ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಇಂಜಿನಿಯರ್‌ ಒಬ್ಬರಿಗೆ 29.56 ಲಕ್ಷ ರೂ. ವಂಚಿಸಲಾಗಿದೆ. ಟೆಲಿಗ್ರಾಂ ಗ್ರೂಪ್‌ ಒಂದರಲ್ಲಿ ಸ್ಟಾಕ್‌ ಎಕ್ಸ್‌ಚೇಂಜ್‌ ಕಂಪನಿಯೊಂದರ ಹೆಸರಿನಲ್ಲಿ ಗ್ರೂಪ್‌ ಕ್ರಿಯೇಟ್‌ ಮಾಡಿ ಹಣ ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಇದನ್ನು ನಂಬಿದ ಇಂಜಿನಿಯರ್‌ ನ.2 ರಿಂದ ನ.7ರವರೆಗೆ ಒಟ್ಟು 29.56 ಲಕ್ಷ ರೂ. ಹೂಡಿಕೆ ಮಾಡಿದ್ದರು. ಸ್ಟಾಕ್‌ನಿಂದ ಲಾಭಾಂಶ 85.67 ಲಕ್ಷ ರೂ. … Read more

ಸಾಲಬಾಧೆ, ಕುಣಿಕೆಗೆ ಕೊರಳೊಡ್ಡಿದ ರೈತ

281123-Anandapura-Police-Station-Board.webp

SAGARA NEWS, 16 NOVEMBER 2024 : ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರುಬೀಸು ಗ್ರಾಮದ ರೈತ (Farmer) ರಾಮಚಂದ್ರ (48) ಗುರುವಾರ ತಡರಾತ್ರಿ ಮನೆ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಮತ್ತಿತರ ಕಡೆ 3 ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಚೇರಿ ಬಳಿ ಬೈಕ್‌ … Read more

ಸಿಗಂದೂರು ಬಳಿ ಹಿನ್ನೀರಿನಲ್ಲಿ ಮೂವರು ಯುವಕರ ಮೃತದೇಹ ಪತ್ತೆ

Youths-found-in-Sharavathi-river-near-sigandur

SAGARA, 14 NOVEMBER 2024 : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಕಣ್ಮರೆಯಾಗಿದ್ದ ಮೂವರು ಯುವಕರ (Youths) ಮೃತದೇಹಗಳು ಪತ್ತೆಯಾಗಿವೆ. ಮುಳುಗು ತಜ್ಞ ಈಶ್ವರ್‌ ಮಲ್ಪೆ ಶೋಧ ಕಾರ್ಯ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಹೊಳೆ ಊಟಕ್ಕೆ ಹೋದವರು ಸಾವು ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಹೊಳೆ ಊಟ ಮುಗಿಸಿ ಮರಳುವಾಗ ತೆಪ್ಪ ಮಗುಚಿ ಮೂವರು ಯುವಕರು ಕಣ್ಮರೆಯಾಗಿದ್ದರು. ಇನ್ನಿಬ್ಬರು ಈಜಿ ದಡ ಸೇರಿದ್ದರು. ಕಣ್ಮರೆಯಾಗಿದ್ದ ಚೇತನ್‌ (28), ಸಂದೀಪ್‌ (30) ಮತ್ತು ರಾಜೀವ್‌ (34) … Read more

BREAKING NEWS | ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ

Siganduru-Bridge-in-sagara-taluk

SAGARA NEWS, 13 NOVEMBER 2024 : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು (Youths) ಕಣ್ಮರೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದೆ. ಚೇತನ್‌, ಸಂದೀಪ್‌ ಮತ್ತು ರಾಜು ಎಂಬುವವರು ಕಣ್ಮರೆಯಾಗಿದ್ದಾರೆ. ಇವರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ. ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇದನ್ನೂ ಓದಿ » ಹೊಳೆ ಸ್ಟಾಪ್‌ನಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿ, ತಪ್ಪಿದ ಅನಾಹುತ