ಪೂಜೆ ಮಾಡಿ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಮಾಯ

crime name image

SHIMOGA NEWS, 14 OCTOBER 2024 : ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ (Tractor) ಕಳುವಾಗಿದೆ. ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ. ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಅವರು ಟ್ರಾಕ್ಟರ್‌ಗೆ ಪೂಜೆ ಸಲ್ಲಿಸಿ ದೇಗುಲದ ಮುಂದೆಯೇ ಟ್ರಾಕ್ಟರ್‌ ಅನ್ನು ರಾತ್ರಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್‌ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಿದ ಪಾಲಾಕ್ಷಪ್ಪ ಅವರು … Read more

ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ, ಬೆಂಗಳೂರಿನ ಯುವಕ ಸಾವು

Car-incident-near-kumsi-in-Shimoga

SHIMOGA NEWS, 13 OCTOBER 2024 : ಚಾಲಕನ ನಿಯಂತ್ರಣ ತಪ್ಪಿದ ಕಾರು (Car) ಗದ್ದೆಗೆ ಪಲ್ಟಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ನೆಲಮಂಗಲದ ಚಂದನ್‌ ಮೃತ ಯುವಕ. ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬುವವರು ಗಾಯಗೊಂಡಿದ್ದಾರೆ. ಐವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದರು ರಜೆ ಇದ್ದಿದ್ದರಿಂದ ಐವರು ಯುವಕರು ಬೆಂಗಳೂರಿನಿಂದ ಸಿಗಂದೂರಿಗೆ … Read more

ಶಿವಮೊಗ್ಗದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

muduvala-lake-rescue-operation

SHIMOGA NEWS, 12 OCTOBER 2024 : ಹಳ್ಳ ದಾಟುವಾಗ ಬೈಕ್‌ ಸಹಿತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೊಚ್ಚಿ ಹೋದ ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ (Found). ಯಡವಾಲದ ಕೊಂಡಜ್ಜಿ ಹಳ್ಳದ ಸೇತುವೆಯನ್ನು ದಾಟುವಾಗ ಚಿನ್ನಿಕಟ್ಟೆಯ ಇಕ್ಬಾಲ್‌ (40) ಎಂಬುವವರು ತಮ್ಮ ಬೈಕ್‌ ಸಹಿತ ಕೊಚ್ಚಿ ಹೋಗಿದ್ದರು. ಭಾರಿ ಮಳೆಯಿಂದಾಗಿ ಸೇತುವೆ ಮೇಲ್ಭಾಗದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಈ ಸಂದರ್ಭ ಆಯಾತಪ್ಪಿ ಇಕ್ಬಾಲ್‌ ಕೊಚ್ಚಿ ಹೋಗಿದ್ದರು. ಅವರಿಗಾಗಿ ಶೋಧ ಕಾರ್ಯ … Read more

ಕೊಚ್ಚಿ ಹೋದ ವ್ಯಕ್ತಿಯ ಶೋಧ ಕಾರ್ಯ ಸ್ಥಗಿತ, ಸ್ಥಳಕ್ಕೆ ಸಂಸದ ಭೇಟಿ

MP-BY-Raghavendra-visit-kondajji-halla

SHIMOGA NEWS, 9 OCTOBER 2024 : ಕೊಂಡಜ್ಜಿ ಹಳ್ಳ ದಾಟುವಾಗ ಬೈಕ್‌ ಸಹಿತ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇನ್ನೊಂದೆಡೆ ವಿಷಯ ತಿಳಿದು ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕೆ ಭೇಟಿ (Visit) ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಧ್ಯಾಹ್ನದಿಂದ ನಿರಂತರ ಕಾರ್ಯಾಚರಣೆ ನ್ಯಾಮತಿಯ ಚಿನ್ನಿಕಟ್ಟೆಯ ಇಕ್ಬಾಲ್‌ ಕೊಂಡಜ್ಜಿ ಹಳ್ಳ ದಾಟುವಾಗ ಬೈಕ್‌ ಸಹಿತ ಕೊಚ್ಚಿ ಹೋಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ರಬ್ಬರ್‌ ಬೋಟ್‌ ಬಳಸಿ ಹಳ್ಳದ ಎರಡು ಬದಿಯಲ್ಲಿ … Read more

ಶಿವಮೊಗ್ಗ | ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿ ಹೋದ ವ್ಯಕ್ತಿ

muduvala-lake-rescue-operation

SHIMOGA NEWS, 9 OCTOBER 2024 : ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಬೈಕ್‌ ಸಹಿತ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಬೈಕ್‌ ಸವಾರನಿಗಾಗಿ ಶೋಧ ಕಾರ್ಯ (rescue) ನಡೆಯುತ್ತಿದೆ. ಶಿವಮೊಗ್ಗ ತಾಲೂಕು ಮುದುವಾಲದ ಕೊಂಡಜ್ಜಿ ಹಳ್ಳದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಮಳೆಗೆ ಹಳ್ಳ ತುಂಬಿ ಹರಿಯುತ್ತಿತ್ತು. ಈ ಸಂದರ್ಭ ಚಿನ್ನಿಕಟ್ಟೆಯ ಎಕ್ಬಾಲ್‌ ಎಂಬುವವರು ಬೈಕ್‌ನಲ್ಲಿ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಎಕ್ಬಾಲ್‌ ಅವರು ಶಿವಮೊಗ್ಗದಿಂದ ಮುದುವಾಲ ಮಾರ್ಗವಾಗಿ … Read more

ಶಿವಮೊಗ್ಗ | ಮಳೆಗೆ ಕೊಚ್ಚಿ ಹೋದ ಹಳಿ ಕೆಳಗಿನ ಜೆಲ್ಲಿ, ರೈಲುಗಳ ಸಂಚಾರ ವಿಳಂಬ

Railway-track-near-suduru-in-Shimoga-taluk.

SHIMOGA NEWS, 9 OCTOBER 2024 : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ರೈಲ್ವೆ ಹಳಿ (Track) ಕೆಳಗಿದ್ದ ಜೆಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್‌ ಮೆನ್‌ಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಹಳಿ ರಿಪೇರಿ ಕಾರ್ಯದ ಹಿನ್ನೆಲೆ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಹೊರಟಿದ್ದ ರೈಲುಗಳು ತಡವಾಗಿ ಸಂಚರಿಸುತ್ತಿವೆ. ಕೊಚ್ಚಿ ಹೋದ ಜೆಲ್ಲಿ ಕುಂಸಿ – ಆನಂದಪುರ ರೈಲ್ವೆ ಮಾರ್ಗದಲ್ಲಿ ಸೂಡುರು ಬಳಿ ಜೆಲ್ಲಿ ಕೊಚ್ಚಿ ಹೋಗಿತ್ತು. ಇಳಿಜಾರು ಪ್ರದೇಶವಾಗಿದ್ದರಿಂದ ಮಳೆ ನೀರು ರಭಸವಾಗಿ ಹರಿದಾಗ … Read more

ಆಯನೂರು | ಶಾರ್ಟ್‌ ಸರ್ಕ್ಯೂಟ್‌ಗೆ ಲಕ್ಷ ಲಕ್ಷದ ವಸ್ತುಗಳು ಆಹುತಿ

Hardware-shop-in-ayanuru-main-road

AYANURU NEWS, 9 OCTOBER 2024 : ಶಾರ್ಟ್ ಸರ್ಕ್ಯೂಟ್‌ನಿಂದ ಹಾರ್ಡ್‌ವೇರ್ ಅಂಗಡಿಗೆ (shop) ಬೆಂಕಿ ತಗುಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಆಹುತಿಯಾದ ಘಟನೆ ಆಯನೂರಿನಲ್ಲಿ ನಡೆದಿದೆ.  ಆರ್.ವಿ.ಟ್ರೇಡರ್ಸ್ ಕಬ್ಬಿಣ ಹಾಗೂ ಸಿಮೆಂಟ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಾರ್ಟ್‌ ಸರ್ಕಿಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷದಲ್ಲಿ ವ್ಯಾಪಕವಾಗಿ ಹರಡಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. … Read more

ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

Crime-News-General-Image

SHIMOGA NEWS, 8 OCTOBER 2024 : ತೋಟದಲ್ಲಿ ಕಟ್ಟಿದ್ದ ಆರು ಕತ್ತೆಗಳು (Donkeys) ಕಳ್ಳತನವಾಗಿವೆ. ಮಾಲೀಕರು ಬೆಳಗ್ಗೆ ತೋಟಕ್ಕೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆರು ಕತ್ತೆಗಳು ನಾಪತ್ತೆ ಮಿಳಘಟ್ಟದ ನಾಗರತ್ನ ಎಂಬುವವರು ಕತ್ತೆ ಸಾಕಾಣಿಕೆ ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ಆರು ಕತ್ತೆಗಳನ್ನು ಸಂತೆ ಕಡೂರಿನ ತೋಟವೊಂದರಲ್ಲಿ ಕಟ್ಟುತ್ತಿದ್ದರು. ಸೆ.27ರಂದು ರಾತ್ರಿ ತೋಟದಲ್ಲಿ ಕತ್ತೆಗಳನ್ನು ಕಟ್ಟಿ ಹಾಕಿ ಹೋಗಿದ್ದರು. ಮರುದಿನ ಬೆಳಗ್ಗೆ ತೋಟಕ್ಕೆ ಬಂದಾಗ ಕತ್ತೆಗಳು ನಾಪತ್ತೆಯಾಗಿದ್ದವು.  ಇಬ್ಬರ ಮೇಲೆ ಅನುಮಾನ ಶಿವಮೊಗ್ಗದ ಇಬ್ಬರು … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

SHIMOGA NEWS, 4 OCTOBER 2024 : ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಮತ್ತು ಹೊಸದಾಗಿ ಕಂಬಗಳ ಅಳವಡಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಅ.5ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿ ಕ್ಯಾಂಪ್, ಭೋಜಪ್ಪ ಕ್ಯಾಂಪ್, ದುಮ್ಮಳ್ಳಿ, ಓತಿಘಟ್ಟ, ಮಾಚೇನಹಳ್ಳಿ, ಬಿದರೆ, ನಿದಿಗೆ, ಜಯಂತಿಗ್ರಾಮ, … Read more

ಕೂಡ್ಲಿಯಲ್ಲಿ ಸ್ನಾನಕ್ಕೆ ಇಳಿದ ಹೊಳಲ್ಕೆರೆಯ ಯುವಕ ನಾಪತ್ತೆ

Holalkere-youth-missing-at-kudli-in-Shimoga

HOLEHONNURU NEWS, 3 OCTOBER 2024 : ಕೂಡ್ಲಿಯ ತುಂಗಭದ್ರಾ ಸಂಗಮದಲ್ಲಿ ಸ್ನಾನಕ್ಕೆ  (Missing) ಇಳಿದಿದ್ದ ಯುವಕ ಹರ್ಷಿತ್ (23) ನಾಪತ್ತೆಯಾಗಿದ್ದಾನೆ. ಹೊಳಲ್ಕೆರೆಯಿಂದ ಕುಟುಂಬದವರ ಜೊತೆ ಬುಧವಾರ ಕೂಡ್ಲಿ ತುಂಗಾ-ಭದ್ರಾ ಸಂಗಮದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲು ಹರ್ಷಿತ್‌ ಬಂದಿದ್ದ. ಪೂಜೆ ನೆರವೇರಿಸಿ ಸ್ನಾನಕ್ಕೆಂದು ಸಂಗಮಕ್ಕಿಳಿದಾಗ ನೀರಿನಲ್ಲಿ ಮುಳುಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಸಂಗಮದಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿತು. ಸಂಜೆಯಾದರೂ ಯುವಕ ಪತ್ತೆಯಾಗಲಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more