ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOSANAGARA NEWS, 2 OCTOBER 2024 : ಬ್ಯಾಟರಿ ಲೈಟ್‌ನ (Light) ಕಾರಣಕ್ಕಾಗಿ ನೆರೆಹೊರೆ ಮನೆಯವರು ಕೈ ಕೈ ಮಿಲಾಯಿಸಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಏನಿದು ಪ್ರಕರಣ?
ಹೊಸನಗರ ತಾಲೂಕು ಹೆಗ್ಗರಸು ಗ್ರಾಮದಲ್ಲಿ ಸ್ವಾಮಿ ರಾವ್ ಎಂಬುವವರು ಬ್ಯಾಟರಿ ಲೈಟ್ ಬಿಟ್ಟ ವಿಚಾರ ನೆರೆ ಮನೆಯವರು ಬಡಿದಾಡಿಕೊಂಡಿದ್ದಾರೆ. ಸೆ.27ರಂದು ರಾತ್ರಿ ಘಟನೆ ಸಂಭವಿಸಿದೆ. ಸ್ಯಾಮಿ ರಾವ್ ಅವರ ಕುಟುಂಬ ಮತ್ತು ಪಕ್ಕದ ಸಾಗರ್ ಎಂಬುವವರ ಕುಟುಂಬದವರು ಕೈ ಕೈ ಮಿಲಾಯಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸ್ವಾಮಿರಾವ್ ಕುಟುಂಬದ ಆರೋಪವೇನು?
ಪಿತೃಪಕ್ಷದ ಪೂಜೆ ಮುಗಿಸಿ ನೆಂಟರನ್ನು ಬೀಳ್ಕೊಡಲು ಸ್ವಾಮಿರಾವ್ ಕುಟುಂಬದವರು ಮನೆಯಿಂದ ಹೊರ ಬಂದಿದ್ದರು. ಆಗ ಸ್ವಾಮಿರಾವ್ ಅವರು ಬ್ಯಾಟರಿ ಲೈಟ್ ಆನ್ ಮಾಡಿದ್ದು ಅದು ಆಕಸ್ಮಿಕವಾಗಿ ಪಕ್ಕದ ಬ್ಯಾಣದ ಮೇಲೆ ಬಿದ್ದಿದೆ. ಅಲ್ಲಿ ಮದ್ಯ ಸೇವಿಸುತ್ತಿದ್ದವರು ಅವಾಚ್ಯವಾಗಿ ನಿಂದಿಸಿದರು. ಅಲ್ಲದೆ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಸಾಗರ್ ಕುಟುಂಬದವರ ಆರೋಪವೇನು?
ಸಾಗರ್ ಮತ್ತು ಅವರ ಸಹೋದರ ಮಾತನಾಡುತ್ತಿದ್ದಾಗ ಸ್ವಾಮಿರಾವ್ ಅವರು ತಮ್ಮ ಮನೆ ಕಾಂಪೌಂಡಿಗೆ ಬ್ಯಾಟರಿ ಲೈಟ್ ಬಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಸ್ವಾಮಿ ರಾವ್ ಅವರು ತಮ್ಮ ಮುಖಕ್ಕೆ ಕಲ್ಲು ತೂರಿದ್ದಾರೆ. ಕಲ್ಲೇಟಿನಿಂದ ನೋವಿಗೆ ಸಾಗರ್ ಜೋರಾಗಿ ಕೂಗಿಕೊಂಡಾಗ ಆತನ ಕುಟುಂಬದವರು ಹೊರ ಬಂದಿದ್ದಾರೆ. ಆಗ ಸ್ವಾಮಿ ರಾವ್ ಅವರ ಕುಟುಂಬದವರು ಮುಖಕ್ಕೆ ಖಾರದ ಪುಡಿ ಎರಚಿ ಥಳಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಹೊಸನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಕರ್ನಾಟಕ ಸಂಘ, ನೂತನ ಕಾರ್ಯಕಾರಿ ಸಮಿತಿಗೆ 15 ಮಂದಿ ಆಯ್ಕೆ