ಒಟಿಪಿ ಬಂದಿತ್ತು, ಯಾರೊಂದಿಗೂ ಷೇರ್‌ ಆಗಿರಲಿಲ್ಲ, ಅದರೂ ಖಾತೆಯಿಂದ ಲಕ್ಷ ಲಕ್ಷ ನಾಪತ್ತೆ

ಶಿವಮೊಗ್ಗ: ಯಾರೊಂದಿಗು ಒಟಿಪಿ ಹಂಚಿಕೊಳ್ಳದಿದ್ದರೂ ರೈತರೊಬ್ಬರ ಬ್ಯಾಂಕ್ ಖಾತೆಯ ಮಾಹಿತಿ ಕದ್ದು ₹2,84,081 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಲಾಗಿದೆ. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಜಿಲ್ಲೆಯ ರೈತರೊಬ್ಬರಿಗೆ ವಂಚಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಕರೆ ಮಾಡಿ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿರುವ ಬಗ್ಗೆ ವಿಚಾರಿಸಿದಾಗ, ವಂಚನೆ ಬೆಳಕಿಗೆ ಬಂದಿದೆ. ಆಗ ರೈತ ತಾವು ಹಣ ವರ್ಗಾಯಿಸಿಲ್ಲ ಎಂದು ತಿಳಿಸಿದ ತಕ್ಷಣವೇ ಮೊಬೈಲ್‌ಗೆ ಒಟ್ಟು ₹2.84 ಲಕ್ಷ ಡೆಬಿಟ್ ಆಗಿರುವ ಮೆಸೇಜ್‌ಗಳು ಬಂದಿವೆ ಎಂದು ಆರೋಪಿಸಲಾಗಿದೆ.

SMS-Fraud-Shimoga-CEN-Police-Station.

ತಕ್ಷಣವೇ ಬ್ಯಾಂಕ್ ಕಸ್ಟಮರ್ ಕೇರ್ ಸಂಪರ್ಕಿಸಿ ಖಾತೆಯನ್ನು ಫ್ರೀಜ್ ಮಾಡಿಸಲಾಗಿದೆ. ಮೊಬೈಲ್ ಮೆಸೇಜ್ ಪರಿಶೀಲಿಸಿದಾಗ ಒಟಿಪಿಗಳು ಬಂದಿರುವುದು ಗೊತ್ತಾಗಿದೆ. ಆದರೆ ರೈತ ಅವುಗಳನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಹಾಗಿದ್ದು ಹಣ ವರ್ಗಾವಣೆಯಾಗಿದ್ದು, ಅನುಮಾನಗೊಂಡ ರೈತ ದೂರು ನೀಡಿದ್ದಾರೆ. ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: