ಗಣಪತಿ ಮೆರವಣಿಗೆ ವೇಳೆ ಡಿವೈಎಸ್‌ಪಿ ಜೀಪಿನ ಗಾಜು ಪೀಸ್‌ ಪೀಸ್‌, ಆಗಿದ್ದೇನು?

Shikaripura-Town-Police-Station

ಶಿಕಾರಿಪುರ: ಗಣಪತಿ ಮೆರವಣಿಗೆ ವೇಳೆ ಪಟಾಕಿ ಸಿಡಿದು ಡಿವೈಎಸ್‌ಪಿ ಜೀಪಿನ (Jeep) ಗಾಜು ಒಡೆದಿದೆ. ಈ ಸಂಬಂಧ ಆಯೋಜಕರ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರದ ಮಾಸೂರು ಸರ್ಕಲ್‌ ಬಳಿ ಗಣಪತಿ ಮೆರವಣಿಗೆ ವೇಳೆ ಘಟನೆಯಾಗಿದೆ. ಡಿವೈಎಸ್‌ಪಿ ಅವರು ಇಲ್ಲಿನ ಮಸೀದಿ ಬಳಿ ಬಂದೋಬಸ್ತ್‌ಗೆ ತೆರಳಿದ್ದರು. ಜೀಪ್‌ ಚಾಲಕ ಹರೀಶ್‌, ಮಾಸೂರು ಸರ್ಕಲ್‌ನಲ್ಲಿ ಜೀಪ್‌ ನಿಲ್ಲಿಸಿದ್ದರು. ಗಣಪತಿ ಮೆರವಣಿಗೆ ವೇಳೆ ಯುವಕರ ಗುಂಪು ರಸ್ತೆ ಮಧ್ಯೆ ಅಂಟಿಸಿದ ಪಟಾಕಿ ಸಿಡಿದು ಜೀಪಿನ ಗ್ಲಾಸ್‌ಗೆ ತಗುಲಿ ಒಡೆದಿದೆ … Read more

ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು, ಹೇಗಾಯ್ತು ಘಟನೆ?

couple-succumbed-in-a-mishap-at-Shikaripura

ಶಿಕಾರಿಪುರ: ಬೈಕ್‌ ಮತ್ತು ಕಾರು ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿ (Couple) ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಮಟ್ಟಿಕೋಟೆಯ ರೇಖಾ (20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರನ್ನು ಕರೆ ತರುತ್ತಿದ್ದ ಕಾರು ಡಿಕ್ಕಿ ಹೊಡೆದಾಗ ಬೈಕ್ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.  ಕಳೆದ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು. ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು, ಡಿಸೆಂಬರ್‌ನಲ್ಲಿ ಮದುವೆಗೆ … Read more

ನಡು ರಸ್ತೆಯಲ್ಲಿ ಹೆಣ ಸುಡುವ ಚಿತೆ ನಿರ್ಮಿಸಿ ಗ್ರಾಮಸ್ಥರ ಆಕ್ರೋಶ, ಕಾರಣವೇನು?

villager-potest-for-grave-at-huliginatte-in-shikaripura.

ಶಿಕಾರಿಪುರ: ಸ್ಮಶಾನ (grave) ಜಾಗದಲ್ಲಿ ಶವಸಂಸ್ಕಾರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಜಾಗದ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದ ಶಿಕಾರಿಪುರ ತಾಲೂಕಿನ ಹುಲುಗಿನಕಟ್ಟೆ ಗ್ರಾಮಸ್ಥರು ರಸ್ತೆಯಲ್ಲೇ ಚಿತೆ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯಿಂದ ಅಡ್ಡಿ ಹುಲುಗಿನಕಟ್ಟೆ ಗ್ರಾಮದ ಗಂಗೀಬಾಯಿ ಮೃತಪಟ್ಟಿದ್ದು, ಸ್ಮಶಾನ ಎಂದು ಗುರುತಿಸಿದ ಜಾಗದಲ್ಲಿ ಶವ ಸುಡುವುದಕ್ಕೆ ಗ್ರಾಮಸ್ಥರು ಹೋಗಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಶವ, … Read more

ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ, ಸಾವು, ಹೇಗಾಯ್ತು ಘಟನೆ?

SHIKARIPURA-NEWS-UPDATE.

ಶಿಕಾರಿಪುರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ (Bus) ಹೊಡೆದು ಮೃತಪಟ್ಟಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಚಾನಲ್ ಸಮೀಪ ಘಟನೆ ಸಂಭವಿಸಿದೆ. ವಿನಾಯಕ ನಗರದ ಕಟ್ಟಡ ಕಾರ್ಮಿಕ ಶಿವಾಜಿರಾವ್ (49) ಮೃತರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾಜಿರಾವ್‌ ಅವರನ್ನು ವಿದ್ಯಾರ್ಥಿಗಳಾದ ನವೀನ್‌ ಮತು ಕೌಶಿಕ್‌ ತಮ್ಮ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟೊತ್ತಿಗಾಗಲೇ ಶಿವಾಜಿರಾವ್‌ ಕೊನೆಯುಸಿರೆಳೆದಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಅಪಘಾತ ಸಂಬಂಧ … Read more

ಅಂಬಾರಗೊಪ್ಪ ಬಳಿ ಗೂಡ್ಸ್‌ ವಾಹನ ಡಿಕ್ಕಿ, ಸೈಕಲ್‌ ಸವಾರ ಸಾವು, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿಕಾರಿಪುರ: ಸೈಕಲ್‌ನಲ್ಲಿ (cycle) ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಗೂಡ್ಸ್‌ ವಾಹನ ಡಿಕ್ಕಿಯಾಗಿ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ಮುಖ್ಯರಸ್ತೆಯ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಅಂಬಾರಗೊಪ್ಪದ ರುದ್ರ ನಾಯ್ಕ್‌ (66) ಮೃತರು. ಸೈಕಲ್‌ನಲ್ಲಿ ರುದ್ರ ನಾಯ್ಕ್‌ ಅವರು ರಸ್ತೆ ದಾಟುತ್ತಿದ್ದರು. ಆಗ ಶಿಕಾರಿಪುರ ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ರುದ್ರ ನಾಯ್ಕ್‌ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು … Read more

ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿ ಬದಲು ಮತ್ತೊಬ್ಬ ಯುವಕ ಹಾಜರು, ಕೇಸ್‌ ದಾಖಲು, ಸಿಕ್ಕಿಬಿದ್ದಿದ್ದು ಹೇಗೆ?

Shikaripura-Town-Police-Station

ಶಿಕಾರಿಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ 3ರಲ್ಲಿ (Exam) ಅಭ್ಯರ್ಥಿಯ ಬದಲು ಮತ್ತೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. (ಅಪ್ರಾಪ್ತರ ಪ್ರಕರಣವಾದ್ದರಿಂದ ಹೆಸರು, ವಿಳಾಸ ಬಹಿರಂಗಪಡಿಸುವಂತಿಲ್ಲ). ಶಿಕಾರಿಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ವಿಜ್ಞಾನ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿಯ ಬದಲು ಮತ್ತೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ಪರಿಶೀಲನೆ ವೇಳೆ ಹಾಲ್‌ ಟಿಕೆಟ್‌ನಲ್ಲಿ ವಿದ್ಯಾರ್ಥಿಯ ಫೋಟೊದ ಮೇಲೆ ಇಂಕ್‌ ಹಾಕಲಾಗಿತ್ತು … Read more

ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ

Anjanapura-Dam-full-in-2025.

ಶಿಕಾರಿಪುರ : ನಿರಂತರ ಮಳೆಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಭರ್ತಿಯಾಗಿ ಕೋಡಿ ಬಿದ್ದಿದೆ. ವಾಡಿಕೆಗು ಮೊದಲೇ ಜಲಾಶಯ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. 23 ಅಡಿ ನೀರು ತುಂಬಿ ಜಲಾಶಯ ಕೋಡಿ ಬಿದ್ದಿದೆ. ವಾಡಿಕೆಗು ಮೊದಲೆ ಭರ್ತಿ ಅಂಜನಾಪುರ ಜಲಾಶಯ ಈ ಬಾರಿ ವಾಡಿಕೆಗಿಂತಲೂ ಮೊದಲೆ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಭರ್ತಿಯಾಗುತಿತ್ತು. … Read more

ಲೋಕಾಯುಕ್ತ ದಾಳಿ, ₹30 ಸಾವಿರ ಲಂಚದೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸೆಕ್ಷನ್‌ ಆಫೀಸರ್‌

Lokayuktha-Raid-General-Image

ಶಿಕಾರಿಪುರ: ಗುತ್ತಿಗೆದಾರನಿಗೆ ಬಿಲ್‌ ಪಾವತಿಸಲು ಬಿಲ್‌ ಮೊತ್ತದ ಶೇ.3ರಷ್ಟು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಸೆಕ್ಷನ್‌ ಆಫೀಸರ್‌ ಪರಶುರಾಮ್‌.ಹೆಚ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Raid) ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಲಿಂಗರಾಜ್‌ ಶಿವಪ್ಪ ಉಳ್ಳಾಗಡ್ಡಿ ಎಂಬುವವರು ಸೊರಬ ತಾಲೂಕಿನ ವಿವಿಧ ರಸ್ತೆ, ಶಾಲೆ ಕಾಮಗಾರಿ ನಡೆಸಿದ್ದರು. ಇದರ ಬಿಲ್‌ ಮೊತ್ತ ₹77.59 ಲಕ್ಷ ಪಾವತಿಗೆ ಬಾಕಿ ಇತ್ತು. ಬಿಲ್‌ ಪಾವತಿಗೆ ಇಂಜಿನಿಯರಿಂಗ್‌ ವಿಭಾಗದ ಸೆಕ್ಷನ್‌ ಆಫೀಸರ್‌ ಪರಶುರಾಮ್‌.ಹೆಚ್‌ … Read more

ಮಹಿಳೆಗೆ 3 ವರ್ಷ, ಯುವಕನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಏನಿದು ಕೇಸ್‌?

Imprisonment-for-Shikaripura-lady-and-a-youth

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಸಬೀತಾದ ಹಿನ್ನೆಲೆ ಓರ್ವ ಮಹಿಳೆ ಸೇರಿ ಇಬ್ಬರಿಗೆ ಜೈಲು (Imprisonment) ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಶಿಕಾರಿಪುರದ ಯಾಸೀರ್‌ ಪಾಷಾ (27) ಎಂಬಾತನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗಿದೆ. ಶಹಜಾನ್‌ ಅಲಿಯಾಸ್‌ ಸಾನಿಯಾ ಬೇಗಂಗೆ (52) ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹25 ಸಾವಿರ ದಂಡ ವಿಧಿಸಲಾಗಿದೆ ಎಂದು ಪೊಲೀಸ್‌ ಇಲಾಖೆ … Read more

ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ

Shikaripura-Town-Police-Station

ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆ ಚಿಮುಟ ಬಳಸಿ ಗಂಡನೇ (Husband) ಹೆಂಡತಿಯ ಹತ್ಯೆ ಮಾಡಿದ್ದಾನೆ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿದೆ. ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಹತ್ಯೆ ಮಾಡಿದ್ದಾನೆ. ಚಿಮುಟದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಿಕಾರಿಪುರ ಪೊಲೀಸ್‌ … Read more