SHIVAMOGGA LIVE NEWS | CAR ATTACK | 10 ಮೇ 2022
ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸಂಚು ರೂಪಿಸಿಯೆ ಕಾರಿನ ಗಾಜು ಒಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
‘ಊರುಗಡೂರು ಮುಖ್ಯ ರಸ್ತೆಯಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ಇಬ್ಬರು ಮತ್ತು ಕೃತ್ಯಕ್ಕೂ ಮೊದಲು ಅವರೊಂದಿಗೆ ಮದ್ಯ ಸೇವಿಸಿದ್ದ ಇನ್ನೂ ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಕುಡಿಯುವಾಗಲೆ ರೆಡಿಯಾಗಿತ್ತು ಪ್ಲಾನ್
ಕಾರಿನ ಮೇಲೆ ದಾಳಿ ಪೂರ್ವ ನಿಯೋಜಿತ ಎಂಬ ಶಂಕೆ ವ್ಯಕ್ತವಾಗಿದೆ. ಐವರು ಆರೋಪಿಗಳು ಮದ್ಯ ಸೇವಿಸುವಾಗಲೆ ಕೃತ್ಯ ಎಸಗುವ ಕುರಿತು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?
‘ಐವರು ಆರೋಪಿಗಳು ಮದ್ಯ ಸೇವಿಸುವ ಸಂದರ್ಭದಲ್ಲೇ ದಾಳಿ ಕುರಿತು ಮಾತನಾಡಿದ್ದರು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ – ಕಲ್ಲು ಬಿದ್ದ ಕಾರಿನಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಇದ್ದರಾ? | 5 ಪಾಯಿಂಟ್ ನ್ಯೂಸ್
ಶಿವಮೊಗ್ಗದಿಂದ ಮತ್ತೂರು ಗ್ರಾಮಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಲಾಗಿತ್ತು. ರಾಡ್’ನಿಂದ ಹೊಡೆದು ಹಿಂಬದಿ ಗಾಜು ಪುಡಿ ಮಾಡಲಾಗಿತ್ತು. ಅಲ್ಲದೆ ಈ ವೇಳೆ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಮೇ 6ರ ರಾತ್ರಿ ಸೂಳೆಬೈಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ನಡುರಾತ್ರಿ ಮುಸುಕುಧಾರಿಗಳಿಂದ ಶಿವಮೊಗ್ಗದಲ್ಲಿ ದುಷ್ಕೃತ್ಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ