ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2021
ಪಾದಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತರಕಾರಿ ತುಂಬಿದ್ದ ವಾಹನ ಪಲ್ಟಿಯಾಗಿದೆ. ವಾಹನದ ಅಡಿಗೆ ಸಿಲುಕಿದ್ದ ಪಾದಚಾರಿ ಮತ್ತು ವಾಹನದಲ್ಲಿದವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆ ಮುಂಭಾಗ ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ಠಾಣೆ ಬಳಿ ಅಪಘಾತವಾಗಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಅಪಘಾತಕ್ಕೀಡಾದವರನ್ನು ರಕ್ಷಿಸಿದ್ದಾರೆ.
ಹೇಗಾಯ್ತು ಅಪಘಾತ?
ಗುರುವಾರ ರಾತ್ರಿ ಬೊಲೆರೊ ಪಿಕಪ್ ವಾಹನ ತರಕಾರಿ ತುಂಬಿಕೊಂಡು ಶಿವಮೊಗ್ಗ ಎಪಿಎಂಸಿ ಕಡೆಗೆ ತೆರಳುತಿತ್ತು. ಸಾಗರ ರಸ್ತೆಯಲ್ಲಿ ದಿಢೀರನೆ ಪಾದಚಾರಿಯೊಬ್ಬ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆತನಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೊಲೆರೊ ಪಲ್ಟಿಯಾಗಿದೆ.
ಘಟನೆಯಲ್ಲಿ ಪಾದಚಾರಿ ವಿಶ್ವನಾಥ್ ಬೊಲೆರೊ ವಾಹನದ ಅಡಿಗೆ ಸಿಲುಕಿದ್ದಾನೆ. ಅಪಘಾತದ ಸದ್ದಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿದ್ದಾರೆ. ಪಾದಚಾರಿ ವಿಶ್ವನಾಥ್, ವಾಹನದ ಚಾಲಕ ಎನ್.ಆರ್.ಪುರದ ಸನ್ನಿ ಮತ್ತು ಕ್ಲೀನರ್ ಪಾಪಚ್ಚಿಯನ್ನು ರಕ್ಷಿಸಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿಗಳಾದ ನಾಗೇಶ್, ವಿಜಯ್, ಪಾಂಡುರಂಗ, ವಿಷ್ಣುನಾಯ್ಕ್, ಮುದಬಸಪ್ಪ ಅವರು ಗಾಯಾಳುಗಳನ್ನು ರಕ್ಷಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200