SHIVAMOGGA LIVE NEWS | 19 AUGUST 2023
SHIMOGA : ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯೊಂದರಲ್ಲಿ (House) ಅಗ್ನಿ ಅವಘಡ ಸಂಭವಿಸಿದೆ. ವಸ್ತುಗಳು ಸುಟ್ಟು ಕರಕಲಾಗಿವೆ. ವಿಚಾರ ತಿಳಿದು ಜಿಲ್ಲಾ ಕಾಂಗ್ರೆಸ್ (Congress Party) ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದ ನಿಯೋಗ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಲಷ್ಕರ್ ಮೊಹಲ್ಲಾದ ಏಲಕಪ್ಪನ ಕೇರಿಯ 3ನೇ ತಿರುವಿನ ಜಾವೀದ್ ಎಂಬುವವರ ಶುಕ್ರವಾರ ಸಂಜೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿತ್ತು. ಮನೆಯ ಮೇಲ್ಛಾವಣಿ, ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಅದೃಷ್ಟವಶಾತ್ ಪ್ರಾಣ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ – ಕಾಂಗ್ರೆಸ್ ಪಕ್ಷದಿಂದ 3 ಗ್ರಾಮ ಪಂಚಾಯಿತಿ ಸದಸ್ಯರು, ಇಬ್ಬರು ಕಾರ್ಯಕರ್ತರು, 6 ವರ್ಷ ಉಚ್ಛಾಟನೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಹಾನಗರ ಪಾಲಿಕೆ ಅಥವಾ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
