ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಸಿಟಿ ನ್ಯೂಸ್‌ : ಶಿವಮೊಗ್ಗ ನಗರದಲ್ಲಿ (City News) ಏನೇನಾಯ್ತು? ಇಲ್ಲಿದೆ ಫಟಾಫಟ್‌ ಸುದ್ದಿ.
➤ ಸುದ್ದಿಯ ಮುಂದಿನ 27 ಪ್ಯಾರಾಗಳು ಕೆಳಗಿವೆ.

ಚಕ್ರವರ್ತಿ, ರೇಣುಕಾಚಾರ್ಯ ಭೇಟಿ

FATAFAT - #f1f1f1ವಿಜಯನಗರ: ಪಹಲ್ಗಾಮ್‌ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್‌ ಕುಟುಂಬಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮಾಜಿ ಸಚಿವ ರೇಣುಕಾಚಾರ್ಯ ಅವರಿಂದ ಸಾಂತ್ವನ. ರೋಟರಿ ಚಿತಾಗಾರದಲ್ಲಿ ನಾರಾಯಣ ಬಲಿ ಪೂಜೆ ನೆರವೇರಿಸಲಾಯಿತು. ಇನ್ನು, ಮನೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪಲ್ಲವಿ ಮತ್ತು ಪುತ್ರ ಅಭಿಜಯ್‌ ಅವರಿಂದ ಮಾಹಿತಿ ಪಡೆಯಲು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

Narayana-Bali-pooje-by-Manjunatha-Rao-family.

ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗಕ್ಕೆ ಯಾವುದೇ ಸಂದರ್ಭ NIA ತಂಡ ಎಂಟ್ರಿ, ಮಂಜುನಾಥ್‌ ಮನೆಗೆ ಗಣ್ಯರ ಭೇಟಿ

ದಸ್ಕತ್‌ ಸಿನಿಮಾ ಕನ್ನಡದಲ್ಲಿ ರಿಲೀಸ್‌

FATAFAT - #f1f1f1ಪತ್ರಿಕಾ ಭವನ: ದಕ್ಷಿಣ ಕನ್ನಡದಲ್ಲಿ 70 ದಿನ ಯಶಸ್ವಿ ಪ್ರದರ್ಶನ ಕಂಡ ದಸ್ಕತ್‌ ಸಿನಿಮಾದ ಕನ್ನಡ ಆವೃತ್ತಿ ಮೇ.9ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತುಳುವಿನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ ಎಂದು ನಿರ್ದೇಶಕ ಅನಿಷ್‌ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಯಕ ದೀಕ್ಷಿತ್‌ ಕೆ.ಅಂಡಿಂಜೆ ಸೇರಿ ಹಲವರು ಇದ್ದರು.

daskat movie

ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ, ತಕ್ಷಣ ಕ್ರಮಕ್ಕೆ ಒತ್ತಾಯ, ದೂರಿನಲ್ಲಿ ಏನೆಲ್ಲ ಇದೆ?

ನಿಯಮ ಬಾಹಿರ ಕಟ್ಟಡಗಳು, ಕ್ರಮಕ್ಕೆ ಆಗ್ರಹ

FATAFAT - #f1f1f1ಜಿಲ್ಲಾಧಿಕಾರಿ ಕಚೇರಿ: ನಗರದ ವಿವಿಧೆಡೆ ನಿಯಮ ಬಾಹಿರವಾಗಿ ಕಟ್ಟಡಗಳನ್ನು (Building) ನಿರ್ಮಿಸಲಾಗಿದೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಮಿಕರ ವಿಭಾಗ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಎಂ.ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ ಸಲ್ಲಿಸಲಾಯಿತು.

Congress-INTUC-Devendrappa-Memorandum-to-DC.

ಇದನ್ನೂ ಓದಿ » ಅಡಿಕೆ ಧಾರಣೆ | 28 ಏಪ್ರಿಲ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ಹಾರನಹಳ್ಳಿಯಲ್ಲಿ ಡಾ. ಅಂಬೇಡ್ಕರ್‌ ಪ್ರತಿಮೆ

FATAFAT - #f1f1f1ಪತ್ರಿಕಾ ಭವನ: ಹಾರನಹಳ್ಳಿಯ ಅರೇನಾಕೊಪ್ಪದಲ್ಲಿ ಏ.30ರಂದು ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಲಾಗುತ್ತಿದೆ. ಅಂದು ಡಾ. ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಸಚಿವ ಮಧು ಬಂಗಾರಪ್ಪ, ಶಾಸಕಿ ಶಾರದಾ ಪೂರ್ಯಾನಾಯ್ಕ್‌, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಅಂಬೇಡ್ಕರ್‌ ಆದಿಜಾಂಬವ ರಾಜ್ಯ ಸಮಿತಿ ಅಧ್ಯಕ್ಷ ಎನ್‌.ಪ್ರಕಾಶ್‌ ತಿಳಿಸಿದರು. ಪ್ರಮುಖರಾದ ದೇವೇಂದ್ರಪ್ಪ, ಡಿ.ಕರಿಬಸಪ್ಪ, ಹಳದಪ್ಪ, ನಂಜಂಡಿ, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

haranahalli

ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲು ಕುರಿತು ಇಲಾಖೆಯಿಂದ ಪ್ರಮುಖ ಅಪ್‌ಡೇಟ್‌, ಏನದು?

ಎಸ್‌ಡಿಎಂಸಿ ಸಮನ್ವಯ ಸಮಿತಿಗೆ ಬೆಳ್ಳಿಹಬ್ಬ

FATAFAT - #f1f1f1ಪತ್ರಿಕಾ ಭವನ: ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿಗಳ ಸಮನ್ವಯ ವೇದಿಕೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಎಲ್ಲಾ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಈ ಸಂದರ್ಭ ರಾಜ್ಯ ಸರ್ಕಾರ ಎಸ್‌ಡಿಎಂಸಿ ಒಕ್ಕೂಟದ ಮನವಿಯನ್ನು ಪುರಸ್ಕರಿಸಬೇಕು ಎಂದು ವೇದಿಕೆಯ ತಾಲೂಕು ಅಧ್ಯಕ್ಷ ಸಂತೋಷ್‌ ತಿಳಿಸಿದರು. ಕಾರ್ಯದರ್ಶಿ ರಮ್ಯಾ, ರುದ್ರೇಶ್‌, ಸತೀಶ್‌, ಚಂದ್ರು, ಜಬೀವುಲ್ಲಾ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.

sdmc members

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನದಿಂದ ಮಳೆ ಅಬ್ಬರ, ವಿವಿಧೆಡೆ ಆಸ್ತಿಪಾಸ್ತಿ ಹಾನಿ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ?

31 ಸಾಧಕರಿಗೆ ಕಾಯಕರತ್ನ ಪ್ರಶಸ್ತಿ

FATAFAT - #f1f1f1ಪತ್ರಿಕಾ ಭವನ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಬಾಗಲಕೋಟೆಯ ರಬಕವಿಯಲ್ಲಿ ಮೇ.1ರಂದು ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ರಾಜ್ಯದ 31 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಡಿ.ರವಿ ಕುಮಾರ್‌ ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ ಬಳಿ ಹೋಮ್‌ ಗಾರ್ಡ್‌ ಮೇಲೆ ಹಲ್ಲೆ, ಆಟೋ ಚಾಲಕ ಅರೆಸ್ಟ್‌, ಏನಿದು ಕೇಸ್‌?

ನಿಗದಿತ ವೇಳೆಯೊಳಗೆ ಸಮೀಕ್ಷೆ ಪೂರ್ಣಗೊಳಿಸಿ

FATAFAT - #f1f1f1ಜಿಲ್ಲಾ ಪಂಚಾಯಿತಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತ ಸಮೀಕ್ಷೆಯು ಸರ್ಕಾರದ ಆದ್ಯತೆಯ ಸಮೀಕ್ಷೆಯಾಗಿದೆ. ಸಮೀಕ್ಷೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡು ನಿಗದಿತ ವೇಳೆಯೊಳಗೆ ಈ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿದರು.

ಇದನ್ನೂ ಓದಿ » ಆಯನೂರಿನಲ್ಲಿ ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಗೆ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ

FATAFAT - #f1f1f1ಕಾಶಿಪುರ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಕಾಶಿಪುರದಲ್ಲಿ ಸ್ವಾತಿ (28) ಎಂಬುವವರು ಸಾವನ್ನಪ್ಪಿದ್ದಾರೆ. ಎರಡು ವರ್ಷದ ಹಿಂದೆ ಪ್ರದೀಪ್‌ ಎಂಬುವವರೊಂದಿಗೆ ಸ್ವಾತಿ ವಿವಾಹವಾಗಿದ್ದರು. ಅವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಘಟನೆ ಸಂಬಂಧ ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ವಿವಿಧೆಡೆ ಅರ್ಧ ದಿನ ಅಂಗಡಿ, ಮುಂಗಟ್ಟು ಬಂದ್‌, ಎಲ್ಲೆಲ್ಲಿ ಹೇಗಿತ್ತು ಸ್ಥಿತಿ?

ಒನ್‌ ಲೈನ್‌ ನ್ಯೂಸ್‌

Point 1 F1F1F1ಶಿವಮೊಗ್ಗ: ರಾಷ್ಟ್ರೀಯ ಅಹಿಂದ ಸೈನಿಕ ಸಂಘಟನೆಯ ರಾಜ್ಯ ಮಹಿಳಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷೆಯಾಗಿ ಕವಿತಾ ಎಂ.ಬಿ.ಥೋರತ್‌ ಅವರನ್ನು ನೇಮಿಸಲಾಗಿದೆ.

Point 2 F1F1F1ಶಿವಮೊಗ್ಗ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 425ನೇ ಸ್ಥಾನ ಪಡೆದಿರುವ ಮೇಘನಾ ಅವರಿಗೆ ಶಿವಮೊಗ್ಗ ನಗರ ಜೆಡಿಎಸ್‌, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.

Point 3 F1F1F1ಶಿವಮೊಗ್ಗ: ರಾಷ್ಟ್ರೀಯ ಬಸವದಳದ ವತಿಯಿಂದ ಏ.30ರ ಬೆಳಗ್ಗೆ 10ಕ್ಕೆ ಕಲ್ಲಹಳ್ಳಿಯಲ್ಲಿರುವ ಬಸವಮಂಟಪದಲ್ಲಿ ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

Point 4 F1F1F1ಶಿವಮೊಗ್ಗ: ಜೆಸಿಐ ಶಿವಮೊಗ್ಗದ ವತಿಯಿಂದ ತುಂಗಾ ನಗರದ ಕೋರ್ಪಲಯ್ಯ ಛತ್ರ ಮಂಟಪದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. 30 ಮಂದಿ ಜೆಸಿಐ ಸದಸ್ಯರು, ಪಾಲಿಕೆ ಪೌರ ಕಾರ್ಮಿಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment