ಹಣಗೆರೆಯಲ್ಲಿ ಮಕ್ಕಳಿಗೆ ಬೈಕ್ ಡಿಕ್ಕಿ, ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ – 3 CRIME NEWS

SHIVAMOGGA LIVE NEWS | 4 DECEMBER 2022

ಹಣಗೆರೆ ಬಳಿ ಮಕ್ಕಳಿಗೆ ಗುದ್ದಿದ ಬೈಕ್

ತೀರ್ಥಹಳ್ಳಿ : ಅಳುತ್ತಿದ್ದ ಮುಗುವಿಗೆ ಬಿಸ್ಕೇಟ್ ಕೊಡಿಸಲು ಅಂಗಡಿಗೆ ಕರೆದೊಯ್ಯುತ್ತಿದ್ದ ವೇಳೆ ಬೈಕ್ LIC-HOME-PRASHANTHಡಿಕ್ಕಿಯಾಗಿ ಬಾಲಕಿ ಮತ್ತು ಮಗು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆ (accident at hanagere) ಬಳಿ ಘಟನೆ ಸಂಭವಿಸಿದೆ. ಫಮೀದಾ (10) ಮತ್ತು ಶಫಿವುಲ್ಲಾ (2) ಗಾಯಾಳುಗಳು. ಫಮೀದಾಳು ತನ್ನ ತಾಯಿ ಮತ್ತು ಕುಟುಂಬದೊಂದಿಗೆ ಚಿತ್ರದುರ್ಗದಿಂದ ಹಣಗೆರೆ ಕಟ್ಟೆಗೆ ಬಂದಿದ್ದರು.

ALSO READ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ ದಂಪತಿ ರೂಮೊಳಗೆ ಹೋಗುತ್ತಿದ್ದಂತೆ ಕಾದಿತ್ತು ಶಾಕ್

ಪೂಜೆ ಬಳಿಕ ಸಮೀಪದ ಕಾಡಿನಲ್ಲಿ ಫಮೀದಾಳ ತಾಯಿ, ಅಜ್ಜಿ ಅಡುಗೆ ಮಾಡುತ್ತಿದ್ದರು. ಶಫಿವುಲ್ಲಾ ಜೋರಾಗಿ ಅಳುತ್ತಿದ್ದರಿಂದ ಆತನಿಗೆ ಬಿಸ್ಕೇಟ್ ಕೊಡಿಸಲು ಫಮೀದಾ ಅಂಗಡಿಗೆ ಕರೆದೊಯ್ಯುತ್ತಿದ್ದಳು. ಆಗ ಕಚ್ಚಾ ರಸ್ತೆಯಲ್ಲಿ ಬಂದ ಬೈಕ್ ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಮಕ್ಕಳು ಗಾಯಗೊಂಡಿದ್ದಾರೆ. ಬೈಕ್ ಚಾಲಕ ಅರುಣ್ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(accident at hanagere)

ವರದಕ್ಷಿಣೆ ಕಿರುಕುಳ, ಗೃಹಣಿ ಸಾವು

ಶಿಕಾರಿಪುರ : ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಗೀತಾ (24) ಮೃತ ಗೃಹಣಿ. ಶಿರಾಳಕೊಪ್ಪದ ಹರೀಶ್ ಎಂಬುವವರ ಜೊತೆಗೆ ಸಂಗೀತಾ ಮದುವೆಯಾಗಿದ್ದರು. ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಸಂಗೀತಾಳ ಮೃತ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಸಂಗೀತಾಳ ಪೋಷಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಹರೀಶ್ ಮತ್ತು ಆತನ ಕುಟುಂಬದವರ ವಿರುದ್ಧ  ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Kalleshwara-Enterprises.webp

(accident at hanagere)

ನಿಷೇಧಿತ ಸಂಘಟನೆಯ ಗೋಡೆ ಬರಹ

ಶಿರಾಳಕೊಪ್ಪ  : ಪಟ್ಟಣದ 9 ಕಡೆ ನಿಷೇಧಿತ ಸಂಘಟನೆಯ ಗೋಡೆ ಬರಹ ಬರೆದಿರುವ ಸಂಬಂಧ https://chat.whatsapp.com/KChu2C1bGTM2v9HmZlfIkSಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ವಿವಿಧೆಡೆ JOIN CFI ಗೋಡೆ ಬರಹಗಳನ್ನು ಬರೆಯಲಾಗಿದೆ. ಇದನ್ನು ಗಮನಿಸಿದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಸಿಎಫ್ಐ ಮತ್ತು ಪಿಎಫ್ಐ ಸಂಘಟನೆಗಳನ್ನು ಕೇಂದ್ರ ಸರ್ಕಾರ 5 ವರ್ಷಕ್ಕೆ ನಿಷೇಧಗೊಳಿಸಿದೆ. ಆದರೆ ದುಷ್ಕರ್ಮಿಗಳು ದ್ವೇಷ ಹುಟ್ಟುಹಾಕಲು ಶಿರಾಳಕೊಪ್ಪದಲ್ಲಿ ಗೋಡೆಗಳ ಮೇರೆ ಸ್ಪ್ರೇ ಪೇಂಟ್ ನಿಂದ ಬರೆದಿದ್ದಾರೆ ಎಂದು ಶಿರಾಳಕೊಪ್ಪ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ALSO READ – ಶಿವಮೊಗ್ಗ ವಿಮಾನ ನಿಲ್ದಾಣ, ಒಳಗೆ ಏನೇನಿದೆ? ಹೇಗಿದೆ? ಯಾವೆಲ್ಲ ಕಟ್ಟಡ ನಿರ್ಮಿಸಲಾಗಿದೆ?

Shimoga Nanjappa Hospital

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment