ಕಾಡು ಪ್ರಾಣಿಗಳ ಭಯ, ಮಳೆ, ಗಾಳಿಯ ರಭಸ, ಆನ್ ಲೈನ್ ಕ್ಲಾಸ್​​​ಗಾಗಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು

170621 Online Class Sagara Tumari 1

ಶಿವಮೊಗ್ಗ ಲೈವ್.ಕಾಂ | SAGARA / THIRTHAHALLI / HOSNAGARA NEWS | 17 JUNE 2021 ಆನ್‍ಲೈನ್‍ ಕ್ಲಾಸ್‍ನಲ್ಲಿ ಪಾಲ್ಗೊಳ್ಳಲು ಇಲ್ಲಿಯ ಮಕ್ಕಳು ಪ್ರತಿದಿನ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕ್ಲಾಸ್‍ಗಾಗಿ ಈ ವಿದ್ಯಾರ್ಥಿಗಳು ನಿತ್ಯ ಟ್ರೆಕಿಂಗ್‍ ಮಾಡಬೇಕಿದೆ. ಕಾಡು ಪ್ರಾಣಿಗಳ ಭಯ, ಮಳೆ, ಗಾಳಿ ಜೊತೆಯು ಸೆಣೆಸಬೇಕಿದೆ. ಇದು ಶರಾವತಿ ಹಿನ್ನೀರಿನ ತುಮರಿ, ಬ್ಯಾಕೋಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ನಿತ್ಯದ ಕಷ್ಟ.  ಆನ್‍ಲೈನ್ ಕ್ಲಾಸ್‍ಗಾಗಿ ದಿನ ಹರಸಾಹಸ ಮಾಡಬೇಕಿದೆ. ಇಷ್ಟೆಲ್ಲ ಕಷ್ಟಪಟ್ಟರು ಸಿಗುವುದು 2ಜಿ … Read more

ಸಾಗರದಲ್ಲಿ ಶ್ರೀಗಂಧ ಮರ ಕಟಾವು ಮಾಡಲು ಯತ್ನಿಸಿದ ಕಳ್ಳರು, ವಿಡಿಯೋ ವೈರಲ್

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 17 JUNE 2021 ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಕಳ್ಳರು ಯತ್ನಿಸಿದ್ದಾರೆ. ಆದರೆ ಮನೆಯವರು ಮತ್ತು ಸ್ಥಳೀಯರು ಕೂಗಿ ಬೆದರಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಗರದ ವಿಜಯನಗರ ಬಡಾವಣೆಯ ಸಮೀಪ ಜಂಬಗಾರು ಹಿರಿಯಣ್ಣಯ್ಯ ಅವರ ಭೂಮಿಯಲ್ಲಿ ಶ್ರೀಗಂಧದ ಮರವಿದೆ. ಇದನ್ನು ಕಟಾವು ಮಾಡಿ ಕದ್ದೊಯ್ಯಲು ಕಳ್ಳರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಕಳ್ಳರ ಕೃತ್ಯ ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿದ್ದಾರೆ. ಅಲ್ಲದೆ ಕಳ್ಳರನ್ನು ಬೆದರಿಸಿದ್ದಾರೆ. ಹಾಗಾಗಿ ಕೃತ್ಯವನ್ನು … Read more

ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯಿಂದ ಫುಡ್ ಕಿಟ್ ವಿತರಣೆಗೆ ಪ್ಲಾನ್

KARGAL-SAGARA-NEWS-1.jpg

ಶಿವಮೊಗ್ಗ ಲೈವ್.ಕಾಂ | JOG KARGAL NEWS | 16 JUNE 2021 ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 600 ಕುಟುಂಬಗಳಿಗೆ ಕಿಟ್ ಹಂಚಲು ನಿರ್ಧರಿಸಲಾಗಿದೆ.ಪಟ್ಟಣ ಪಂಚಾಯಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಕಿಟ್ ಹಂಚಲು ತೀರ್ಮಾನಿಸಲಾಗಿದೆ. ಈ ಸಂಬಂಧ 4.69 ಲಕ್ಷ ರೂ. ಅನುದಾನ ಬಳಕೆಗೆ ಅನುಮೋದನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಪಟ್ಟಣ ಪಂಚಾಯಿತಿ … Read more

ಆಲದ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Anandapura Sagara Graphics

ಶಿವಮೊಗ್ಗ ಲೈವ್.ಕಾಂ | ANANDAPURAM NEWS | 15 JUNE 2021 ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೊಬ್ಬ ಮನೆ ಸಮೀಪದ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದಪುರ ಸಮೀಪದ ಜೇಡಿಸರ ಗ್ರಾಮದ ಯುವಕ ದೇವರಾಜ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ತಮ್ಮ ಬಳಿಯ ಆಲದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಬಿಎ, ಬಿಇಡ್ ಪದವಿ ಪಡೆದಿದ್ದ ದೇವರಾಜ್ ಸರ್ಕಾರ ಉದ್ಯೋಗಕ್ಕಾಗಿ ಪ್ರಯತ್ನ ನಡೆಸುತ್ತಿದ್ದರು. ಜೀವನ ನಿರ್ವಹಣೆಯಾಗಿ ಶಿವಮೊಗ್ಗದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ … Read more

ತ್ಯಾಗರ್ತಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿಗೆ ಶಾಕ್, ಸ್ಥಿತಿ ಕಂಡು ಅಧಿಕಾರಿಗಳಿಗೆ ಕ್ಲಾಸ್

tyagarthi sagara graphics

ಶಿವಮೊಗ್ಗ ಲೈವ್.ಕಾಂ | TYAGARTHI NEWS | 14 JUNE 2021 ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸದೆ ಲಸಿಕೆ ನೀಡುತ್ತಿದ್ದ ಅಧಿಕಾರಿಗಳಿಗೆ ಸಾಗರ ತಾಲೂಕು ಆರೋಗ್ಯಾಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ತ್ಯಾಗರ್ತಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆದರೂ ಲಸಿಕಾ ಕೇಂದ್ರದಲ್ಲಿ ಜನದಟ್ಟಣೆ ಇತ್ತು. ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಡಾ. ಕೆ.ಎಸ್.ಮೋಹನ್, ಜನರು ಗುಂಪುಗೂಡಿದ್ದನ್ನು ಕಂಡು ಸಿಟ್ಟಾದರು. ಲಸಿಕೆಗಾಗಿ ನಿಂತಿದ್ದವರು ಸಾಮಾಜಿಕ ಅಂತರ ಕಾಪಾಡಿರಲಿಲ್ಲ. … Read more

ನಡು ರಸ್ತೆಯಲ್ಲಿ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ

140621 Congress Workers Fire Bike At Anandapuram 1

ಶಿವಮೊಗ್ಗ ಲೈವ್.ಕಾಂ | ANANDAPURAM NEWS | 14 JUNE 2021 ‘100 ನಾಟೌಟ್’ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬೈಕ್‍ಗೆ ಪೆಟ್ರೋಲ್‍ ಸುರಿದು, ಬೆಂಕಿ ಹಚ್ಚಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಾಗರ ತಾಲೂಕು ಆನಂದಪುರದಲ್ಲಿ ಇವತ್ತು ‘100 ನಾಟೌಟ್‍’ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಬೈಕ್‍ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಯನ್ನು ಬೈಕ್‍ … Read more

ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದ ಸಾಗರದ ಯುವಕನ ವಿರುದ್ಧ ಕೇಸ್

sagara graphics

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021 ಮಕ್ಕಳ ಅಶ್ಲೀಲ ವಿಡಿಯೋ ಅಪ್‍ಲೋಡ್ ಮಾಡಿದ ಆರೋಪದ ಮೇಲೆ ಸಾಗರದ ಯುವಕನೊಬ್ಬನ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಸಾಗರ ಎಸ್‍ಪಿಎಂ ರಸ್ತೆಯ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಐಡಿ ಘಟಕದ ಸೈಬರ್‍ ಟಿಪ್‍ ಲೈನ್‍ ಮಾಹಿತಿ ಆಧಾರದ ಮೇಲೆ ಯುವಕನ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಯುವಕ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಕ್ಕಳ ಅಶ್ಲೀಲ … Read more

ಕಂಟೈನ್ಮೆಂಟ್ ಜೋನ್ ಒಳಗೆ ಅಕ್ರಮ ಪ್ರವೇಶ, ಎಚ್ಚರಿಸಿದ ಪಿಡಿಒಗೆ ನಿಂದನೆ, ಕೇಸ್ ದಾಖಲು

Anandapura Sagara Graphics

ಶಿವಮೊಗ್ಗ ಲೈವ್.ಕಾಂ | ANANDAPURA NEWS | 13 JUNE 2021 ಕಂಟೈನ್ಮೆಂಟ್ ಜೊನ್‍ಗೆ ಹಾಕಲಾಗಿದ್ದ ಬೇಲಿಯನ್ನು ತೆಗೆದು ಅಕ್ರಮವಾಗಿ ಪ್ರವೇಶ ಮಾಡಿ, ಟ್ರಾಕ್ಟರ್‍ ಕೊಂಡೊಯ್ಯುತ್ತಿದ್ದವರನ್ನು ಪ್ರಶ್ನಿಸಿದ ಪಿಡಿಒಗೆ ನಿಂದಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿಯ ಕಂಚ್ಯಾಳಸರದಲ್ಲಿ ಕರೋನ ಪಾಸಿಟಿವ ಪ್ರಕರಣ ಹೆಚ್ಚಿವೆ. ಅದ್ದರಿಂದ ಕಂಟೈನ್ಮೆಂಟ್ ಜೋನ್ ರಚಿಸಲಾಗಿತ್ತು. ಈ ಗ್ರಾಮಕ್ಕೆ ಅಳವಡಿಸಿದ್ದ ಬೇಲಿಯನ್ನು ಕಿತ್ತು ಹಾಕಿ ಅಕ್ರಮ ಪ್ರವೇಶ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪಿಡಿಓಗೆ ನಿಂದನೆ ಕಂಟೈನ್ಮೆಂಟ್‍ ಜೋನ್‍ನ … Read more

ಆನಂದಪುರ ಸಮೀಪ ಮನೆಯಲ್ಲಿ ಸ್ಫೋಟ, ಗೋಡೆ ಬಿರುಕು, ಹಾರಿ ಹೋದ ಹೆಂಚುಗಳು

130621 Anandapura Kannur Blast in Shimoga 1

ಶಿವಮೊಗ್ಗ ಲೈವ್.ಕಾಂ | ANANDAPURA NEWS | 13 JUNE 2021 ಮನೆಯೊಂದರಲ್ಲಿ ಸ್ಪೋಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ನಾಡ ಬಾಂಬ್‍ನಿಂದಾಗಿ ಸ್ಪೋಟ ಸಂಭವಿಸಿದೆ ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಮನೆಯವರು ಇದನ್ನು ನಿರಾಕರಿಸಿದ್ದಾರೆ. ಆನಂದಪುರ ಸಮೀಪದ ಕಣ್ಣೂರು ಗ್ರಾಮದಲ್ಲಿ ಸಂಗಿ ಕರಿಯಪ್ಪ ಎಂಬುವವರ ಮನೆಯಲ್ಲಿ ಸ್ಪೋಟ ಸಂಭವಿಸಿದೆ. ನಾಡ ಬಾಂಬ್‍ ಬಗ್ಗೆ ಶಂಕೆ ಸಂಗಿ ಕರಿಯಪ್ಪ ಅವರ ಮನೆಯಲ್ಲಿ ನಾಡ ಬಾಂಬ್ ಸ್ಪೋಟಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಸ್ಪೋಟದ ತೀವ್ರತೆಗೆ ಬಚ್ಚಲು … Read more

ಸಾಗರದಲ್ಲಿ ಕರೋನಾದ ನಡುವೆ ಮತ್ತೊಂದು ಕಾಯಿಲೆಯ ಸಂಕಷ್ಟ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 10 JUNE 2021 ಕರೋನ ಆತಂಕದ ನಡುವೆ ಸಾಗರದಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ದಿನೆ ದಿನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಹಾಲಪ್ಪ ಸೂಚಿಸಿದ್ದಾರೆ. ಡೆಂಡ್ಯೂ ನಿಯಂತ್ರಣ ಸಂಬಂಧ ಸಾಗರ ನಗರಸಭೆ ರಂಗಮಂದಿರ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣದಿಂದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯ ನಡೆಸುವಂತೆ ಸೂಚಿಸಿದರು. ಶಾಸಕರ ಸೂಚನೆಗಳೇನು? ತಾಲೂಕಿನಲ್ಲಿ ಕಳೆದ ತಿಂಗಳು 10 … Read more