ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2021
ಕರೋನ ಜಾಗೃತಿಗೆ ಶಿವಮೊಗ್ಗದ ಕುಂಚ ಕಲಾವಿದರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ರಸ್ತೆ ಮೇಲೆ ಕರೋನ ಪೇಂಟಿಂಗ್ ಮಾಡಿ ಜಾಗೃತಿ ಸಂದೇಶ ಸಾರಿದ್ದಾರೆ.
ಶಿವಮೊಗ್ಗ ಸರ್ಕಾರಿ ನೌಕರರ ಭವನದ ಮುಂದೆ ಕರೋನ ಜಾಗೃತಿ, ಮಾಸ್ಕ್ ಧರಿಸುವಂತೆ ಮನವಿ ಮಾಡುವ ಪೇಂಟಿಂಗ್ ಮಾಡಲಾಗಿದೆ.
ಕರೋನ ವೈರಸ್ ಬಗ್ಗೆ ಜಾಗೃತಿ, ಮಾಸ್ಕ್ ಧರಿಸುವ ಮಹತ್ವದ ಕುರಿತು ಪೇಂಟಿಂಗ್ ಮಾಡಲಾಗಿದೆ. ಕುಂಚ ಕಲಾವಿದರ ಸಂಘದ ಜಿಲ್ಲಾ ಘಟಕದ ವತಿಯಿಂದ ಪೇಂಟಿಂಗ್ ಮಾಡಲಾಗಿದೆ.
ಕಳೆದ ವರ್ಷವು ಕುಂಚ ಕಲಾವಿದರ ಸಂಘದ ವತಿಯಿಂದ ಇದೆ ರೀತಿ ಕರೋನ ಜಾಗೃತಿ ಮೂಡಿಸಲಾಗಿತ್ತು. ನಗರದ ವಿವಿಧೆಡೆ ಜಾಗೃತಿ ಸಂದೇಶಗಳುಳ್ಳ ಪೇಂಟಿಂಗ್ ಮಾಡಲಾಗಿತ್ತು.