ಸಾಗರದಲ್ಲಿ ಅವ್ವ ಮಹಿಳಾ ಮಹಾ ಸಂತೆ, ಏನೇನಿರುತ್ತೆ?

Sagara-News-Update.

ಸಾಗರ: ಇಲ್ಲಿನ ಜೀವನ್ಮುಖಿ ಸಂಸ್ಥೆಯು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನ. 15ರಂದು ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಗಾಂಧಿ ಮೈದಾನದಲ್ಲಿ ಅವ್ವ ಮಹಿಳಾ ಮಹಾ ಸಂತೆ ಆಯೋಜಿಸಿದೆ ಎಂದು ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ, ಹೆಗ್ಗೋಡಿನ ಚರಕ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಈ ಸಂತೆಯಲ್ಲಿ ರಾಜ್ಯದ ವಿವಿಧ ಭಾಗಗಳ ಮಹಿಳಾ ಉದ್ಯಮಿಗಳು ಸಿದ್ಧಪಡಿಸಿರುವ ಗೃಹೋತ್ಪನ್ನಗಳು, ಕೈಮಗ್ಗದ ವಸ್ತುಗಳು, ಸ್ಥಳೀಯ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಮಾರಾಟವಿರುತ್ತದೆ ಎಂದು ತಿಳಿಸಿದರು. ಚರಕ ಸಂಸ್ಥೆಯ ಉತ್ಪನ್ನಗಳನ್ನು … Read more

ಬೆಂಕಿ ಅನಾಹುತ, ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು

House-incident-at-anandapura-in-Sagara-taluk

ಆನಂದಪುರಂ: ಸಮೀಪದ ನ್ಯಾವಟ್ಟಿ ಗ್ರಾಮದ ಜಯಮ್ಮ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋದ ಘಟನೆ ನಡೆದಿದೆ. ಮನೆಯ (House) ಒಲೆಗೆ ಹಾಕಿದ್ದ ಬೆಂಕಿ ತಗುಲಿ ಈ ಘಟನೆ ನಡೆದಿದ್ದು ಸುಮಾರು ₹2 ಲಕ್ಷಕ್ಕು ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಉಮೇಶ್, ರಮಾನಂದ್, ರಹಮತುಲ್ಲಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ₹150 ಗಲಾಟೆ

ಸಾಗರದಲ್ಲಿ ಇವತ್ತು ಸಾಹಿತ್ಯ ಹುಣ್ಣಿಮೆ, ಎಲ್ಲಿ? ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ?

D-Manjunatha-about-kannada-shahitya-sammelana

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಏರ್ಪಡಿಸುವ ಮನೆ–ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 243 ನೇ ತಿಂಗಳ ಸಂಭ್ರಮ ಹಾಗೂ ರಾಜ್ಯೋತ್ಸವ ಕಾರ್ಯಕ್ರಮ ನ. 8ರ ಸಂಜೆ 6.30ಕ್ಕೆ ಲಯನ್ಸ್ ಸಂಸ್ಥೆ ಆತಿಥ್ಯದಲ್ಲಿ ಸಾಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಉದ್ಘಾಟಿಸಲಿದ್ದು, ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಕೀಲ ಹೆಚ್.ಟಿ. ರಾಘವೇಂದ್ರ, ಉದ್ಯಮಿಗಳಾದ ಎಲ್.ಎನ್‌. … Read more

ಅಡಿಕೆ ಕುರಿತು ವಿಜ್ಞಾನಿಗಳು, ಸಂಶೋಧಕರ ಸಮಾಲೋಚನೆ ಸಭೆ, ಯಾವಾಗ? ಎಲ್ಲಿ?

Areca-in-gunny-bag-APMC-Shimoga

ಸಾಗರ: ಅಡಿಕೆ (Adike) ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮುಂದಿನ 15 ದಿನದಲ್ಲಿ ನಗರದಲ್ಲಿ 15ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಸಂಶೋಧಕರ ಸಮಾಲೋಚನಾ ಸಭೆ ಆಯೋಜನೆಗೆ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಸಿದ ಪದಾಧಿಕಾರಿಗಳು, ಶ್ರೀಲಂಕಾದಲ್ಲಿ ಈಚೆಗೆ ನಡೆದ 15 ದೇಶಗಳ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಹಾನಿಕಾರಕ ಎಂದು ಪ್ರತಿಪಾದಿಸಿದೆ ಎಂಬ ವರದಿ ಕೆಲ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದರಿಂದ … Read more

ಆನಂದಪುರ ಬಳಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

281123-Anandapura-Police-Station-Board.webp

ಆನಂದಪುರಂ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ನಾರಾಯಣಪ್ಪ (73) ಗಿಳಾಲ ಗುಂಡಿ ಗ್ರಾಮದ ಅಮ್ಮನ ಕೆರೆಗೆ (Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ಪತ್ನಿ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

‘ವರಿಷ್ಠರ ಭೇಟಿಗೆ ದೆಹಲಿಗೆ ತೆರಳುವೆ’, ಸಚಿವ ಸ್ಥಾನದ ಬಗ್ಗೆ ಸಾಗರ ಎಂಎಲ್‌ಎ ಏನಂದ್ರು?

Sagara-Beluru-Gopalakrishna-press-meet

ಸಾಗರ: ನಾನು ಹಿರಿಯ ಶಾಸಕ. ನನಗೆ ಸಚಿವ (Minister) ಸ್ಥಾನ ಸಿಗುವ ವಿಶ್ವಾಸ ಇದೆ. ಅಗತ್ಯ ಬಿದ್ದರೆ ವರಿಷ್ಠರ ಭೇಟಿಗೆ ಹೊಸದಿಲ್ಲಿಗೂ ತೆರಳುವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೃಢವಾಗಿ ಹೇಳಿದರು. ಸಾಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೊಡಿ ಎಂದು ಹಿಂದೆ ಹೊಸದಿಲ್ಲಿಗೆ ಹೋಗಿದ್ದಾಗ ವರಿಷ್ಠರಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಳಿಯೂ ಕೇಳಿದ್ದೇನೆ. ನನ್ನ ಹಕ್ಕನ್ನು ಕೇಳಲು ಮುಜುಗರವಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ, … Read more

ಸಾಗರದಲ್ಲಿ ಬಸ್‌ ಹತ್ತಿದ ದಾವಣಗೆರೆ ಮಹಿಳೆ, ಐಬಿ ಸರ್ಕಲ್‌ ಬಳಿ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಸಾಗರ: KSRTC ಬಸ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣವಿದ್ದ ಪರ್ಸ್‌ ಕಳ್ಳತನ ಮಾಡಲಾಗಿದೆ. ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ ನಡೆದಿರುವ ಕುರಿತು ಶಂಕೆ ಇದೆ. ನಯನಾ ಎಂಬುವವರು ಸಾಗರ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ದಾವಣಗೆರೆಗೆ ಬಸ್‌ ಹತ್ತಿದ್ದರು. ಐಬಿ ಸರ್ಕಲ್‌ ಬಳಿ ಬಸ್‌ ತೆರಳುತ್ತಿರುವಾಗ ಟಿಕೆಟ್‌ ಮಾಡಿಸಲು ಬ್ಯಾಗ್‌ನಲ್ಲಿದ್ದ ಪರ್ಸ್‌ ತೆಗೆಯಲು ಮುಂದಾದರು. ಆಗ ಪರ್ಸ್‌ ಇಲ್ಲದಿರುವುದು ಗೊತ್ತಾಗಿದೆ. ಪರ್ಸ್‌ನಲ್ಲಿ ₹1.73 ಲಕ್ಷದ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಸ್‌ ಹತ್ತುವುದಕ್ಕು ಮುನ್ನ ನಯನಾ ಅವರಿಗೆ ಕರೆ ಬಂದಿತ್ತು. … Read more

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆ

Sagara-News-Update.

ಸಾಗರ: ಕಳೆದ ಕೆಲವು ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು (Person) ಶವವಾಗಿ ಪತ್ತೆಯಾಗಿದ್ದಾರೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ಸಮೀಪ, ರಸ್ತೆಯ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಜಂಬಗಾರು ಗ್ರಾಮದ ಹನುಮಂತಪ್ಪ (65) ಎಂದು ಗುರುತಿಸಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರು ಕಾಣೆಯಾಗಿದ್ದಾರೆ ಎಂದು 15 ದಿನಗಳ ಹಿಂದೆ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನೀರಿನ ತೊಟ್ಟಿಯಲ್ಲಿ ಕಾಡು ಕೋಣದ ಮೃತದೇಹ ಪತ್ತೆ

ವಾಹನ ಸವಾರರಿಗೆ ಗುಲಾಬಿ ಹೂವು ನೀಡಿದ ಪೊಲೀಸರು

Police-distributes-roses-to-bike-riders-wearing-helmets-in-Sagara

ಸಾಗರ: ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಾಗರ ನಗರ ವ್ಯಾಪ್ತಿಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ (Rose) ಹೂ ನೀಡುವ ಮೂಲಕ ಗೌರವಿಸಿದ್ದಾರೆ. ಇನ್ನು ಮುಂದೆ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಈ ನಿಟ್ಟಿನಲ್ಲಿ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಇನ್ನು ಮುಂದೆ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ತಿಳಿಸಿದ್ದಾರೆ. ಹೆಲ್ಮೆಟ್ ಧರಿಸದ … Read more

ಬ್ರೇಕ್‌ ಫೇಲ್‌ ಆಗಿ ಖಾಸಗಿ ಬಸ್‌ ಪಲ್ಟಿ, ಹಲವು ಪ್ರವಾಸಿಗರಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?

191025-Bus-incident-on-the-way-to-vadnbailu-from-siganduru.webp

ಸಾಗರ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ ಮುಗಿಸಿ ವಡನಬೈಲು ಬಳೆ ಪದ್ಮಾವತಿ ದೇವಸ್ಥಾನಕ್ಕೆ ತೆರಳುವಾಗ ಬಸ್‌ ಬ್ರೇಕ್‌ ಫೇಲ್‌ (Break Fail) ಆಗಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾಗರ ತಾಲೂಕು ಆಡುಕಟ್ಟೆ ಸಮೀಪದ ಜೋಗಿನ ಮಠ ಬಳಿ ಬಸ್‌ ಬ್ರೇಕ್‌ ಫೇಲ್‌ ಆಗಿ ತಿರುವಿನಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ 18 ಪ್ರವಾಸಿಗರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಪ್ರವಾಸಿಗರು ಚಿಕ್ಕಬಳ್ಳಾಪುರ ಸುಮಾರು 50 ಪ್ರವಾಸಿಗರು ಖಾಸಗಿ ಬಸ್ಸಿನಲ್ಲಿ ಸಿಗಂದೂರು, ವಡನಬೈಲು ದೇವಸ್ಥಾನಗಳಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಇವತ್ತು ಸಿಗಂದೂರು … Read more