ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 2 SEPTEMBER 2024 : ಸಾಲಕ್ಕೆ ಮಿತಿ ಮೀರಿದ ಬಡ್ಡಿ (Interest) ವಸೂಲಿ ಮಾಡಿದ್ದಲ್ಲದೆ ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಖಾಲಿ ಚೆಕ್ಗಳಲ್ಲಿ ಇಷ್ಟ ಬಂದಷ್ಟು ಹಣ ನಮೂದು ಮಾಡಿ ಗಂಡ, ಹೆಂಡತಿಯನ್ನು ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಬಾಪೂಜಿನಗರದ ಹಸೀನಾ ಬಾನು ಎಂಬುವವರು ಮಹಿಳೆಯೊಬ್ಬರಿಂದ 1.70 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಸಾಕ್ಷಿಯಾಗಿ ಎರಡು ಬಾಂಡ್, ಹಸೀನಾ ಬಾನು ಅವರ ಪತಿಯ ಬ್ಯಾಂಕ್ ಖಾತೆಯ ಎರಡು ಖಾಲಿ ಚೆಕ್ಗಳನ್ನು ಮಹಿಳೆ ಪಡೆದುಕೊಂಡಿದ್ದಳು ಎಂದು ಆರೋಪಿಸಲಾಗಿದೆ. ಸಾಲದ ಮೊತ್ತಕ್ಕೆ ಶೇ.20ರಷ್ಟು ಬಡ್ಡಿ ವಸೂಲಿ ಮಾಡಿದ್ದು, ಈವರೆಗೂ ಸುಮಾರು 5 ಲಕ್ಷ ರೂ. ಬಡ್ಡಿ ಕಟ್ಟಲಾಗಿದೆ. ಹೀಗಿದ್ದೂ ಮತ್ತಷ್ಟು ಮೊತ್ತ ಪಾವತಿಸುವಂತೆ ಮಹಿಳೆ ಒತ್ತಾಯಿಸುತ್ತಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೆಚ್ಚುವರಿ ಮೊತ್ತ ಕಟ್ಟದೆ ಇದ್ದಲ್ಲಿ ಖಾಲಿ ಚೆಕ್ನಲ್ಲಿ ಇಷ್ಟ ಬಂದಷ್ಟು ಹಣ ನಮೂದು ಮಾಡಿ, ಹಸೀನಾ ಬಾನು ಮತ್ತು ಅವರ ಗಂಡನನ್ನು ಜೈಲಿಗೆ ಕಳುಹಿಸುವುದಾಗಿ ಮಹಿಳೆ ಬೆದರಿಕೆ ಒಡ್ಡಿದ್ದಳು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೋಟೆ ಠಾಣೆಗೆ ಹಸೀನಾ ಬಾನು ದೂರು ನೀಡಿದ್ದಾರೆ. ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮದ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಸೆಪ್ಟೆಂಬರ್ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422