ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿ ಬದಲು ಮತ್ತೊಬ್ಬ ಯುವಕ ಹಾಜರು, ಕೇಸ್‌ ದಾಖಲು, ಸಿಕ್ಕಿಬಿದ್ದಿದ್ದು ಹೇಗೆ?

Shikaripura-Town-Police-Station

ಶಿಕಾರಿಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ 3ರಲ್ಲಿ (Exam) ಅಭ್ಯರ್ಥಿಯ ಬದಲು ಮತ್ತೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. (ಅಪ್ರಾಪ್ತರ ಪ್ರಕರಣವಾದ್ದರಿಂದ ಹೆಸರು, ವಿಳಾಸ ಬಹಿರಂಗಪಡಿಸುವಂತಿಲ್ಲ). ಶಿಕಾರಿಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ವಿಜ್ಞಾನ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿಯ ಬದಲು ಮತ್ತೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ಪರಿಶೀಲನೆ ವೇಳೆ ಹಾಲ್‌ ಟಿಕೆಟ್‌ನಲ್ಲಿ ವಿದ್ಯಾರ್ಥಿಯ ಫೋಟೊದ ಮೇಲೆ ಇಂಕ್‌ ಹಾಕಲಾಗಿತ್ತು … Read more

ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ

Anjanapura-Dam-full-in-2025.

ಶಿಕಾರಿಪುರ : ನಿರಂತರ ಮಳೆಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಭರ್ತಿಯಾಗಿ ಕೋಡಿ ಬಿದ್ದಿದೆ. ವಾಡಿಕೆಗು ಮೊದಲೇ ಜಲಾಶಯ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. 23 ಅಡಿ ನೀರು ತುಂಬಿ ಜಲಾಶಯ ಕೋಡಿ ಬಿದ್ದಿದೆ. ವಾಡಿಕೆಗು ಮೊದಲೆ ಭರ್ತಿ ಅಂಜನಾಪುರ ಜಲಾಶಯ ಈ ಬಾರಿ ವಾಡಿಕೆಗಿಂತಲೂ ಮೊದಲೆ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಭರ್ತಿಯಾಗುತಿತ್ತು. … Read more

ಲೋಕಾಯುಕ್ತ ದಾಳಿ, ₹30 ಸಾವಿರ ಲಂಚದೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸೆಕ್ಷನ್‌ ಆಫೀಸರ್‌

Lokayuktha-Raid-General-Image

ಶಿಕಾರಿಪುರ: ಗುತ್ತಿಗೆದಾರನಿಗೆ ಬಿಲ್‌ ಪಾವತಿಸಲು ಬಿಲ್‌ ಮೊತ್ತದ ಶೇ.3ರಷ್ಟು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಸೆಕ್ಷನ್‌ ಆಫೀಸರ್‌ ಪರಶುರಾಮ್‌.ಹೆಚ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Raid) ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಲಿಂಗರಾಜ್‌ ಶಿವಪ್ಪ ಉಳ್ಳಾಗಡ್ಡಿ ಎಂಬುವವರು ಸೊರಬ ತಾಲೂಕಿನ ವಿವಿಧ ರಸ್ತೆ, ಶಾಲೆ ಕಾಮಗಾರಿ ನಡೆಸಿದ್ದರು. ಇದರ ಬಿಲ್‌ ಮೊತ್ತ ₹77.59 ಲಕ್ಷ ಪಾವತಿಗೆ ಬಾಕಿ ಇತ್ತು. ಬಿಲ್‌ ಪಾವತಿಗೆ ಇಂಜಿನಿಯರಿಂಗ್‌ ವಿಭಾಗದ ಸೆಕ್ಷನ್‌ ಆಫೀಸರ್‌ ಪರಶುರಾಮ್‌.ಹೆಚ್‌ … Read more

ಮಹಿಳೆಗೆ 3 ವರ್ಷ, ಯುವಕನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಏನಿದು ಕೇಸ್‌?

Imprisonment-for-Shikaripura-lady-and-a-youth

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಸಬೀತಾದ ಹಿನ್ನೆಲೆ ಓರ್ವ ಮಹಿಳೆ ಸೇರಿ ಇಬ್ಬರಿಗೆ ಜೈಲು (Imprisonment) ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಶಿಕಾರಿಪುರದ ಯಾಸೀರ್‌ ಪಾಷಾ (27) ಎಂಬಾತನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗಿದೆ. ಶಹಜಾನ್‌ ಅಲಿಯಾಸ್‌ ಸಾನಿಯಾ ಬೇಗಂಗೆ (52) ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹25 ಸಾವಿರ ದಂಡ ವಿಧಿಸಲಾಗಿದೆ ಎಂದು ಪೊಲೀಸ್‌ ಇಲಾಖೆ … Read more

ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ

Shikaripura-Town-Police-Station

ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆ ಚಿಮುಟ ಬಳಸಿ ಗಂಡನೇ (Husband) ಹೆಂಡತಿಯ ಹತ್ಯೆ ಮಾಡಿದ್ದಾನೆ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿದೆ. ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಹತ್ಯೆ ಮಾಡಿದ್ದಾನೆ. ಚಿಮುಟದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಿಕಾರಿಪುರ ಪೊಲೀಸ್‌ … Read more

14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ, ಆರೋಪಿ ಅರೆಸ್ಟ್‌

Shikaripura-police-nab-thief

ಶಿಕಾರಿಪುರ: ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಯನ್ನು (Thief) ಬಂಧಿಸಿರುವ ಶಿಕಾರಿಪುರ ಠಾಣೆ ಪೊಲೀಸರು ಆತನಿಂದ 14.70 ಲಕ್ಷ ರೂ. ಮೌಲ್ಯದ 184 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  ಶಿಕಾರಿಪುರದ ರಂಗನಾಥಪುರ ಕಾಲೊನಿ ನಿವಾಸಿ ಬಿ.ಜೆ.ಅಭಿಷೇಕ ಗೌಡ (25) ಬಂಧಿತ. ಶಿಕಾರಿಪುರದ ಮಹಿಳೆಯೊಬ್ಬರು ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಜ. 24ರಂದು ಕಳುವಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿತ್ತು. ಕಳವು ಮಾಲು ಪತ್ತೆಗೆ ಶಿಕಾರಿಪುರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ … Read more

ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್‌, ಶಿಕಾರಿಪುರದಲ್ಲಿ ಮಹಜರ್‌

madenuru-manu-case-police-visit-shikaripura

ಶಿಕಾರಿಪುರ: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಟ (Actor) ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಗೆ ಬೆಂಗಳೂರು ಪೊಲೀಸರು ಇವತ್ತು ಶಿಕಾರಿಪುರಕ್ಕೆ ಆಗಮಿಸಿದ್ದರು. ಸಂತ್ರಸ್ತೆಯನ್ನು ಕರೆತಂದಿದ್ದ ಪೊಲೀಸರು ಇಲ್ಲಿನ ಲಾಡ್ಜ್‌ ಒಂದರಲ್ಲಿ ಮಹಜರ್‌ ಪ್ರಕ್ರಿಯೆ ನಡೆಸಿದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಸಂತ್ರಸ್ತೆಯನ್ನು ಶಿಕಾರಿಪುರ ಪಟ್ಟಣದ ಲಾಡ್ಜ್‌ಗೆ ಕರೆತಂದಿದ್ದರು. ಅವರು ತಂಗಿದ್ದ ಕೊಠಡಿಗಳು, ಘಟನೆ ನಡೆದಿದೆ ಎಂದು ಆರೋಪಿಸಲಾಗಿರುವ ಕೊಠಡಿಗಳಲ್ಲಿ ಮಹಜರ್‌ ನಡೆಸಿದರು. 2022ರಲ್ಲಿ ಶಿಕಾರಿಪುರದಲ್ಲಿ ಕಾರ್ಯಕ್ರಮ ಒಂದಕ್ಕೆ ಮಡೆನೂರು ಮನು, ಸಂತ್ರಸ್ತೆ ಸೇರಿ ಹಲವರು … Read more

ಮೂರು ಲಾರಿಗಳಲ್ಲಿ ಡಿಸೇಲ್‌ ಕದ್ದ ಶಿವಮೊಗ್ಗದ ಇಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್‌

Shiralakoppa police nab diesel theives

ಶಿಕಾರಿಪುರ: ಇಲ್ಲಿನ ವಿಜಯಲಕ್ಷ್ಮಿ ರೈಸ್ ಮಿಲ್‌ ಆವರಣದಲ್ಲಿ ನಿಲ್ಲಿಸಿದ್ದ 3 ಲಾರಿಗಳ ಡೀಸೆಲ್ (Diesel) ಟ್ಯಾಂಕ್‌ನಲ್ಲಿದ್ದ ಅಂದಾಜು 45,000 ರೂ. ಮೌಲ್ಯದ 450 ಲೀಟರ್ ಡೀಸೆಲ್ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ಟಿಪ್ಪುನಗರದ ಸೋನು (26), ಬರ್ಮಪ್ಪ ನಗರದ ಸೈಯದ್ ಹುಸೇನ್ (25) ಬಂಧಿತರು. ಈ ಬಗ್ಗೆ ಮಾಲೀಕ ಸೊರಬ ತಾಲ್ಲೂಕು ಕೋಲಗುಣಸಿ ನಿವಾಸಿ ವಿಕ್ರಂ ಭಟ್ ಅವರು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿತರಿಂದ ಅಂದಾಜು 9 ಲಕ್ಷ ರೂ. ಮೌಲ್ಯದ … Read more

ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್, ಏನಿದು ಕೇಸ್?

Lokayuktha-Raid-General-Image

ಶಿಕಾರಿಪುರ: ವೈದ್ಯರೊಬ್ಬರು ಶವ ಪರೀಕ್ಷೆ ವರದಿ ನೀಡುವುದಕ್ಕಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೈದ್ಯರನ್ನು (Doctor) ಬಂಧಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯ ಗೋಪಾಲ್ ಜಿ.ಹರಿಗಿ ಬಂಧಿತ ವೈದ್ಯ. ಸತೀಶ್ ಮಂಚಿ ಎಂಬುವರ ಶವ ಪರೀಕ್ಷೆ ವರದಿ ನೀಡುವುದಕ್ಕೆ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಎನ್.ವೈ.ಸುನೀಲ್ ಅರ್ಜಿ ಸಲ್ಲಿಸಿದ್ದರು. ವರದಿ ನೀಡುವುದಕ್ಕೆ ವೈದ್ಯರು 20 ರೂ. ಲಂಚದ … Read more

ದುಡ್ಡಿಗಾಗಿ ಒಂದೂವರೆ ವರ್ಷದ ಹೆಣ್ಮಗು ಮಾರಿದ ಪೋಷಕರು, ಖರೀದಿಸಿದವರಿಗು ಸಂಕಷ್ಟ ಶುರು, ಏನಿದು ಕೇಸ್‌?

200123 Police Jeep With Light jpg

ಶಿಕಾರಿಪುರ: ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗುವನ್ನು ಹಣಕ್ಕಾಗಿ ಪೋಷಕರೆ ಮಾರಾಟ (Child Trafficking) ಮಾಡಿದ್ದಾರೆ. ಶಿಕಾರಿಪುರದ ದಂಪತಿ ಹಣ ನೀಡಿ ಮಗು ಖರೀದಿಸಿದ್ದಾರೆ. ಈಗ ಮಗುವಿನ ಪೋಷಕರು ಮತ್ತು ಖರೀದಿಸಿದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದ್ದಾರೆ. ಏನಿದು ಪ್ರಕರಣ? ಶಿವಮೊಗ್ಗದ ದಂಪತಿಗೆ 2023ರ ಆಗಸ್ಟ್‌ 15ರಂದು ಹೆಣ್ಣು ಮಗು ಜನಿಸಿತ್ತು. 2025ರ ಜನವರಿ ತಿಂಗಳಲ್ಲಿ ಈ … Read more