ಕಂಟೈನ್ಮೆಂಟ್ ಜೊನ್‍ಗೆ ಹಾಕಲಾಗಿದ್ದ ಬೇಲಿಯನ್ನು ತೆಗೆದು ಅಕ್ರಮವಾಗಿ ಪ್ರವೇಶ ಮಾಡಿ, ಟ್ರಾಕ್ಟರ್ ಕೊಂಡೊಯ್ಯುತ್ತಿದ್ದವರನ್ನು ಪ್ರಶ್ನಿಸಿದ ಪಿಡಿಒಗೆ ನಿಂದಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿಯ ಕಂಚ್ಯಾಳಸರದಲ್ಲಿ ಕರೋನ ಪಾಸಿಟಿವ ಪ್ರಕರಣ ಹೆಚ್ಚಿವೆ. ಅದ್ದರಿಂದ ಕಂಟೈನ್ಮೆಂಟ್ ಜೋನ್ ರಚಿಸಲಾಗಿತ್ತು. ಈ ಗ್ರಾಮಕ್ಕೆ ಅಳವಡಿಸಿದ್ದ ಬೇಲಿಯನ್ನು ಕಿತ್ತು ಹಾಕಿ ಅಕ್ರಮ ಪ್ರವೇಶ ಮಾಡಲಾಗಿತ್ತು.
ಸ್ಥಳಕ್ಕೆ ಬಂದ ಪಿಡಿಓಗೆ ನಿಂದನೆ
ಕಂಟೈನ್ಮೆಂಟ್ ಜೋನ್‍ನ ಒಳಗೆ ಟ್ರಾಕ್ಟರ್‍ನಲ್ಲಿ ಪ್ರವೇಶ ಮಾಡಿದ್ದವರನ್ನು ಗ್ರಾಮಸ್ಥರು ತಡೆದಿದ್ದರು. ಅಲ್ಲದೆ ಪಿಡಿಒಗೂ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಿಡಿಒ ವಾಣಿಶ್ರೀ ಅವರು ಅಕ್ರಮವಾಗಿ ಕಂಟೈನ್ಮೆಂಟ್ ಜೋನ್ ಒಳಗೆ ಹೋದವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪಿಡಿಒ ವಾಣಿಶ್ರೀ ಅವರನ್ನು ನಿಂದಿಸಲಾಗಿದೆ.
ಈ ಸಂಬಂಧ ವಾಣಿಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ತಾಲೂಕು ಕಪ್ಪನಹಳ್ಳಿಯ ಜೈದೇವಗೌಡ ಪಾಟೀಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಇಟ್ಟಿಗೆಹಳ್ಳಿ ತಾಂಡದ ನಾಲ್ಕೈದು ಜನರು ಇಟ್ಟಿಗೆ ತುಂಬಿಕೊಂಡು ಶಿವಮೊಗ್ಗದ ಕಡೆಗೆ ಹೋಗುತ್ತಿದ್ದರು. ದಾರಿ ಅಡ್ಡಲಾಗಿದ್ದ ಬೇಲಿಯನ್ನು ತೆಗೆದು ಕಂಟೈನ್ಮೆಂಟ್ ಜೋನ್ ಒಳಗೆ ಪ್ರವೇಶಿಸಿದ್ದಾರೆ. ಪಿಡಿಒ ವಾಣಿಶ್ರೀ ಅವರ ದೂರಿನ ಮೇರೆಗೆ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com