ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 DECEMBER 2022
ಶಿವಮೊಗ : ಮನೆಯ ಮೇಲ್ಛಾವಣಿಯ ಹಂಚು ತೆಗೆದು 1200 ಉಂಗುರಗಳನ್ನು (rings) ಕಳ್ಳತನ ಮಾಡಲಾಗಿದೆ. ಮನೆ ಮಾಲೀಕ ಊರಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ.
ಉಪ್ಪಾರ ಕೇರಿ 2ನೇ ಅಡ್ಡರಸ್ತೆಯಲ್ಲಿರುವ ರಾಜು ಎಂಬುವವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ರಾಜು ಅವರು ಬೆಳ್ಳಿಯ ಉಂಗುರಗಳನ್ನು (rings) ಅಚ್ಚು ಮಾಡಿ ಅಂಗಡಿಗಳಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಾರೆ.
ಇದನ್ನೂ ಓದಿ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ ದಂಪತಿ ರೂಮೊಳಗೆ ಹೋಗುತ್ತಿದ್ದಂತೆ ಕಾದಿತ್ತು ಶಾಕ್
ಡಿ.4ರಂದು ಸಂಜೆ ರಾಜು ಮನೆಗೆ ಬೀಗ ಹಾಕಿಕೊಂಡು ಚಿತ್ರದುರ್ಗಕ್ಕೆ ಹೋಗಿದ್ದರು. ಮರುದಿನ ಬೆಳಗ್ಗೆ 10.30ಕ್ಕೆ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯ ಹಂಚು ತೆಗೆದು ಕಳ್ಳರು ಒಳಗೆ ಪ್ರವೇಶ ಮಾಡಿದ್ದರು. ಚಿತ್ರದುರ್ಗ ಹೋಗುವ ಮುನ್ನಾ ದಿನ ರಾಜು ಅವರು 500 ಗ್ರಾಂ ತೂಕದ 1200 ಅಚ್ಚು ಮಾಡಿದ ಬೆಳ್ಳಿಯ ಉಂಗುರಗಳನ್ನು (rings) ಕಳ್ಳರು ಹೊತ್ತೊಯ್ದಿದ್ದಾರೆ ಎಂದ ದೂರಿನಲ್ಲಿ ತಿಳಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422