ಶಿವಮೊಗ್ಗದಲ್ಲಿ ವಾಸವಿ ಮಹಿಳಾ ಸಂಘದ ನೂತನ ಅಧ್ಯಕ್ಷೆ ಪದಗ್ರಹಣ

Published On : ಏಪ್ರಿಲ್ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಯಾವುದೇ ಸಂಘ-ಸಂಸ್ಥೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲು ಮತ್ತು ಸಾರ್ಥಕ ಎನಿಸಿಕೊಳ್ಳಲು ಸಮಾಜಮುಖಿ ಕಾರ್ಯಕ್ರಮಗಳೇ (ceremony) ಕಾರಣ ಎಂದು ವಾಸವಿ ಮಹಿಳಾ ಸಂಘದ ನೂತನ ಅಧ್ಯಕ್ಷೆ ಗೌರಿ ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ವಾಸವಿ ಮಹಿಳಾ ಸಂಘದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಸಂಘಟನೆ ಮತ್ತು ಮಹಿಳೆಯರಿಗಾಗಿ ಸರ್ಕಾರಗಳು ಅನೇಕ ಯೋಜನೆಗಳು ರೂಪುಗೊಳಿಸಿವೆ. ವಿವಿಧ ಯೋಜನೆಗಳ ಮೂಲಕ ಅದರ ಲಾಭವನ್ನು ನಮ್ಮ ವಾಸವಿ ಮಹಿಳೆಯರು ಸಹ ಪಡೆದುಕೊಳ್ಳಬೇಕು ಎಂದು ಹೇಳಿದರು. 

Gowri-Srinath-new-president-of-vasavi-mahila-sanga-in-Shimoga

ವಾಸವಿ ಮಹಿಳಾ ಸಂಘಟನೆ ವತಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.  ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೇತ್ರದಾನ ಕಾರ್ಯಕ್ರಮ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ದಾರಿಯಾಗುವ ನಿರೀಕ್ಷೆ ಸಹ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಆರ್ಯವೈಶ್ಯ ಸಮಾಜದವರು ಸಹಕಾರ ಅಗತ್ಯ ಎಂದರು.

ಇದನ್ನೂ ಓದಿ : ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್‌, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

ಇದಕ್ಕೂ ಮುನ್ನ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅರುಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಅಂಗಸಂಸ್ಥೆ ಹಾಗೂ ಸಂಘ-ಸಂಸ್ಥೆಗಳ ಮಹಿಳೆಯರು ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್‌, ಏನೇನೆಲ್ಲ ಸ್ಟಾಲ್‌ಗಳಿವೆ?

ಕುಶಾಲನಗರದ ಕನ್ಯಕಾ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕಿ ದೀಪ್ತಿ ಚೇತನ್, ಆಶಾ ರಾಜಶೇಖರ್, ವಾಸವಿ ಮಹಿಳಾ ಸಂಘದ ನೂತನ ಕಾರ್ಯದರ್ಶಿ ಸುನಿತಾ ಚೇತನ್, ಉಪಾಧ್ಯಕ್ಷೆ ಸುಮಾ ಗುರುನಾಥ್, ನಮ್ರತಾ ಪ್ರಶಾಂತ್, ಸಹ ಕಾರ್ಯದರ್ಶಿ ಸೌಮ್ಯ ರವಿ, ಖಜಾಂಚಿ ರಚಿತಾ ಚೇತನ್ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 17, 2026

Leave a Comment