ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ನವೆಂಬರ್ 2021
ರಾತ್ರೋರಾತ್ರಿ ಅಡಕೆ ಮರಗಳಿಂದ ಕೊನೆಗಳನ್ನು ಕೊಯ್ದು ಕದ್ದೊಯ್ಯಲಾಗಿದೆ. ಸುಮಾರು ಒಂದು ಕ್ವಿಂಟಾಲ್’ನಷ್ಟು ಅಡಕೆ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ತಾಲೂಕು ರಾಮನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಲೋಕೇಶ್ವರಪ್ಪ ಎಂಬುವವರಿಗೆ ಸೇರಿದ ಅಡಕೆ ತೋಟದಲ್ಲಿ ನಿತ್ಯ ಅಡಕೆ ಕಳ್ಳತನವಾಗುತ್ತಿರುವ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ರಾತ್ರಿ ವೇಳೆ ಲೋಕೇಶ್ವರಪ್ಪ ಅವರು ಪರಿಶೀಲನೆಗಾಗಿ ಅಡಕೆ ತೋಟಕ್ಕೆ ಹೋದಾಗ ಕಳ್ಳನೊಬ್ಬ ಕೊನೆ ಇಳಿಸುತ್ತಿರುವುದು ಕಂಡು ಬಂದಿದೆ.
ಲೋಕೇಶ್ವರಪ್ಪ ಅವರು ಬಂದಿದ್ದನ್ನು ಗಮನಿಸಿದ ಕಳ್ಳ ಪರಾರಿಯಾಗಿದ್ದಾನೆ. ತೋಟದಲ್ಲಿ ಪರಿಶೀಲನೆ ನಡೆಸಿದಾಗ ಸುಮಾರು 10 ಮರಗಳಲ್ಲಿ 20ಕ್ಕೂ ಹೆಚ್ಚು ಕೊನೆಗಳನ್ನು ಕೊಯ್ದು ಕಳ್ಳತನ ಮಾಡಲಾಗಿದೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಆಗಿಂದಾಗ್ಗೆ ಆರೋಗ್ಯ ತಪಾಸಣೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಲಿದೆ. ಇಲ್ಲಿದೆ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ, ಸೂಕ್ತ ಸಲಹೆ)
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422