ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ.

R-Lakshman-Former-Nagarasabhe-Member.

ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ ಹಿಂದೆ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದ್ಯಸರಾಗಿದ್ದರು. ಇನ್ನು, ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಮಾಟ, ಮಂತ್ರ, ಈ ಬಾಕ್ಸ್‌ ತೆಗೆದರೆ ಸತ್ತೇ ಹೋಗ್ತೀರ, ನಂಬಿದ ಕುಟುಂಬಕ್ಕೆ ಕಾದಿತ್ತು ಆಘಾತ

Leave a Comment