ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOLEHONNURU NEWS, 21 SEPTEMBER 2024 : ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು (Areca Tree) ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ನಾಶ ಮಾಡಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳು ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕಲ್ಲಿಹಾಳ್ ಗ್ರಾಮದ ಷಹಿಮುನ್ನಿಸ ಅವರಿಗೆ ಸೇರಿದ 1.6 ಎಕರೆ ಜಮೀನಿನಲ್ಲಿ ಸುಮಾರು 34 ವರ್ಷದ ಫಲ ನೀಡುತ್ತಿದ್ದ ಅಡಿಕೆ ಮರಗಳಿದ್ದವು. ಬುಧವಾರ ಬೆಳಗ್ಗೆ ಅಡಕೆ ಕಟಾವು ಮಾಡಬೇಕಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಂಗಳವಾರ ರಾತ್ರಿ ವೇಳೆಗೆ ದುಷ್ಕರ್ಮಿಗಳು ಸುಮಾರು 700 ಅಡಿಕೆ ಮರಗಳನ್ನು ಗರಗಸದಿಂದ ಅರ್ಧಕ್ಕೆ ಕತ್ತರಿಸಿದ್ದಾರೆ. ಇದರಿಂದ ಕೆಲ ಮರಗಳು ಧರೆಗುರುಳಿದ್ದು, ತೋಟ ದಲ್ಲಿ ಹಸಿ ಅಡಿಕೆ ಮಣ್ಣುಪಾಲಾಗಿದೆ. ಈ ಕೃತ್ಯದಿಂದ ಸುಮಾರು 70 ಲಕ್ಷ ರೂ. ಗಳಿಗೂ ಹೆಚ್ಚಿನ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಅನುಮಾನಾಸ್ಪದ ಸಾವು