ರಾಜಸ್ತಾನದ ಮೂವರು ಅರೆಸ್ಟ್, ಶಿವಮೊಗ್ಗ ನಗರದ ನಾಲ್ಕು ಠಾಣೆಯಲ್ಲಿ ಇವರ ವಿರುದ್ಧ ಇದೆ ಕೇಸ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | SHIMOGA | 9 ಜೂನ್ 2022
➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಗರದ ವಿವಿಧೆಡೆ ಸರಗಳ್ಳತನ ಮಾಡಿದ್ದ ಆರೋಪದ ಮೇಲೆ ರಾಜಸ್ತಾನದ ಮೂವರನ್ನು ಪೊಲೀಸರು ಎರಡು ಬೈಕ್ ಮತ್ತು ಚಿನ್ನಾಭರಣ ಬಂಧಿಸಿ 225 ಗ್ರಾಂ. ವಶಪಡಿಸಿಕೊಂಡಿದ್ದಾರೆ.

Shimoga nanjappa Hospital

ಅಶೋಕ್‌ಕುಮಾರ್ (24), ಅಶ್ವಿನ್ (23) ಮತ್ತು ವಿಕಾಸ್ ಕುಮಾರ್ (22) ಬಂಧಿತರು. ಆರೋಪಿಗಳು ಕೋಟೆ, ವಿನೋಬನಗರ ಠಾಣೆಯಲ್ಲಿ ತಲಾ ಎರಡು, ತುಂಗಾನಗರ ಮತ್ತು ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಕಳೆದ ಮೇ 23 ರಂದು ಸಂಜೆ ಶೇಷಾದ್ರಿಪುರಂನ ಆದಿಶಕ್ತಿ ಶೋರೂಂ ಹತ್ತಿರ ಬೈಕ್‌ನಲ್ಲಿ ಬಂದ ಆರೋಪಿಗಳು ಮಹಿಳೆಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಮೇ 28ರಂದು ಅಶೋಕ್ ಕುಮಾರ್ ಮತ್ತು ಅಶ್ವಿನ್’ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸರಗಳ್ಳತನ ಖಚಿತವಾದ ನಂತರ ಇಬ್ಬರನ್ನೂ ಬಂಧಿಸಿ ಅವರು ನೀಡಿದ ಸುಳಿವು ಆಧರಿಸಿ ವಿಕಾಸ್‌ಕುಮಾರ್ ಎಂಬುವನನ್ನು ಗುರುವಾರ ಬಂಧಿಸಲಾಗಿದೆ.

ಸೇತುವೆ ಕೆಳಗೆ ಶೋಧ

ಸರಗಳ್ಳರಿಗಾಗಿ ಕೋಟೆ ಠಾಣೆ ಪೊಲೀಸರು ತುಂಗಾ ನದಿ ಸೇತುವೆ ಕೆಳಗೆ ಶೋಧ ಕಾರ್ಯ ನಡೆಸಿದ್ದರು. ಮೇ 23ರಂದು ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳಲು ತುಂಗಾ ನದಿ ಸೇತುವೆಯ ಕೆಳಗಿಳಿದಿದ್ದರು ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆ ಪೊಲೀಸರು ತುಂಗಾ ನದಿ ಸೇತುವೆ ಕೆಳಗೆ ಶೋಧ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ – ಶಿವಮೊಗ್ಗ ತುಂಗಾ ಸೇತುವೆ ಕೆಳಗೆ ಪೊಲೀಸರಿಂದ ದಿಢೀರ್ ಶೋಧ | VIDEO NEWS

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment