ನಾಳೆಯಿಂದ ಒಂದು ವಾರ ಸಾಗರದ ಆಟೋ ಕಾಂಪ್ಲೆಕ್ಸ್ ಸ್ವಯಂ ಪ್ರೇರಿತ ಬಂದ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2020 ದಿನೇ ದಿನೇ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ, ಒಂದು ವಾರ ಸಾಗರದ ಕೈಗಾರಿಕಾ ಸಂಕೀರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಜುಲೈ 9ರಿಂದ ಸಂಕೀರ್ಣ ಬಂದ್ ಆಗಲಿದೆ. ಸ್ವಯಂ ಪ್ರೇರಿತ ಬಂದ್ ಮಲೆನಾಡು ಸಣ್ಣ ಕೈಗಾರಿಕೆ ಮಾಲೀಕರು ಮತ್ತು ಕಾರ್ಮಿಕರ ಸಂಘದ ವತಿಯಂದ ಸ್ವಯಂ ಪ್ರೇರಿತ ಬಂದ್‍ಗೆ ನಿರ್ಧರಿಸಲಾಗಿದೆ. ಇಲ್ಲಿನ ಕೈಗಾರಿಕಾ ವಸಾಹತು, ಆಟೋ ಕಾಂಪ್ಲೆಕ್ಸ್, ಮಂಗಳಬೀಸು ಕೈಗಾರಿಕಾ ಪ್ರದೇಶದಲ್ಲಿ … Read more

ಸಾಗರದಲ್ಲಿ ಹೊಸ ಲಾಕ್ ಡೌನ್ ರೂಲ್ಸ್ ಇಲ್ಲ, ಗ್ರಾಮ ಪಂಚಾಯ್ತಿ ಟಾಸ್ಕ್ ಫೋರ್ಸ್ ಸಕ್ರಿಯಕ್ಕೆ ಸೂಚನೆ

070720 Sagara MLA Halappa Meeting in Sagara Covid19 report 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2020 ಲಾಕ್‍ ಡೌನ್ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ನಿಯಮಗಳನ್ನು ಹೊರತುಪಡಿಸಿ, ತಾಲೂಕು ಆಡಳಿತ ಹೊಸ ನಿಯಮಗಳನ್ನು ಜಾರಿಗೊಳಿಸುವುದು ಬೇಡ ಎಂದು ಶಾಸಕ ಹರತಾಳು ಹಾಲಪ್ಪ ಸೂಚಿಸಿದ್ದಾರೆ. ಕೋವಿಡ್ 19 ನಿಯಂತ್ರಣ ಕುರಿತು ಸಾಗರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕರೆಯಾಗಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ, ತಾಲೂಕು ಆಡಳಿತದ ವತಿಯಿಂದ ಹೊಸ ನಿಯಮ ಜಾರಿಗೊಳಿಸುವುದು ಬೇಡ. ಇದರಿಂದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಲಿದೆ … Read more

ಸಾಗರದ ಲ್ಲಿ ಮೆಸ್ಕಾಂ ಜೆಇಗೆ ಕರೋನ, ಲಕ್ಷಣವಿಲ್ಲದಿದ್ದರೂ ಸೋಂಕು ಪ್ರತ್ಯಕ್ಷ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಜುಲೈ 2020 ಬಳ್ಳಾರಿಗೆ ಹೋಗಿ ಬಂದಿದ್ದ ಮೆಸ್ಕಾಂ ಸಹಾಯಕ ಅಭಿಯಂತರರೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಟ್ರಾವಲ್ ಹಿಸ್ಟರಿ ಇದ್ದ ಕಾರಣ ಇವರು ಕರೋನ ಪರೀಕ್ಷೆಗೆ ಒಳಪಟ್ಟಿದ್ದರು. ಯಾವುದೇ ಲಕ್ಷಣಗಳಿಲ್ಲದೆ ಇದ್ದರೂ ಮಹಿಳೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಕೂಡಲೇ ಮೆಸ್ಕಾಂ ಜೆಇಗೆ ಚಿಕಿತ್ಸೆ ಆರಂಭಿಸಲಾಗಿದೆ. ಮಾರ್ಕೆಟ್ ರಸ್ತೆಯ ಲಿಂಬು ಸರ್ಕಲ್ ಬಳಿ ಇವರು ವಾಸವಾಗಿದ್ದು. ಈಗ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. … Read more

ಸಾಗರಕ್ಕೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಟೆಸ್ಟ್, ವಾಹನಗಳಿಗೆ ಸ್ಯಾನಿಟೈಸ್ ಮಾಡಿ, ಮಾಜಿ ಮಿನಿಸ್ಟರ್ ಮನವಿ

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಸಾಗರ ನಗರದಲ್ಲಿ ಕರೋನ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗಾಗಿ ಸಾಗರ ಪಟ್ಟಣವನ್ನು ಪ್ರವೇಶಿಸುವ ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನ್ ಮಾಡಬೇಕು ಮತ್ತು ವಾಹನಗಳಿಗೆ ಸ್ಯಾನಿಟೈಸರ್ ಮಾಡುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದಾರೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಚಂದ್ರಶೇಕರ್ ನಾಯ್ಕ್ ಅವರನ್ನು ಭೇಟಿಯಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಗರ ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯೊಳಗೆ ನಾಲ್ಕು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಹೊರಗಿನಿಂದ … Read more

ಸಾಗರದಲ್ಲಿ ಕರ್ಫ್ಯೂ, ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್, ಯಾವುದಕ್ಕೆಲ್ಲ ವಿನಾಯಿತಿ ನೀಡಲಾಗಿದೆ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಇವತ್ತು ರಾತ್ರಿ 8 ಗಂಟೆಯಿಂದ ಕರ್ಪ್ಯೂ ವಿಧಿಸಲಾಗುತ್ತಿದ್ದು, ಅನಗ‍ತ್ಯವಾಗಿ ಹೊರಗೆ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ  ವಿಭಾಗಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಟ್ಟುನಿಟ್ಟು ಕ್ರಮಗಳ ಕುರಿತು ವಿವರಿಸಿದ ಡಾ.ನಾಗರಾಜ್, ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ. ಹಾಲು, ಔಷಧಿ ಅಂಗಡಿಗಳು ಮಾತ್ರ ಲಾಕ್‍ ಡೌನ್‍ನಿಂದ ವಿನಾಯಿತಿ … Read more

ಮತ್ತೊಬ್ಬ ಮೆಸ್ಕಾಂ ಲೈನ್ ಮನ್‌ಗೆ ಕರೋನ, ಕ್ವಾರ್ಟರ್ಸ್ ಸೀಲ್ ಡೌನ್, ಜನರಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಸಾಗರದಲ್ಲಿ ಮೆಸ್ಕಾಂನ ಮತ್ತೊಬ್ಬ ಲೈನ್‌ ಮನ್‌ಗೆ ಕರೋನ ಸೋಂಕು ತಗುಲಿದೆ. ಇದರಿಂದ ಮೆಸ್ಕಾಂ ಕ್ವಾರ್ಟರ್ಸ್‌ ಸೀಲ್‌ ಡೌನ್‌ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಸೋಂಕು ತಗುಲಿದ್ದು ಹೇಗೆ? ಎರಡು ದಿನದ ಹಿಂದೆ ಮೆಸ್ಕಾಂ ಲೈನ್‌ ಮನ್‌ ಒಬ್ಬರಿಗೆ ಸೋಂಕು ತಗುಲಿತ್ತು. ಈಗ ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಲೈನ್‌ ಮನ್‌ಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಗೆ ಸ್ಯಾನಿಟೈಸ್‌ ಮಾಡಲಾಗಿದೆ. ಕ್ವಾರ್ಟರ್ಸ್‌ ಸೀಲ್‌ … Read more

ಎಸ್ಸೆಸ್ಸೆಲ್ಸಿ ಮಕ್ಕಳಿದ್ದ ಬಸ್ ಬರೋ ಹಾದಿಯಲ್ಲಿ ಬಿತ್ತು ಮರ, ಯಶೋಗಾಥೆ ಆಯ್ತು ಚಾಲಕ, ಶಿಕ್ಷಕನ ಕಾರ್ಯ, ಅಷ್ಟಕ್ಕೂ ಏನಾಯ್ತು ಗೊತ್ತಾ?

270620 Sagara SSLC Bus Tree fall 1

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಜೂನ್ 2020 KSRTC ಬಸ್ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ಇವತ್ತು 16 ಮಕ್ಕಳು ಸರಿಯಾದ ಸಮಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತಾಗಿದೆ. ಚಾಲಕ ಮತ್ತು ರೂಟ್ ಆಫೀಸರ್ ಯಶೋಗಾಥೆಗೆ ಶಿಕ್ಷಣ ಇಲಾಖೆಯ ಪ್ರಶಂಸೆ ವ್ಯಕ್ತಪಡಿಸಿದೆ. ಅಷ್ಟಕ್ಕೂ ಆಗಿದ್ದೇನು? ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದ 16 ಎಸ್ಸೆಸ್ಸೆಲ್ಸಿ ಮಕ್ಕಳು ಗಣಿತ ಪರೀಕ್ಷೆ ಬರೆಯಲು ಕಾರ್ಗಲ್‍ನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ನಾಗವಳ್ಳಿಯಿಂದ ಪರೀಕ್ಷಾ ಕೇಂದ್ರವು 50 ಕಿ.ಮೀ ದೂರದಲ್ಲಿದೆ. ಹಾಗಾಗಿ KSRTC … Read more

ಕ್ಯಾನ್ಸರ್‌ಗೆ ಔಷಧಿ ನೀಡುತ್ತಿದ್ದ ಸಾಗರ ನರಸೀಪುರದ ನಾರಾಯಣಮೂರ್ತಿ ಇನ್ನಿಲ್ಲ

250620 Narasipura Narayanamurthy 1

ಶಿವಮೊಗ್ಗ ಲೈವ್.ಕಾಂ | SAGARA NEWS | 25 ಜೂನ್ 2020 ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದ ನಾಟಿ ವೈದ್ಯ ನಾರಾಯಣಮೂರ್ತಿ ನಿಧನರಾಗಿದ್ದಾರೆ. ನಾರಾಯಣಮೂರ್ತಿ (81), ಅವರು ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಕ್ಯಾನ್ಸರ್ ಮತ್ತು ಇತರೆ ಕಾಯಿಲೆಗಳಿಗೆ ಇವರು ನಾಟಿ ಔಷಧಿ ಕೊಡುತ್ತಿದ್ದರು. ಹಾಗಾಗಿ ಭಾರತ ಸೇರಿದಂತೆ ವಿವಿಧೆಡೆಯಿಂದ ಹಲವರು ಔಷಧಿಗಾಗಿ ಸಾಗರ ತಾಲೂಕು ಆನಂದಪುರದ ನರಸೀಪುರಕ್ಕೆ ಬರುತ್ತಿದ್ದರು. ಲಾಕ್ ಡೌನ್ ಬೆನ್ನಿಗೆ ಔಷಧಿ ಬಂದ್ ಔಷಧಿಗಾಗಿ ಜಿಲ್ಲೆ, ಹೊರ ಜಿಲ್ಲೆ, ಹೊರ … Read more

ಸಾಗರ ತಾಲೂಕಿನ ಯುವಕನಿಗೆ ಕರೋನ, ಸೋಂಕು ತಗುಲಿದ್ದು ಹೇಗೆ? ಪಾಸಿಟಿವ್ ಇದೆ ಗೊತ್ತಾಗಿದ್ದು ಹೇಗೆ?

ಶಿವಮೊಗ್ಗ ಲೈವ್.ಕಾಂ | SAGARA NEWS | 22 ಜೂನ್ 2020 ಸಾಗರ ತಾಲೂಕಿನ ಮತ್ತೊಬ್ಬ ಯುವಕನಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಪುನಃ ತಾಲೂಕಿನಲ್ಲಿ ಆತಂಕ ಸೃಷ್ಟಿಯಾಗಿದೆ. ಯಾರದು ಯುವಕ? ಯಾವ ಊರು? ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಸಾಗರದ ಸೋಂಕಿತನನ್ನು ಪಿ8817 ಎಂದು ಗುರುತಿಸಲಾಗಿದೆ. 25 ವರ್ಷದ ಈತ ಮಹಾರಾಷ್ಟ್ರದಿಂದ ಹಿಂತಿರುಗಿದ್ದ. ರೈಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ. ಭಟ್ಕಳದಲ್ಲಿ ಸ್ವ್ಯಾಬ್ ಟೆಸ್ಟ್‍ ನೀಡಿದ ಬಳಿಕ ಸಾಗರ ತಾಲೂಕಿನ ಬಿಳಿಗಾರು ಗ್ರಾಮದ ತನ್ನ ಮನೆಗೆ … Read more

ಮುಂಬೈನಿಂದ ರೈಲಿನಲ್ಲಿ ಬಂದು ಮನೆ ಸೇರಿದ್ದ ಯುವಕನಿಗೆ ಕರೋನ, ಕುಟುಂಬದವರೆಲ್ಲ ಕ್ವಾರಂಟೈನ್‍ಗೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 10 ಜೂನ್ 2020 ಮುಂಬೈನಿಂದ ಬಂದಿದ್ದ ಯುವಕನೊಬ್ಬನಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಸಾಗರ ತಾಲೂಕಿನಲ್ಲಿ ಆತಂಕ ಮೂಡಿದೆ. ಮುಂಬೈನಿಂದ ರೈಲಿನಲ್ಲಿ ಬಂದಿದ್ದ ಈತ ಬೈಕ್‍ನಲ್ಲಿ ಮನೆ ಸೇರಿದ್ದ ಎಂದು ತಿಳಿದು ಬಂದಿದೆ. ಆ ಬಳಿಕ ಈತನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಗರ ತಾಲೂಕಿನ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ವರ್ಷದ ಯುವಕನಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಈತ ಮುಂಬೈನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಹಾರಾಷ್ಟ್ರದಿಂದ ರೈಲಿನ … Read more