ಶಿಕಾರಿಪುರದ ಬೇಗೂರು, ಬೈರನಹಳ್ಳಿ ಸುತ್ತಮುತ್ತ ಚಿರತೆ ಭೀತಿ

201023-leopard-general-image.webp

SHIVAMOGGA LIVE NEWS | 28 NOVEMBER 2023 SHIKARIPURA : ತಾಲೂಕಿನ ಬೇಗೂರು ಮತ್ತು ಬೈರನಹಳ್ಳಿ ಗ್ರಾಮದ ನಡುವೆ ಚಿರತೆ (Leopard) ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ರೈತರು ಜಮೀನಿಗೆ ತೆರಳಲು ಕೂಡ ಹೆದರುತ್ತಿದ್ದಾರೆ. ಬೇಗೂರು ಕರೇಹಳ್ಳ ಭಾಗದಲ್ಲಿ ನವೆಂಬರ್‌ ತಿಂಗಳ ಆರಂಭದಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸುತ್ತಮುತ್ತಲು ಬೋನ್‌ ಇರಿಸಲಾಗಿದೆ. ಆದರೆ ಚಿರತೆ ಸುತ್ತಮುತ್ತಲು ಸಂಚರಿಸುತ್ತಿದೆ. ಇದರಿಂದ ಆತಂಕಕ್ಕೀಡಾದ ಗ್ರಾಮಸ್ಥರು ಜಮೀಗೆ … Read more

ಶಿಕಾರಿಪುರದ ಶಿವಮೊಗ್ಗ ರಸ್ತೆಯಿಂದ ಬೈಕ್‌ ಜಾಥಾ, ನ.30ರಂದು ಸಂತೆ ಮೈದಾನದಲ್ಲಿ ಸಮಾರಂಭ

Shikaripura-MLA-BY-Vijayendra.webp

SHIVAMOGGA LIVE NEWS | 27 NOVEMBER 2023 SHIKARIPURA : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ (B.Y.Vijayendra) ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ನ.30ರಂದು ಶಿಕಾರಿಪುರದ ಹಳೆ ಸಂತೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು. ಶಿಕಾರಿಪುರ ಪಟ್ಟಣದ ಕುಮದ್ವತಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಗುರುಮೂರ್ತಿ, ನಮ್ಮ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಾಮಾನ್ಯ ಕಾರ್ಯಕರ್ತರಿಂದ … Read more

ತರಲಘಟ್ಟ ಕೈವಶ, ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು

201123-Congress-Wins-at-Tarlagatta-Village-in-Shikaripura.webp

SHIVAMOGGA LIVE NEWS | 20 NOVEMBER 2023 SHIKARIPURA : ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯಿತಿ ಕಾಂಗ್ರೆಸ್‌ (Congress) ತೆಕ್ಕೆಗೆ ಜಾರಿದೆ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಮಂಜಮ್ಮ ಜ್ಞಾನೇಶ್‌ ಅಧ್ಯಕ್ಷರಾಗಿ, ಕುಮಾರ್‌ ನಾಯಕ್‌ ತಿಮ್ಲಾಪುರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸದಸ್ಯರು, ತಾಲೂಕಿನ ಕಾಂಗ್ರೆಸ್‌ ಮುಖಂಡರು ಅಭಿನಂದಿಸಿದ್ದಾರೆ. ಸಮಬಲವಿದ್ದ ಬಿಜೆಪಿ, ಕಾಂಗ್ರೆಸ್‌ ತರಲಘಟ್ಟ ಗ್ರಾಮ ಪಂಚಾಯಿತಿ 16 ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ (Congress) ಬೆಂಬಲಿತ … Read more

BREAKING NEWS – ಶಿಕಾರಿಪುರದಲ್ಲಿ ಪೊಲೀಸ್‌ ಠಾಣೆ ಮುಂದೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

MP-BY-Raghavendra-led-protest-in-front-of-Shikaripura-Rural-Police-station.webp

SHIVAMOGGA LIVE NEWS | 18 NOVEMBER 2023 SHIKARIPURA : ಹೋರಿ ಹಬ್ಬ ನಡೆಸಲು ಪೊಲೀಸ್‌ ಇಲಾಖೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಗ್ರಾಮಸ್ಥರು ಶಿಕಾರಿಪುರ ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಮದಗ ಹಾರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ದೀಪಾವಳಿ ಸಂದರ್ಭ ಹೋರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಪೊಲೀಸ್‌ ಇಲಾಖೆ ಹೋರಿ ಹಬ್ಬಕ್ಕೆ ಅಡ್ಡಿ ಉಂಟು ಮಾಡಿದೆ ಎಂದು ಆರೋಪಿಸಿ ಗ್ರಾಮಸ್ಥರು ಸಂಸದ ರಾಘವೇಂದ್ರ … Read more

ಲಂಚ ಪಡೆಯುತ್ತಿದ್ದ ಪಿಡಿಒ ಶಿವಮೊಗ್ಗ ಲೋಕಾಯುಕ್ತ ಬಲೆಗೆ

Lokayuktha-Raid-General-Image

SHIVAMOGGA LIVE NEWS | 17 NOVEMBER 2023 SHIKARIPURA : ಲಂಚ ಪಡೆಯುತ್ತಿದ್ದ ಸಂದರ್ಭ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಪಿಡಿಒನನ್ನು ಬಂಧಿಸಲಾಗಿದೆ. ಶಿಕಾರಿಪುರ ತಾಲೂಕು ಬಗನಕಟ್ಟೆ ಪಿಡಿಒ ಮಂಜುನಾಥ್ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಂಕ್ಲಾಪುರ ನಿವಾಸಿ ಸಾಕಮ್ಮ ಅವರ ಮನೆಯ ಚಾವಣಿ ಮತ್ತು ಗೋಡೆ 2021ರಲ್ಲಿ ಮಳೆಯಿಂದ ಕುಸಿದು ಬಿದ್ದತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುನರ್ ನಿರ್ಮಾಣಕ್ಕಾಗಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. … Read more

17 ವರ್ಷದ ಅಪ್ರಾಪ್ತನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಶಿವಮೊಗ್ಗ ನ್ಯಾಯಾಲಯದ ಆದೇಶ

Shimoga District Court

SHIVAMOGGA LIVE NEWS | 12 NOVEMBER 2023 SHIMOGA : ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸಾಬೀತಾದ ಹಿನ್ನೆಲೆ ಅಪ್ರಾಪ್ತನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2021ರಲ್ಲಿ ಶಿಕಾರಿಪುರದಲ್ಲಿ 3 ವರ್ಷದ ಬಾಲಕಿ ಮೇಲೆ 17 ವರ್ಷ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಜೆ.ಲಕ್ಷ್ಮಣ್‌ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. … Read more

ಶ್ರದ್ಧಾ ಭಕ್ತಿಯಿಂದ ನೆರವೇರಿತು ಮೈಲಾರಲಿಂಗೇಶ್ವರ-ಮಾಲತೇಶ ಗಟ್‌ಪರವು

011123-Shikaripura-ghat-paravu-devotees-participated.webp

SHIVAMOGGA LIVE NEWS | 1 NOVEMBER 2023 SHIKARIPURA : ಮೈಲಾರಲಿಂಗೇಶ್ವರ, ಮಾಲತೇಶ ದೇವರ ಧಾರ್ಮಿಕ ಕಾರ್ಯಕ್ರಮ ಗಟ್‌ ಪರವು (paravu) ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೊಡ್ಡ ಸಂಖ್ಯೆಯ ಭಕ್ತರು ಪರವುನಲ್ಲಿ ಭಾಗವಹಿಸಿದ್ದರು. ಶಿಕಾರಿಪುರದ ಮಾಸೂರು ರಸ್ತೆಯ ಶಿಬಾರಕಟ್ಟೆಯಲ್ಲಿ ಗಟ್‌ ಪರವು ನಡೆಯಿತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಕ್ಷೇತ್ರದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ಅಂಗವಾಗಿ ಭಕ್ತರು ಹಾಗೂ ಗೊರವಯ್ಯನವರು ಗಟ್‌ಪರವು ನಡೆಸುವುದು ವಾಡಿಕೆ. ಗೊರವಯ್ಯ ಅವರು ಮತ್ತು ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ … Read more

ಪಿಎಸ್‌ಐ ನಿಧನ, ಶಿಕಾರಿಪುರದ ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

PSI-Jagadish-Naik-No-More

SHIVAMOGGA LIVE NEWS | 22 SEPTEMBER 2023 SHIKARIPURA : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಬ್‌ ಇನ್ಸ್‌ಪೆಕ್ಟರ್‌ (Sub Inspector) ಕೊನೆಯುಸಿರೆಳೆದಿದ್ದಾರೆ. ಶಿಕಾರಿಪುರ ತಾಲೂಕು ನಳ್ಳಿನಕೊಪ್ಪ ಗ್ರಾಮದಲ್ಲಿ ಇವತ್ತು ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಪಿಎಸ್‌ಐ ಜಗದೀಶ್‌ ನಾಯ್ಕ (37) ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದರು. ಕಲಬುರಗಿ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ದಿನಾಂಕ, ಸ್ಥಳ ನಿಗದಿ, ಸಮಸ್ಯೆ ಹೇಳಿಕೊಳ್ಳಲು ಜನರಿಗಿದೆ ಮುಕ್ತ … Read more

ಶಿಕಾರಿಪುರದಲ್ಲಿ ನೇಣು ಬಿಗಿದು ರೈತ ಆತ್ಮಹತ್ಯೆ

SHIKARIPURA-TALUK-NEWS-1.jpg

SHIVAMOGGA LIVE NEWS | 20 SEPTEMBER 2023 SHIKARIPURA : ಸಾಲಬಾಧೆಯಿಂದ (Loan) ಮನನೊಂದು ರೈತರೊಬ್ಬರು (Farmer) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದ ಪರಮೇಶಪ್ಪ (47) ಮೃತ ರೈತ. ಕೃಷಿ ಚಟುವಟಿಕೆಗಾಗಿ ವಿವಿಧ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಂದ ಸಾಲ ಮಾಡಿದ್ದರು. ಬರದ ಹಿನ್ನೆಲೆ ಸಾಲ ತೀರಿಸಲಾಗಿದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಶಿಕಾರಿಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ – ಸೈಲೆನ್ಸರ್‌ಗಳನ್ನು ಸಾಲಾಗಿರಿಸಿ ರೋಡ್‌ ರೋಲರ್‌ ಹತ್ತಿಸಿದ ಪೊಲೀಸರು

ಸೈಲೆನ್ಸರ್‌ಗಳನ್ನು ಸಾಲಾಗಿರಿಸಿ ರೋಡ್‌ ರೋಲರ್‌ ಹತ್ತಿಸಿದ ಪೊಲೀಸರು

Defalut-bike-silencers-destroyed-by-Shiralakoppa-Police.webp

SHIVAMOGGA LIVE NEWS | 19 SEPTEMBER 2023 SHIRALAKOPPA : ದೋಷಪೂರಿತ ಬೈಕ್‌ ಸೈಲೆನ್ಸರ್‌ಗಳನ್ನು (Silencer) ವಶಕ್ಕೆ ಪಡೆದ ಪೊಲೀಸರು ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ನಾಶಪಡಿಸಿದರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು 20 ದೋಷಪೂರಿತ ಸೈಲೆನ್ಸರ್‌ಗಳನ್ನು (Silencer) ವಶಕ್ಕೆ ಪಡೆದಿದ್ದರು. ಟೌನ್‌ ಬಸ್‌ ನಿಲ್ದಾಣದ ಸಮೀಪ ಇವುಗಳನ್ನು ಸಾಲಾಗಿ ಇರಿಸಿ ನಾಶಪಡಿಸಲಾಗಿದೆ. ಇನ್ಮುಂದೆ ಇಂತಹ ದೋಷಪೂರಿತ ಸೈಲೆನ್ಸರ್‌ ಬಳಕೆ ಮಾಡಿದ ವಾಹನ ಮಾಲೀಕರು ಮತ್ತು ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. … Read more