ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಕು ಇರಿತ ಕೇಸ್‌, ಮೂವರು ಅರೆಸ್ಟ್‌, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ಅಮೀರ್ ಅಹಮದ್ ವೃತ್ತದ ಬಳಿ ಬಿ.ಹೆಚ್.ರಸ್ತೆಯಲ್ಲಿರುವ ಎಸ್‌ಎಎಸ್ ಕಲೆಕ್ಷನ್ ಮೊಬೈಲ್ ಫೋನ್ ಶಾಪ್‌ಗೆ (mobile shop) ನುಗ್ಗಿರುವ ಮೂವರು ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದರು.

ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಬರ್ಕತ್ (32) ಚಾಕು ಇರಿತದಿಂದ ಗಾಯಗೊಂಡಿದ್ದು, ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮೂವರನ್ನು ಬಂಧಿಸಿದ ಪೊಲೀಸ್‌

ಪ್ರಕರಣ ಸಂಬಂಧ ಮೊಹಮ್ಮದ್ ಶಹಬಾಜ್ (22), ಆಕಾಶ್ (20) ಸೇರಿದಂತೆ ಮೂವರನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Stabbing-on-syef-barkath-in-shimoga

ಇದನ್ನೂ ಓದಿ » ಶಿವಮೊಗ್ಗ ಬಸ್‌ ನಿಲ್ದಾಣದಲ್ಲು ಆಟೋ ಪ್ರೀ ಪೇಯ್ಡ್‌ ಕೌಂಟರ್‌, ಯಾವಾಗ ಶುರು? ಡಿಸಿ ಏನೆಲ್ಲ ಹೇಳಿದರು?

ಸೈಯದ್ ಬರ್ಕತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment