ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 29 ಸೆಪ್ಟೆಂಬರ್ 2021
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿ ಕಣ್ಮರೆಯಾಗಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಪತ್ತೆ ಕಾರ್ಯ ಮುಂದುವರೆದಿದೆ. 24 ಗಂಟೆ ಕಳೆದರೂ ಅವರ ಕುರಿತು ಸುಳಿವು ಸಿಕ್ಕಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾಧಿಕಾರಿ ಕಚೇರಿಯ ಎಫ್’ಡಿಎ ಗಿರಿರಾಜ್ ಕಣ್ಮರೆಯಾಗಿ ಒಂದು ದಿನವಾಗಿದೆ. ಈತನಕ ಅವರಿಗಾಗಿ ಅಧಿಕಾರಿಗಳು, ಪೊಲೀಸರು ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಎಲ್ಲಿಯೂ ಗಿರಿರಾಜ್ ಕುರಿತು ಸುಳಿವು ಸಿಕ್ಕಿಲ್ಲ.
ಈವರೆಗೂ ಏನೆಲ್ಲ ಬೆಳವಣಿಗೆಯಾಗಿದೆ?
ಸೆಪ್ಟೆಂಬರ್ 28ರ ಬೆಳಗ್ಗೆ 6 ಗಂಟೆಗೆ ಗಿರಿರಾಜ್ ಅವರು ಬಸವನಗುಡಿಯಲ್ಲಿರುವ ಮನೆಯಿಂದ ಹೊರಗೆ ಹೋಗಿದ್ದಾರೆ. ತಮ್ಮ ಬೈಕನ್ನು ಮನೆಯಲ್ಲೇ ನಿಲ್ಲಿಸಿ ತೆರಳಿದ್ದಾರೆ.
ಇದನ್ನು ಓದಿ | ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ನಾಪತ್ತೆ ಕೇಸ್, 15 ಗಂಟೆ ಕಳೆದರೂ ಸಿಗದ ಸುಳಿವು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗ್ಗೆ 9 ಗಂಟೆ ಹೊತ್ತಿಗೆ ಸಹೋದ್ಯೋಗಿಗಳಿಗೆ ಸುದೀರ್ಘವಾದ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳ, ಕೆಲಸದ ಒತ್ತಡ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗಿರಿರಾಜ್ ತಿಳಿಸಿದ್ದರು.
ಆತಂಕಗೊಂಡ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗಿರಿರಾಜ್’ಗಾಗಿ ಹುಡುಕಾಟ ಆರಂಭಿಸಿದರು.
ಬೆಳಗ್ಗೆ 10 ಗಂಟೆ ಹೊತ್ತಿಗೆ ಗಿರಿರಾಜ್ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ. ಸಮಾಧಾನಪಡಿಸಿದ ಅಧಿಕಾರಿಗಳು, ಸಿಬ್ಬಂದಿ.
ಇದನ್ನು ಓದಿ | ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಮೆಸೇಜ್ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ
ಗಿರಿರಾಜ್ ಮೊಬೈಲ್ ಜಾಡು ಹಿಡಿಯಲು ಆರಂಭಿಸಿದ ಅಧಿಕಾರಿಗಳು. ಭದ್ರಾವತಿ ತಾಲೂಕು ಬಾರಂದೂರು ಬಳಿ ಕೊನೆಯದಾಗಿ ಸಿಗ್ನಲ್ ಪತ್ತೆಯಾದ ಮಾಹಿತಿ. ಅಧಿಕಾರಿಗಳು ಸ್ಥಳಕ್ಕೆ ದೌಡು.
ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯಿಂದ ಬಾರಂದೂರು, ಕಾರೇಹಳ್ಳಿ, ಎಂ.ಸಿ.ಹಳ್ಳಿ ಸುತ್ತಮುತ್ತ ಶೋಧ ಕಾರ್ಯ ನಡೆಸಿದರು. ಗಿರಿರಾಜ್ ಭಾವಚಿತ್ರ ಹಿಡಿದು ಮನೆ, ಅಂಗಡಿಗಳಲ್ಲಿ ವಿಚಾರಿಸಿದ ಸಿಬ್ಬಂದಿ.
ಇತ್ತ ಭದ್ರಾವತಿಯ ಶಿವನಿ ರಸ್ತೆಯ ಉದ್ಧಾಮ ಆಂಜನೇಯ ದೇವಸ್ಥಾನದ ಸುತ್ತಮುತ್ತಲು ಹತ್ತು ಕಿ.ಮೀ ವ್ಯಾಪ್ತಿಯಲ್ಲೂ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು. ಸಂಜೆವರೆಗೂ ಎಲ್ಲೆಡೆ ಶೋಧ. ಉಪವಿಭಾಗಾಧಿಕಾರಿ, ಶಿವಮೊಗ್ಗ, ಭದ್ರಾವತಿ ತಹಶೀಲ್ದಾರ್’ಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ರಾತ್ರಿ 8 ಗಂಟೆಗೆ ಶಿವಮೊಗ್ಗದ ಜಯನಗರ ಠಾಣೆಗೆ ಗಿರಿರಾಜ್ ಕುಟುಂಬ ಆಗಮನ. ನಾಪತ್ತೆ ಪ್ರಕರಣ ದಾಖಲು. ಗಿರಿರಾಜ್’ಗಾಗಿ ಶೋಧ ಕಾರ್ಯ ಮುಂದುವರೆಸಿದ ಪೊಲೀಸರು.
ಗಿರಿರಾಜ್’ಗಾಗಿ ಇವತ್ತು ಕೂಡ ಶೋಧ ಕಾರ್ಯ ನಡೆಯಲಿದೆ. ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200