ಪಿಳ್ಳಂಗೆರೆ ಬಳಿ 52 ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ, ಭಾರೀ ಅನಾಹುತ ಜಸ್ಟ್ ಮಿಸ್

ಶಿವಮೊಗ್ಗ ಲೈವ್.ಕಾಂ | SHIMOGA | 21 ಜನವರಿ 2020 ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ 52 ಪ್ರಯಾಣಿಕರಿದ್ದರು. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಶಿವಮೊಗ್ಗದ ಪಿಳ್ಳಂಗೆರೆ ಬಳಿ ಘಟನೆ ಸಂಭವಿಸಿದೆ. ರಸ್ತೆ ತಿರುವಿನಲ್ಲಿ ಬಸ್ಸು, ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಪ್ರಯಾಣಿಕರ ರಕ್ಷಣೆ ಮಾಡಲಾಯಿತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಹುಲಿ, ಸಿಂಹಧಾಮದಲ್ಲಿ ಸಂಸದ ರಾಘವೇಂದ್ರ ಸಫಾರಿ, ಮೈಸೂರು ಮಾದರಿಯಲ್ಲಿ ಆಗಲಿದೆ ಅಭಿವೃದ್ಧಿ, ಏನೇನು ಪ್ಲಾನ್ ಇದೆ ಗೊತ್ತಾ?

180120 Shimoga MP Safari Tyavarekoppa 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆಗೆ ಸಫಾರಿಗೆ ತೆರಳಿ, ಪ್ರಾಣಿಗಳು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ವಿಸ್ತರಣೆಯ ಹೊಸ ಪ್ಲಾನ್ ಹುಲಿ, ಸಿಂಹಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಮಾಡುವ ಸಲುವಾಗಿ ಹೊಸ ಪ್ಲಾನ್’ಗಳನ್ನು ಸಿದ್ಧಪಡಿಸಲಾಗಿದೆ. ಇದರ ಕುರಿತು ಅಧಿಕಾರಿಗಳ ಜೊತೆಗೆ ಸಂಸದ ರಾಘವೇಂದ್ರ ಚರ್ಚಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸದ ಸಂಸದ ಬಿ.ವೈ.ರಾಘವೇಂದ್ರ, … Read more

ಲಕ್ಕಿನಕೊಪ್ಪ ಬಳಿ ಪಲ್ಟಿ ಹೊಡೆದ ಟ್ರಾಕ್ಟರ್, ರಸ್ತೆ ಪಾಲಾದ ಅಡಕೆ

ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020 ರಸ್ತೆಯಲ್ಲಿರುವ ಸಾಲು ಸಾಲು ಗುಂಡಿಗಳಿಗೆ ಟ್ರಾಕ್ಟರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ತೋಟದಿಂದ ಸಾಗಿಸುತ್ತಿದ್ದ ಅಡಕೆ ರಸ್ತೆ ಪಾಲಾಗಿದೆ. ಲಕ್ಕಿನಕೊಪ್ಪ ಸರ್ಕಲ್ ಬಳಿ ಘಟನೆ ನಡೆದಿದೆ. ರಸ್ತೆ ಗುಂಡಿಗಳಿಂದಾಗಿಯೇ ಟ್ರಾಕ್ಟರ್ ಪಲ್ಟಿ ಹೊಡೆದಿದೆ. ಚಾಲಕ ಮಂಜುನಾಥ್ ಅದೃಷ್ಟವಶಾತ್ ಪರಾಗಿದ್ದಾರೆ. ಶಿವಮೊಗ್ಗ ಎನ್.ಆರ್.ಪುರ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಪ್ರತಿ ದಿನ ಈ ರಸ್ತೆಯಲ್ಲಿ ನೂರಾರು ಬಸ್ಸುಗಳು ಓಡಾಡುತ್ತವೆ. ಉಂಬ್ಳೆಬೈಲು ಗ್ರಾಮದ ಸಮೀಪದಲ್ಲಿ ಭಾರಿ … Read more

ಎರಡು ಜಿಂಕೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್, ನಾಲ್ಕು ಮಂದಿ ಎಸ್ಕೇಪ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಎರಡು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಾಪತ್ತೆ ಆಗಿರುವ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ಉಂಬಳೆಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಕಣಗಲಸರ ಗ್ರಾಮದ ದಿನೇಶ್ ಮತ್ತು ರಮೇಶ್ ಬಂಧಿತರು. ಇವರಿಂದ 2 ಜಿಂಕೆ ಚರ್ಮ, ಮಾಂಸ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಣಗಲಸರದ ದಿವಾಕರ್, ನಾಗರಾಜ್, ಉಂಬಳೆಬೈಲಿನ ಶಿವಾನಂದ್, … Read more

ಸಕ್ರೆಬೈಲಲ್ಲಿ ನಟ ಶಿವರಾಜ್ ಕುಮಾರ್ ಸಿನಿಮಾ ಶೂಟಿಂಗ್, ನಾಲ್ಕು ಗಂಟೆ ಚಿತ್ರೀಕರಣ, ಏನೇನೆಲ್ಲ ಚಿತ್ರೀಕರಣ ಮಾಡಲಾಯ್ತು?

040120 Shivaraj Kumar in Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020 ಸಕ್ರೆಬೈಲು ಆನೆ ಬಿಡಾರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಶೂಟಿಂಗ್ ನಡೆಯಿತು. ಆನೆ ಮೇಲೆ ಕುಳಿತು ಹೋಗುವ ಸೀನ್ ಮತ್ತು ಆನೆಗೆ ಸ್ನಾನ ಮಾಡಿಸುವ ಸೀನ್’ಗಳನ್ನು ಶೂಟಿಂಗ್ ಮಾಡಲಾಯಿತು. ಇದಕ್ಕಾಗಿ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ಏರಿಯಾ ಮತ್ತು ತುಂಗಾ ನದಿ ತೀರದಲ್ಲಿ ಚಿತ್ರೀಕರಣ ಮಾಡಲಾಯಿತು. ಸತತ ನಾಲ್ಕು ಗಂಟೆ ಕಾಲ ಆನೆ ಬಿಡಾರದಲ್ಲಿ ನಟ ಶಿವರಾಜ್ ಕುಮಾರ್ ಅವರು … Read more

ಒಂದು ಸಿಮ್ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಫ್ರೀ.. ಫ್ರೀ.. ಫ್ರೀ.., ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯ ಆಫರ್

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಸಾವಿರ ರೂ. ಬಟ್ಟೆ ಖರೀದಿಸಿದರೆ ಒಂದು ಕೆ.ಜಿ ಈರುಳ್ಳಿ ಫ್ರೀ ಅಂತಾ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಯೊಬ್ಬರು ಆಫರ್ ಕೊಟ್ಟಿದ್ದರು. ಈರುಳ್ಳಿ ಬೆಲೆ ನೂರು ರೂ. ಗಡಿ ದಾಟಿದ್ದಾಗ ಇಂತಹ ಆಫರ್ ನೀಡಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯೊಂದು ಇಂತಹುದೇ ಆಫರ್ ಕೊಡುತ್ತಿದೆ. ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಟೆಲಿಕಾಂ ಸಂಸ್ಥೆಯೊಂದು ಒಂದು ಕೆ.ಜಿ ಈರುಳ್ಳಿಯನ್ನು ಉಚಿತವಾಗಿ ಕೊಡುವ ಆಫರ್ ಕೊಟ್ಟಿದೆ. ಬೆಳಗ್ಗೆ ಗ್ರಾಮಕ್ಕೆ … Read more

ತುಂಗೆಗೆ ನಮಿಸಿದ RSS ಮುಖ್ಯಸ್ಥ, ಸರಸಂಘಚಾಲಕರಾದ ನಂತರ ಮತ್ತೂರಿಗೆ ಮೊದಲ ಭೇಟಿ

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019 RSS ಮುಖ್ಯಸ್ಥರಾದ ಬಳಿಕ ಡಾ.ಮೋಹನ್ ಭಾಗವತ್ ಅವರು ಮೊದಲ ಬಾರಿಗೆ ಶಿವಮೊಗ್ಗದ ಸಂಸ್ಕೃತ ಗ್ರಾಮ ಮತ್ತೂರಿಗೆ ಭೇಟಿ ನೀಡಿದ್ದರು. ಅಲ್ಲಿ ನಡೆ ತುಂಗಾ ನಮಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತುಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸುವ ತುಂಗಾ ಆರತಿ ಕಾರ್ಯಕ್ರಮದಲ್ಲಿ ಡಾ.ಮೋಹನ್ ಭಾಗವತ್ ಅವರು ಪಾಲ್ಗೊಂಡಿದ್ದರು. ತುಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಮತ್ತೂರಿನ ಪ್ರಮುಖರು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ … Read more

ನಿಷೇಧವಿದ್ದರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು, ಸಭೆಗೆ ಬಂದರು ಮೊಬೈಲ್’ನಲ್ಲಿ ಮುಳುಗಿದ್ದರು, ಗೈರಾದವರಿಗೆ ನೊಟೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಇವತ್ತು ತ್ರೈಮಾಸಿಕ ಸಭೆ ಆಯೋಜಿಸಲಾಗಿತ್ತು. ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆ ಗೈರಾಗಿದ್ದು ಶಾಸಕರ ಸಿಟ್ಟಿಗೆ ಕಾರಣವಾಯಿತು. ಮತ್ತೊಂದೆಡೆ ಪ್ಲಾಸ್ಟಿಕ್ ನಿಷೇಧವಿದ್ದರು ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್’ಗಳು ರಾರಾಜಿಸಿದವು. ಆಫೀಸರ್’ಗಳೇ ಇಲ್ಲದ್ದಕ್ಕೆ ಗರಂ ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದರು. ಇದು ಶಾಸಕ ಅಶೋಕ್ ನಾಯ್ಕ್ ಅವರನ್ನು ಕೆರಳಿಸಿತು. ತಹಶೀಲ್ದಾರ್ ಗಿರೀಶ್, ಎಪಿಎಂಸಿ, ಕಾರ್ಮಿಕ ಇಲಾಖೆ, … Read more

ಹಾರನಹಳ್ಳಿ ಮಾರಿ ಗದ್ದುಗೆ ವಿವಾದ, ಇನ್ನೆರಡು ವಾರದಲ್ಲಿ ಕ್ಲಿಯರ್, ಶಿವಮೊಗ್ಗದಲ್ಲಿ ಅಲರ್ಟ್, ಶಾಂತಿ ಸಭೆಯಲ್ಲಿ ಏನೆಲ್ಲ ಆಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019 ತಾಲೂಕಿನ ಹಾರನಹಳ್ಳಿಯಲ್ಲಿಯ ಮಾರಿ ಗದ್ದುಗೆ ಸಂಬಂಧ ಕಳೆದ ಏಳೆಂಟು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣ ಇನ್ನೆರಡು ವಾರಗಳಲ್ಲಿ ಇತ್ಯರ್ಥವಾಗಲಿದೆ. ಐದು ವರ್ಷಕ್ಕೊಮ್ಮೆ ವಿವಾದ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದ ಸಂದರ್ಭದಲ್ಲಿಯೇ ವಿವಾದಿತ ಜಾಗಕ್ಕಾಗಿ ಹಾರನಹಳ್ಳಿ ಅಕ್ಷರಶಃ ಕುದಿಯುತಿರುತ್ತದೆ. ವ್ಯಕ್ತಿಯೊಬ್ಬರ ಆಸ್ತಿ ವಿವಾದವೀಗ ಸಮುದಾಯದ ಸಮಸ್ಯೆಯಂತೆ ಬಿಂಬಿಸಲಾಗಿದೆ. ಅದರ ಪರಿಣಾಮವಾಗಿಯೇ ಭಾನುವಾರ ಮಾರಿ ಹಬ್ಬಕ್ಕಾಗಿ ಪೆಂಡಾಲು ಹಾಕುವ ಸಂಬಂಧ ಸೃಷ್ಟಿಯಾದ ಸಣ್ಣ ಗಲಾಟೆ ವಿಕೋಪಕ್ಕೆ … Read more

SHIMOGA| ‘ಆಯನೂರು, ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಆಗಲು ಅರ್ಹ, ವಿಧಾನಸಭೆಯಲ್ಲೂ ಚರ್ಚೆ’

Ayanuru General Image Board 1

ಶಿವಮೊಗ್ಗ ಲೈವ್.ಕಾಂ | SHIMOGA | 20 ನವೆಂಬರ್ 2019 ಆಯನೂರು ಮತ್ತು ಹೊಳೆಹೊನ್ನೂರು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಹೇಳಿದ್ದಾರೆ. ಕೋಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ ನಾಯ್ಕ, ಬಹುವರ್ಷದ ಹಿಂದೆಯೆ ಆಯನೂರು ಪಟ್ಟಣ ಪಂಚಾಯಿತಿ ಆಗಬೇಕಿತ್ತು. ಈಗ ಆಯನುರು ಮತ್ತು … Read more