SHIVAMOGGA LIVE NEWS | 10 APRIL 2023
SHIMOGA : ಜಿಲ್ಲೆಯಲ್ಲಿ ಪುನಃ ಕೊರೋನ (Covid) ಅಬ್ಬರ ಹೆಚ್ಚಾಗಿದೆ. ಇನ್ನೂರಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕಿತರಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಭಾನುವಾರ 29 ಮಂದಿಗೆ ಕೋವಿಡ್ (Covid) ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 5 ಸೋಂಕಿತರು ದಾಖಲಾಗಿದ್ದಾರೆ. ಡಿಸಿಹೆಚ್ಸಿಯಲ್ಲಿ 1, ಹೋಮ್ ಐಸೊಲೇಷನ್ನಲ್ಲಿ 202 ಮಂದಿ ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಒಂದೂವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದ ಬಾಣಂತಿ, ಕಾರಣವೇನು?