ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ : ಲಾಡ್ಜ್ ಕೊಠಡಿಯಲ್ಲಿ (Room) ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ಕೊಠಡಿ ಬಾಡಿಗೆಗೆ ಪಡೆದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ.
ಹುಬ್ಬಳ್ಳಿ ಮೂಲದ ಬಸವರಾಜ್ ಬಾಗಲಕೋಟೆ (46) ಎಂಬುವವರು ಬಿ.ಹೆಚ್.ರಸ್ತೆಯ ದುರ್ಗಾ ಲಾಡ್ಜ್‌ನಲ್ಲಿ ಕೊಠಡಿ (Room) ಬಾಡಿಗೆಗೆ ಪಡೆದಿದ್ದರು.
ಬಾತ್‌ರೂಮ್‌ನಲ್ಲಿ ಸಿಕ್ತು ಮೃತದೇಹ
ಬಸವರಾಜ್ ಬಾಗಲಕೋಟೆ ಬಾಗಿಲು ತೆರೆಯದ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಾಗಿಲು ತೆರೆದು ಕೊಠಡಿಯ ಒಳಗೆ ಶೋಧಿಸಿದರು. ಬಾತ್‌ರೂಮ್‌ನಲ್ಲಿ ಬಸವರಾಜ್ ಬಾಗಲಕೋಟೆ ಅಂಗಾತವಾಗಿ ಬಿದ್ದಿದ್ದರು ಎಂದು ಆರೋಪಿಸಲಾಗಿದೆ. ಕೂಡಲೆ ಲಾಡ್ಜ್ ಸಿಬ್ಬಂದಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ » ಹಜ್ ಯಾತ್ರೆ, ಇದೇ ಮೊದಲು ಶಿವಮೊಗ್ಗದಲ್ಲಿ ನಾಲ್ಕು ಜಿಲ್ಲೆಯ ಯಾತ್ರಾರ್ಥಿಗಳಿಗೆ ಶಿಬಿರ, ಏನಿದು ಶಿಬಿರ? ಏನೇನಿರುತ್ತೆ?
ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಬಸವರಾಜ್ ಬಾಗಲಕೋಟೆ ಶಿವಮೊಗ್ಗದ ಆಟೋಮೊಬೈಲ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿದ್ದರು ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







